Karnataka Congress Press Meet: ರಾಜ್ಯ ಸರ್ಕಾರದ್ದು ಒಂದು ವರ್ಷ ಸಾಧನಾ ಜನೋತ್ಸವವಲ್ಲ, ಬಿಜೆಪಿಯ ಭ್ರಷ್ಟೋತ್ಸವ -ಡಿಕೆ ಶಿವಕುಮಾರ್ ಕಟು ಟೀಕೆ
ಒಂದು ವರ್ಷದ ಸಾಧನಾ ಸಮಾವೇಶ ಅಲ್ಲ, ಇದು ಬಿಜೆಪಿಯ ಭ್ರಷ್ಟೋತ್ಸವ. ನಿಮ್ಮ ಅಧಿಕಾರ ಬಂದ ದಿನದಿಂದ ಭ್ರಷ್ಟಾಚಾರ ತಾಂಡವವಾಡ್ತಿದೆ. ಬೆಂಗಳೂರು ಹಾಗೂ ರಾಜ್ಯ ಕರೆಪ್ಷನ್ ಕ್ಯಾಪಿಟಲ್ ಅಫ್ ಇಂಡಿಯಾ ಆಗಿದೆ. ಇದು ನಿಮ್ಮ ಸಾಧನೆ ಎಂದು ಡಿಕೆ ಶಿವಕುಮಾರ್ ಟೀಕೆ ಮಾಡಿದ್ದಾರೆ.
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನಾ ಜನೋತ್ಸವದ ವಿರುದ್ಧ ಗುಡುಗಿದ್ದಾರೆ. ಕರ್ನಾಟಕ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶ ಮಾಡ್ತಿದೆ. ಅದನ್ನು ನಾವು ಜನೋತ್ಸವ ಅನ್ನಲ್ಲ, ಬಿಜೆಪಿಯ ಭ್ರಷ್ಟೋತ್ಸವ ಎನ್ನುತ್ತೇವೆ. ರಾಜ್ಯದ ಜನತೆಯನ್ನು ಸೆಳೆಯುತ್ತಿದ್ದಾರೆ. ಸರ್ಕಾರ ಬಂದು ನಾಲ್ಕು ವರ್ಷ ಆಯ್ತು. ನಾಲ್ಕು ವರ್ಷದ ಸಾಧನೆಯೇ ನಿಮ್ಮ ಭ್ರಷ್ಟೋತ್ಸವ. ಒಂದು ವರ್ಷದ ಸಾಧನಾ ಸಮಾವೇಶ ಅಲ್ಲ, ಇದು ಬಿಜೆಪಿಯ ಭ್ರಷ್ಟೋತ್ಸವ. ನಿಮ್ಮ ಅಧಿಕಾರ ಬಂದ ದಿನದಿಂದ ಭ್ರಷ್ಟಾಚಾರ ತಾಂಡವವಾಡ್ತಿದೆ. ಬೆಂಗಳೂರು ಹಾಗೂ ರಾಜ್ಯ ಕರೆಪ್ಷನ್ ಕ್ಯಾಪಿಟಲ್ ಅಫ್ ಇಂಡಿಯಾ ಆಗಿದೆ. ಇದು ನಿಮ್ಮ ಸಾಧನೆ ಎಂದು ಡಿಕೆ ಶಿವಕುಮಾರ್ ಟೀಕೆ ಮಾಡಿದ್ದಾರೆ.
