Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇನ್ನೆರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಪವರ್ ಕಟ್

| Updated By: ಸುಷ್ಮಾ ಚಕ್ರೆ

Updated on: Jul 27, 2022 | 8:06 AM

Bangalore News: ಬೆಸ್ಕಾಂ ಈಗ ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಿಂದ ಬೆಂಗಳೂರಿನಲ್ಲಿ ದಿನವಿಡೀ ವಿದ್ಯುತ್ ಕಡಿತವಾಗಬಹುದು.

Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇನ್ನೆರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಪವರ್ ಕಟ್
ಪವರ್ ಕಟ್
Follow us on

ಬೆಂಗಳೂರು: ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ಇಂದು (ಜುಲೈ 27) ಸಿಲಿಕಾನ್ ಸಿಟಿಯ ಹಲವು ಏರಿಯಾಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೇಬಲ್‌ಗಳ ಚಾರ್ಜಿಂಗ್, ಮರದ ಟ್ರಿಮ್ಮಿಂಗ್ ಮುಂತಾದ ನಿರ್ವಹಣಾ ಕಾರ್ಯಗಳಿಂದ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಇಂದು ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಮಾತ್ರ ವಿದ್ಯುತ್ ಪೂರೈಕೆ ಮೇಲೆ ಪರಿಣಾಮ ಬೀರಲಿದೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಮುದ್ದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್ ಇತ್ಯಾದಿ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ. ಇಂದು ವೈಟ್‌ಫೀಲ್ಡ್ ಮುಖ್ಯರಸ್ತೆ, ಕೊಂಡಪ್ಪ ಲೇಔಟ್, ಅಯ್ಯಪ್ಪನಗರ 1ರಿಂದ 4ನೇ ಬ್ಲಾಕ್, ಚಿಕ್ಕದೇವಸಂದ್ರ ಮುಖ್ಯರಸ್ತೆ, ಮೇಡಿಹಳ್ಳಿ, ಕುರದೂರು, ಸೊನ್ನನೇಹಳ್ಳಿ ರಸ್ತೆ, ಉಜ್ವಲ್ ಲೇಔಟ್, ಅಜಿತ್ ಲೇಔಟ್, ಅಯ್ಯಪ್ಪನಗರ ಮುಖ್ಯರಸ್ತೆ, ಆಲ್ಫಾ ಗಾರ್ಡನ್ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ. ಬೇತಾಳನಗರ, ಸಾಯಿಬಾಬಾ ಲೇಔಟ್, ಗಾಯತ್ರಿ ಲೇಔಟ್, ವಿಜಯಾ ಬ್ಯಾಂಕ್ ಕಾಲೋನಿ, ಬಸಪ್ಪ ಲೇಔಟ್, ಪೋಸ್ಟ್ ಆಫೀಸ್ ಲೇಔಟ್ ಮುಂತಾದೆಡೆ ಇಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ನಡುವೆ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Power Cut: ಜುಲೈ 28ರ ವರೆಗೆ ಬೆಂಗಳೂರಿನ ಹಲವೆಡೆ ವಿದ್ಯುತ್ ಕಡಿತ

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಅನ್ನಪೂರ್ಣ ಲೇಔಟ್, ಕೃಷ್ಣ ಗಾರ್ಡನ್, ಎಸ್‌ಐಆರ್ ಎಂವಿ 1ನೇ ಬ್ಲಾಕ್, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಗಾಂಧಿ ಪಾರ್ಕ್ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ.

ಇಂದು ಬಾಣಸವಾಡಿ ಮುಖ್ಯರಸ್ತೆ, ತ್ಯಾಗರಾಜ್ ಲೇಔಟ್, ಮುದ್ದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ್ ನರ್ಸಿಂಗ್ ಹೋಮ್, ಪೋಸ್ಟ್ ಆಫೀಸ್ ರಸ್ತೆ, ವೆಂಕಟರಮಣ ಲೇಔಟ್ , MSO ಕಾಲೋನಿ, MEG ಆಫೀಸರ್ಸ್ ಕಾಲೋನಿ ಮತ್ತು ಪ್ರಣವ್ ಡಯಾಗ್ನೋಸ್ಟಿಕ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರೆಗೆ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆ, ಅನ್ನಪೂರ್ಣ ಲೇಔಟ್, ಕೋನಸಂದ್ರ, ಬಿಎಚ್‌ಇಎಲ್ ಲೇಔಟ್, ಕೃಷ್ಣ ಗಾರ್ಡನ್, ಎಸ್‌ಐಆರ್ ಎಂವಿ 1ನೇ ಬ್ಲಾಕ್, ಉತ್ತರಹಳ್ಳಿ ರಸ್ತೆ, ಕೋನ್‌ಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಗಾಂಧಿ ಪಾರ್ಕ್ – 1, ಡಿ ಗ್ರೂಪ್ ಎಲ್/ಓ, ಪಾರ್ಕ್ ಹತ್ತಿರ 1ನೇ ಬ್ಲಾಕ್, ವಿದ್ಯಾಮಾನ್ಯ ನಗರ, ಅನುಪಮಾ ಶಾಲಾ ರಸ್ತೆ, ಮುನೇಶ್ವರ ರಸ್ತೆ ಮತ್ತು ಪೀಣ್ಯ 2ನೇ ಹಂತದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.

ಇದನ್ನೂ ಓದಿ: Bengaluru Power Cut: ಈ ವಾರಾಂತ್ಯದಲ್ಲಿ ಅರ್ಧ ಬೆಂಗಳೂರಿಗೆ ಕರೆಂಟ್ ಇರಲ್ಲ

ನಾಳೆ (ಗುರುವಾರ) ನಾಗದೇವಿ ಇಂಡಸ್ಟ್ರೀಸ್, ಎಚ್‌ಆರ್‌ಬಿಆರ್ 3 ನೇ ಬ್ಲಾಕ್, ನೆಹರು ರಸ್ತೆ, ಮಂಗಳಾ ಲೇಔಟ್, ಆಯಿಲ್ ಮಿಲ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪವರ್‌ಕಟ್ ಉಂಟಾಗುವ ಸಾಧ್ಯತೆಯಿದೆ. ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ನಡುವೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಸ್ಕಾಂ ಈಗ ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಇದರಿಂದ ದಿನವಿಡೀ ವಿದ್ಯುತ್ ಕಡಿತವಾಗಬಹುದು. ಬೆಂಗಳೂರಿನಲ್ಲಿ ಸುಮಾರು 2,500 ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸುವ ಗುರಿಯನ್ನು ಬೆಸ್ಕಾಂ ಅಧಿಕಾರಿಗಳು ಹೊಂದಿದ್ದು, ಇದರಿಂದ ವಿದ್ಯುತ್ ಪೂರೈಕೆಗೆ ಅಡ್ಡಿಯಾಗಬಹುದು.

Published On - 8:05 am, Wed, 27 July 22