Bangalore Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್​ ವ್ಯತ್ಯಯ

|

Updated on: Nov 20, 2024 | 7:50 AM

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನವೆಂಬರ್ 20 ರಂದು ವಿದ್ಯುತ್ ಕಡಿತವಾಗಲಿದೆ. ಆಸ್ಟಿನ್ ಟೌನ್ ಮತ್ತು ಶೋಭಾ ಇಂದ್ರಪ್ರಸ್ಥ ಉಪಕೇಂದ್ರಗಳಲ್ಲಿ ನಡೆಯುವ ತುರ್ತು ನಿರ್ವಹಣಾ ಕಾರ್ಯಗಳಿಂದಾಗಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ (ಆಸ್ಟಿನ್ ಟೌನ್) ಮತ್ತು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ (ಶೋಭಾ ಇಂದ್ರಪ್ರಸ್ಥ) ವಿದ್ಯುತ್ ಕಡಿತವಾಗಲಿದೆ.

Bangalore Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್​ ವ್ಯತ್ಯಯ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ನವೆಂಬರ್​ 20: ಬೆಂಗಳೂರು (Bengaluru) ನಗರದ ಹಲವು ಪ್ರದೇಶಗಳಲ್ಲಿ ಇಂದು (ನ.20) ವಿದ್ಯುತ್​ ವ್ಯತ್ಯಯವಾಗಲಿದೆ (Power Cut). ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಆಸ್ಟಿನ್ ಟೌನ್‌ನ ವಿದ್ಯುತ್‌ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳುವುದರಿಂದ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೇಂದ್ರದ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್​ ವೃತ್ಯಯವಾಗುವ ಸ್ಥಳಗಳು

ಬ್ರಂಟನ್ ರಸ್ತೆ, ಶೋಭಾ ಪರ್ಲ್, ಐಸಿಐಸಿ ಬ್ಯಾಂಕ್​, ಎಂಬೆಸ್ಸಿ ಹೈಟ್ಸ್, ಆಭರಣ್ ಜ್ಯೂವೆಲರ್ಸ್. ಹರ್ಬನ್ ಲೈಫ್, ಆರ್‌ಎಂಝಡ್, ಅಶೋಕ್ ನಗರ, ಗರುಡ ಮಾಲ್, ದೊಮ್ಮಲೂರು, ಆಸ್ಪಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಾಜ್ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಅಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈ.ಜಿ.ಪಾಳ್ಯ, ಕೆಎಸ್​ಆರ್​ಪಿ, ಐಟಿಸಿ ಹೋಟೆಲ್​, ರಿಚ್ಮಂಡ್‌ ರಸ್ತೆ, ವನ್ನಾರ್‌ಪೇಟೆ, ಎಂ.ಜಿ.ರಸ್ತೆ, ಹೇಯ್ ರಸ್ತೆ, ಕಾನ್ವೆಂಟ್ ರಸ್ತೆ, ಎಸ್.ಎಲ್. ಅಪಾರ್ಟ್‌ಮೆಂಟ್, ರಿಚ್ಚಂಡ್ ಟೌನ್, ನಂಜಪ್ಪ ವೃತ್ತ, ಸ್ಪೇನ್ ಗಾರ್ಡನ್, ರಿಜ್‌ಮಂಡ್ ಪಾರ್ಕ್, ಲಾಂಗ್‌ಫೋರ್ಡ್ ರಸ್ತೆ, ಬ್ರೆಟ್ ಸ್ಪೀಟ್. ಫುಡ್‌ವರ್ಲ್ಡ್ ರಸ್ತೆ, ಜಾನ್ಸನ್ ಮಾರುಕಟ್ಟೆ, ಅಶೋಕನಗರ, ಮಾರ್ಕಮ್ ರಸ್ತೆ, ಬ್ರಿಗೇಡ್ ರಸ್ತೆ, ವಾಣಿಜ್ಯ ಕಾಲೇಜು, ರಿಚ್ಯಂಡ್ ವೃತ್ತ, ವಿಠಲ ಮಲ್ಕ ರಸ್ತೆ, ಸಿದ್ದಯ್ಯ ರಸ್ತೆ, ವುಡ್‌ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ, ಬಿಎಂಆರ್‌ಸಿಎಲ್ ಸುತ್ತಮುತ್ತಲಿನ ಪ್ರದೇಶಗಲ್ಲಿ ವಿದ್ಯುತ್​​ ಕಡಿತವಾಗಲಿದೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ ಇನ್ಮುಂದೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ, ಯು ಟರ್ನ್ ಕಟ್​​​

ಟ್ವಿಟರ್​ ಪೋಸ್ಟ್​

ಸಂಜೆ 5ರವರೆಗೆ ವ್ಯತ್ಯಯ

ಶೋಭಾ ಇಂದ್ರಪ್ರಸ್ಥ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವಿರುವುದರಿಂದ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಗ್ಲೋಬಲ್ ಮಾಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:34 am, Wed, 20 November 24