ಎಲ್ಲಾ ಸರ್ಕಾರಿ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಇದು ರಾಜ್ಯ ಸರ್ಕಾರದ ಸಾಧನೆ. ಹಾಲು, ಮೊಸರಿಗೆ ಜಿಎಸ್‌ಟಿ ಹಾಕಿ ಹೊಸ ಇತಿಹಾಸ ಬರೆದಿದ್ದೀರಿ. ರೈತರು ಸೇರಿದಂತೆ ರಾಜ್ಯಸರ್ಕಾರ ಯಾರಿಗೂ ಸಹಾಯ ಮಾಡಿಲ್ಲ. ಭ್ರಷ್ಟರಿಗೆ ಕ್ಲೀನ್‌ಚಿಟ್ ಕೊಡಿಸುವುದರಲ್ಲೇ ಸರ್ಕಾರ ನಿರತವಾಗಿದೆ. ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ ಏಕೆ ನ್ಯಾಯ ಕೊಡಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಬಿಜೆಪಿ ಭ್ರಷ್ಟಚಾರದ ಒಂದೊಂದೇ ಪಟ್ಟಿಯನ್ನು ಬಿಚ್ಚಿಟ್ಟಿದೆ.
ಇಡೀ ದೇಶದಲ್ಲಿ ಬಿಜೆಪಿ ಏನಾದರೂ ಸಾಧನೆ ಮಾಡಿದ್ದಾರೆ ಅನ್ನೋದಾದರೆ, ಪ್ರಧಾನಿ, ಅಧ್ಯಕ್ಷರು ಬೆನ್ನು ತಟ್ಟಿ ಹಾಡಿ ಹೊಗಳಿ ಹೋಗ್ತಿದ್ರು. ನೀವು ಯಾರಿಗೆ ಸಹಾಯ ಮಾಡಿದ್ದೀರಿ ಹೇಳಿ ಯಾವ ರೈತರ ಆದಾಯ ಡಬಲ್ ಆಯ್ತು? ಬೆಳೆದ ಪದಾರ್ಥ ಡಬಲ್ ಆಯ್ತು ಅಷ್ಟೇ. ಯಾವುದರಲ್ಲೂ ರೈತರಿಗೆ ಡಬಲ್ ಆದಾಯ ಆಗಿಲ್ಲ. ಆದರೆ ಅವರು ತಗೋಬೇಕಾದ ರಸಗೊಬ್ಬರ ಬೀಜ ಇದೆಲ್ಲ ಡಬಲ್ ಆಯ್ತು. ಈಗ ನೀವು ಹಾಲು, ಮೊಸರು ಎಲ್ಲದಕ್ಕೂ ಜಿಎಸ್ಟಿ ಹಾಕಿ ಹೊಸ ಇತಿಹಾಸ ಬರೆದುಬಿಟ್ಟಿರಿ.
ಹೆಣದ ಮೇಲೂ ದುಡ್ಡು ಮಾಡಿಕೊಂಡ್ರಿ -ಡಿಕೆಶಿ ಕಿಡಿ
ಕೊರೊನಾ ಸಂದರ್ಭದಲ್ಲಿ 21 ಲಕ್ಷ ಕೋಟಿ ಕೊಟ್ಟಿದ್ದೀರಿ ಅಂತ ಸೀತಾರಾಮನ್ ಹೇಳಿದಿರಲ್ಲ. ಯಾರಿಗೆ ಸಿಕ್ಕಿದೆ ಹೇಳಿ? ಬೆಡ್ ಸ್ಕ್ಯಾಮ್ ಇಡೀ ದೇಶಕ್ಕೆ ಪರಿಚಯ ಆಗೋಯ್ತು. ಪಿಪಿಇ ಕಿಟ್, ಹೆಣದ ಮೇಲೂ ದುಡ್ಡು ಮಾಡಿಕೊಂಡ್ರಿ. ಕೊವಿಡ್‌ನಿಂದ ಮೃತಪಟ್ಟವರಿಗೆ ಸರ್ಕಾರ ಪರಿಹಾರವೇ ಕೊಟ್ಟಿಲ್ಲ. ಇದು ನಿಮ್ಮ ಸಾಧನೆನಾ. ಪೊಲೀಸರು, ಎಜುಕೇಷನ್ ಡಿಪಾರ್ಟ್ಮೆಂಟ್, ಕೆಪಿಎಸ್ಸಿ, ಅಧ್ಯಾಪಕರ ನೇಮಕಾತಿ ಎಲ್ಲದರಲ್ಲೂ ಭ್ರಷ್ಟಾಚಾರ ತಾಂಡವವಾಡಿ ನೂರಾರು ಜನರನ್ನು ಬಂಧಿಸಿದ್ದೀರಿ. ನಮ್ಮ ನಾಯಕರು ಈ ಬಗ್ಗೆ ಗಮನ ಸೆಳೆದಾಗ ಏನೂ ಆಗಿಲ್ಲ ಅಂದವರು ಕೊನೆಗೆ ನೂರಾರು ಜನರನ್ನು ಬಂಧಿಸಿದ್ದೀರಿ. ತನಿಖೆಗೆ ಟೈಂ ಬೇಕು ದೊಡ್ಡ ದೊಡ್ಡ ಕುಳಗಳೆಲ್ಲ ಇದಾರೆ, ದೊಡ್ಡ ದೊಡ್ಡ ರಾಜಕಾರಣಿಗಳೆಲ್ಲ ಇದಾರೆ ಅಂತ ಪೊಲೀಸರು ಅಫಿಡವಿಟ್ ಹಾಕಿದ್ದಾರೆ. ಯಾರು ಬೆಂಬಲದಿಂದ ಅರೆಸ್ಟ್ ಆದರೋ ಅವರನ್ನು ವಾಪಸ್ ಕಳಿಸಿದ್ರಿ? ದಡಬಡದಡಬಡನೇ ಕೇಸ್ ಹಾಕಿದ್ರಲ್ಲ ಅವರನ್ನೇನಾದರು ಮಂಪರು ಪರೀಕ್ಷೆ ಮಾಡಲಿಲ್ಲ? ಕೆಂಪಣ್ಣನ ಕರೆದು ಯಾಕೆ ತನಿಖೆ ಮಾಡಲಿಲ್ಲ. ಸಂತೋಷ್ ಪಾಟೀಲ್ ಕುಟುಂಬಕ್ಕೆ ಯಾಕೆ ನ್ಯಾಯ ಕೊಡಲಿಲ್ಲ. ತನಿಖೆ ಆಗುವ ಮೊದಲೇ ಸಿಎಂ, ಅಧ್ಯಕ್ಷರು, ಯಡಿಯೂರಪ್ಪ, ಹೋಂ ಮಿನಿಸ್ಟರ್ ಕ್ಲಿನ್ ಚಿಟ್ ಕೊಡ್ತಾರೆ ಅಂದ್ರೆ ಪೊಲೀಸರು ಏನ್ರೀ ತನಿಖೆ ಮಾಡ್ತಾರೆ? ಸರ್ಕಾರ ಕ್ಲೀನ್ ಚಿಟ್ ಕೊಡಿಸುವುದರಲ್ಲೇ ಕಳೆದಿದೆ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ
ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಂಗಳೂರಿನಲ್ಲಿ ಮತ್ತೆ ಪಬ್ ಮೇಲೆ ದಾಳಿ ನಡೆದಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಏಕೆ ಮಧ್ಯಪ್ರವೇಶ ಮಾಡುತ್ತೀರಿ? ಪೊಲೀಸರು ಸಮವಸ್ತ್ರ ಬಿಚ್ಚಿಹಾಕಿ ಕೇಸರಿ ಹಾಕಿ ಕುಳಿತಿದ್ದಾರೆ. ಪಬ್ ಮೇಲೆ ದಾಳಿ ಮಾಡಿದವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಭ್ರಷ್ಟಾಚಾರವನ್ನು ಮುಚ್ಚಿಹಾಕುವ ತಂಡ ಈ ಸರ್ಕಾರವೆಂದು ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಶಿಕ್ಷಣದಲ್ಲಿ ಅಂಬೇಡ್ಕರ್, ಕೆಂಪೇಗೌಡ, ನಾರಾಯಣಗುರು, ಬಸವಣ್ಣ, ಶಂಕರಾಚಾರ್ಯ ಯಾರನ್ನೂ ಬಿಡಲಿಲ್ಲ ನೀವು. ಎಲ್ಲರಿಗೂ ಅವಮಾನ ಮಾಡಿದ್ದೀರಿ. ಅವರ ಮನಸ್ಸಿಗೆ ಏಟು ಕೊಡಬೇಕಾಗಿಲ್ಲ. ಸಿದ್ದಾಂತವನ್ನು ಒಡೆದು ಅವರ ಹೃದಯಕ್ಕೆ ದೊಡ್ಡ ಏಟು ಮಾಡಿದ್ದೀರಿ. ಇಡೀ ವಿಶ್ವ ನಮ್ಮನ್ನು ನೋಡ್ತಾ ಇತ್ತು. ಇಲ್ಲಿ ಬಂಡವಾಳ ಹೂಡಬೇಕು ಅಂತ ಇತ್ತು. ಆದ್ರೆ ಈಗ ಯಾರು ನಿಮ್ಮ ರಿಪೋರ್ಟ್ ನೋಡಿ ಬಂಡವಾಳ ಹೂಡ್ತಾರೆ. ಇದೇ ನಿಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಎಂದು ಗರಂ ಆಗಿದ್ದಾರೆ.
