ಅಪ್ರಾಪ್ತೆಯ ಮೇಲೆ ಚರ್ಚ್ನಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ; ಆರೋಪಿಗಾಗಿ ಶೋಧ
ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಚರ್ಚ್ನಲ್ಲಿ ಲೈಂಗಿಕ ದೌರ್ಜನ್ಯವೆಸಗಿರುವ ಅತ್ಯಾಚಾರ ಆರೋಪ ಕೇಳಿಬಂದಿದೆ.
ಬೆಂಗಳೂರು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲೆ ನಿರಂತರವಾಗಿ ಚರ್ಚ್ನಲ್ಲಿ ಲೈಂಗಿಕ ದೌರ್ಜನ್ಯವೆಸಗಿರುವ ಅತ್ಯಾಚಾರ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ ದೂರಿನ ಹಿನ್ನೆಲೆ ಕೃತ್ಯ ಎಸಗಿದ ಚರ್ಚ್ನ 8 ಜನ ಸಿಬ್ಬಂದಿಗಳ ವಿರುದ್ದ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿನ ಚರ್ಚ್ನಲ್ಲಿ ವಿದ್ಯಾರ್ಥಿನಿ 10 ವರ್ಷದವಳಾಗಿದ್ದಾಗಿನಿಂದ 2006 ರಿಂದ 2016 ರವರೆಗೆ ನಿರಂತರ ದೌರ್ಜನ್ಯ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ಮೂವರು ಆರೋಪಿಗಳಿಂದ ಕೃತ್ಯ, ಕೃತ್ಯಕ್ಕೆ ಸಹಕರಿಸಿದ ನಾಲ್ವರು ಆರೋಪಿಗಳು ಸೇರಿ ಒಟ್ಟು 8 ಜನರ ವಿರುದ್ದ ಎಫ್ ಐಆರ್ ದಾಖಲಾಗಿದೆ.
Published On - 10:20 pm, Tue, 26 July 22