
ಬೆಂಗಳೂರು, ಜುಲೈ 23: ಭೈರಸಂದ್ರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇಂದು (ಜು.23ರಂದು) ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (power cut). 66/11 ಬ್ರಿಗೇಡ್ ಮೆಡೋಸ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈ ಕುರಿತಾಗಿ ಬೆಸ್ಕಾಂ (BESCOM) ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಭೈರಸಂದ್ರ, ಹೊಸಪಾಳ್ಯ, ಎಂ.ಎಲ್.ಎ ತೋಟ, ಬಂಜಾರಪಾಳ್ಯ, ಅಗರ, ಕರಡಿಗುಡ್ಡ, ಸಿದ್ದನಪಾಳ್ಯ, ಅಭಯ ಕಾಲೇಜ್, ವ್ಯಾಲಿ ಸ್ಕೂಲ್, ನವಿಲು ಮನೆ, ಸಾಲುದೊಡ್ಡಿ, ತಾತಗುಣಿ ಕಾಲೋನಿ, ಲಕ್ಷ್ಮೀಪುರ, ಸಾಲುದೊಡ್ಡಿ ಗೇಟ್, ನವಗ್ರಾಮ, ವಡೇರಹಳ್ಳಿ, ಚೌಡೇಶ್ವರಿ ನಗರ, ತಾತ ಗುಣಿ, ರಾಮಚಂದ್ರಪ್ಪ ಲೇಔಟ್, ಕಾವೇರಿ ನಗರ, ರಮೇಶ್ ನಗರ, ಸಾಲುಹುಣಸೆ.
ಬಾದೇಕಟ್ಟೆ, ಉತ್ತರಿ, ತಿಮ್ಮೇಗೌಡನಪಾಳ್ಯ, ದಿಣ್ಣೆಪಾಳ್ಯ, ಊದಿಪಾಳ್ಯ, ಬಸಪ್ಪನ ಪಾಳ್ಯ, ಬಿ.ಎಂ. ಕಾವಲ್, ಓ.ಬಿ. ಚೂಡಹಳ್ಳಿ, ಮಂತ್ರಿ ಪ್ರಿಮೈಸ್, ಬ್ರಿಗೇಡ್ ಮೆಡೋಸ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ನಗರಗಳಲ್ಲಿ ಒಂದು ವಾರ ವಿದ್ಯುತ್ ವ್ಯತ್ಯಯ, ಇಲ್ಲಿದೆ ಮಾಹಿತಿ
ಇದೇ ರೀತಿಯಾಗಿ 66 ಕೆ.ವಿ ಕನಕಪುರ ಟಿ.ಕೆ. ಹಳ್ಳಿಯ ಲೈನ್-3ರ 66/11 ಕೆ.ವಿ ಅಚ್ಚಲು ಮತ್ತು ಹೊನ್ನಿಗನಹಳ್ಳಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೂಡ ಕಾಮಗಾರಿ ನಡೆಯಲಿದೆ. ಈ ನಿಟ್ಟಿನಲ್ಲಿ ಹೊನ್ನಿ-ಗನಹಳ್ಳಿ, ಸಾತನೂರು, ಕಾಡಹಳ್ಳಿ, ಬೊಮ್ಮನಹಳ್ಳಿ, ಅರೆಕಟ್ಟೆ-ದೊಡ್ಡಿ, ತೋಟಹಳ್ಳಿ ಮತ್ತು ಅಚ್ಚಲು ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ 4ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಕನಕಪುರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.