ಇನ್ನು ಮತ್ತೊಂದು ಕಡೆ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು, ಜುಲೈ 28ರಂದು ಸರ್ಕಾರ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಆದ್ರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಆಗುತ್ತಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ನಮಗೆಲ್ಲಾ ಭರವಸೆ ಇತ್ತು. ಬೊಮ್ಮಾಯಿ ಆಡಳಿತ ನೋಡಿದ್ರೆ ಸಂಪೂರ್ಣ ಭ್ರಮನಿರಸನವಾಗಿದೆ. ಬೊಮ್ಮಾಯಿ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕರ್ನಾಟಕದಲ್ಲಿ 40% ಕಮಿಷನ್ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಸಚಿವ ಈಶ್ವರಪ್ಪ ವಿರುದ್ಧ ಆರೋಪಿಸಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಸರ್ಕಾರ ಕೆ.ಎಸ್.ಈಶ್ವರಪ್ಪಗೆ ಕ್ಲೀನ್‌ಚಿಟ್ ಕೊಡಿಸಿದೆ. ಡಿಕ್ಲರೇಷನ್ ಇರುವ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. 40% ಕಮಿಷನ್ ಸಂಭ್ರಮಾಚರಣೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ರೂ ರಾಜ್ಯದ ಪಾಲು ನೀಡುತ್ತಿಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ಹಣ ನೀಡುತ್ತಿಲ್ಲ. ಆದ್ರೂ ರಾಜ್ಯ ಸರ್ಕಾರ, ಸಿಎಂ ಬೊಮ್ಮಾಯಿ ಸುಮ್ಮನಿದ್ದಾರೆ. ಜಿಎಸ್‌ಟಿ ಪರಿಹಾರ ಹಣ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗ್ತಿದೆ. ಇದ್ಕಕಾಗಿ ನೀವು ಸಂಭ್ರಮಾಚರಣೆ ಮಾಡುತ್ತೀರಾ? ಮಂಡಕ್ಕಿ ಮೇಲೆ ಯಾರಾದ್ರೂ ತೆರಿಗೆ ಹಾಕ್ತಾರಾ?ಬಡವರ ರಕ್ತ ಕುಡಿಯುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಜಿಎಸ್‌ಟಿ ಹಾಕಿದ್ದರಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಕೇಂದ್ರಸರ್ಕಾರ ಹಾಗೂ ಸಿಎಂ ಬೊಮ್ಮಾಯಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Published On - 5:17 pm, Tue, 26 July 22