ಬೇರೆಯವರಿಗೆ ಬೈಕ್, ಕಾರು ಕೊಡುವ ಮುನ್ನ ಎಚ್ಚರ: ಅವರು ಈ ತಪ್ಪು ಮಾಡಿದ್ರೆ ನಿಮ್ಮ ಮೇಲೂ ಬೀಳುತ್ತೆ ಎಫ್​ಐಆರ್

ಸ್ನೇಹಿತರು, ಪರಿಚಿತರು ನಿಮ್ಮ ಬೈಕ್ ಅಥವಾ ಕಾರು ಕೊಡಿ ಎಂದು ಕೇಳಿದರೆಂದು ಹಿಂದೆಮುಂದೆ ಯೋಚಿಸದೆ ಮುಲಾಜಿಗೆ ಬಿದ್ದು ಕೊಡುವ ಮುನ್ನ ಎಚ್ಚರ. ಬೆಂಗಳೂರು ಟ್ರಾಫಿಕ್ ಪೊಲೀಸರು ಕೆಲವೊಂದು ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅದೊಂದು ತಪ್ಪು ಮಾಡಿ ಸಿಕ್ಕಿಬಿದ್ದರೆ ಯಾರು ವಾಹನ ಚಲಾಯಿಸುತ್ತಿದ್ದರೋ ಅವರ ಮೇಲೆ ಮಾತ್ರವಲ್ಲದೆ, ವಾಹನ ಮಾಲೀಕರ ಮೇಲೂ ಎಫ್​ಐಆರ್ ದಾಖಲಿಸುತ್ತಿದ್ದಾರೆ.

ಬೇರೆಯವರಿಗೆ ಬೈಕ್, ಕಾರು ಕೊಡುವ ಮುನ್ನ ಎಚ್ಚರ: ಅವರು ಈ ತಪ್ಪು ಮಾಡಿದ್ರೆ ನಿಮ್ಮ ಮೇಲೂ ಬೀಳುತ್ತೆ ಎಫ್​ಐಆರ್
ಬೇರೆಯವರಿಗೆ ಬೈಕ್, ಕಾರು ಕೊಡುವ ಮುನ್ನ ಎಚ್ಚರ: ಅವರು ಈ ತಪ್ಪು ಮಾಡಿದ್ರೆ ನಿಮ್ಮ ಮೇಲೂ ಬೀಳುತ್ತೆ ಎಫ್​ಐಆರ್
Follow us
ರಾಚಪ್ಪಾಜಿ ನಾಯ್ಕ್
| Updated By: Ganapathi Sharma

Updated on:Nov 20, 2024 | 8:08 AM

ಬೆಂಗಳೂರು, ನವೆಂಬರ್ 20: ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇದರಿಂದ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದು, ಎಫ್ಐಆರ್ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಡಿಎಲ್ (ಚಾಲನಾ ಪರವಾನಗಿ) ಇಲ್ಲದೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ ಕಂಟಕ ಎದುರಾಗಿದೆ. ಇನ್ಮುಂದೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು ಖಾಕಿ ಕೈಗೆ ಸಿಕ್ಕರೆ ಎಫ್ಐಆರ್ ದಾಖಲಾಗುವದು ಖಚಿತವಾಗಿದೆ.

ಚಾಲಕ ಮಾತ್ರವಲ್ಲ, ಮಾಲೀಕನ ಮೇಲೂ ಕೇಸ್

ಬೆಂಗಳೂರು ನಗರದಲ್ಲಿ ಓಡಾಡುತ್ತಿರುವ ಕೋಟ್ಯಂತರ ವಾಹನ ಚಾಲಕರಲ್ಲಿ ಹಲವರ ಬಳಿ ಡ್ರೈವಿಂಗ್ ಲೈಸನ್ಸ್ ಇರುವುದೇ ಇಲ್ಲ. ಹಾಗೆಯೇ ಸುಮ್ಮನೇ ವಾಹನಗಳನ್ನು ತೆಗೆದುಕೊಂಡು ಸುತ್ತಾಡುತ್ತಿರುತ್ತಾರೆ. ಅಂಥವರಲ್ಲಿ ಕೆಲವರು ಡ್ರಂಕ್ ಆ್ಯಂಡ್ ಡ್ರೈವ್ ಮಾಡುತ್ತಿರುತ್ತಾರೆ‌. ಹೀಗೆ ಕುಡಿದು ವಾಹನ ಚಾಲನೆ ಮಾಡುವುದರಿಂದಾಗಿ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಷ್ಟು ದಿನ ಡ್ರಂಕ್ ಆ್ಯಂಡ್ ಡ್ರೈವ್​ಗೆ ದಂಡ ಮಾತ್ರ ವಿಧಿಸಲಾಗುತ್ತಿತ್ತು. ಆದರೆ, ಈಗ ಕುಡಿದು ವಾಹನ ಚಾಲನೆ ಮಾಡುವವರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದೇ ಹೋದರೆ ಎಫ್ಐಆರ್ ದಾಖಲಿಸಿ ಕೋರ್ಟ್​​​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಇನ್ಮುಂದೆ ರೈಲು ನಿಲ್ದಾಣದಲ್ಲಿ ಟಿಕೆಟ್​ಗಾಗಿ ನಿಲ್ಲಬೇಕಿಲ್ಲ ಕ್ಯೂ: ನಿಂತಿದ್ದಲ್ಲೇ ಸಿಗಲಿದೆ ಟಿಕೆಟ್!

ಕೇವಲ ವಾಹನ ಚಾಲನೆ ಮಾಡುವವರಿಗೆ ಮಾತ್ರ ಈ ಶಿಕ್ಷೆಯಲ್ಲ. ವಾಹನದ ಆರ್​​ಸಿ ಯಾರ ಹೆಸರಲ್ಲಿ‌ ಇದೆಯೋ ಅವರ ಮೇಲೂ ಕೇಸ್ ಹಾಕಲಾಗುತ್ತಿದೆ. ಸದ್ಯ ಈ ಪ್ರಕ್ರಿಯೆ ಬೆಂಗಳೂರಲ್ಲಿ ಶುರುವಾಗಿದ್ದು, ಪ್ರತಿ ದಿನ ಹತ್ತಾರು ಎಫ್ಐಆರ್ ದಾಖಲಾಗುತ್ತಿವೆ.

ಹೀಗಾಗಿ ವಾಹನ‌ ಮಾಲೀಕರು ಹುಷಾರಾಗಿಲ್ಲದಿದ್ದರೆ ಕಷ್ಟವಿದೆ. ಸ್ನೇಹಿತರು, ಸಂಬಂಧಿಕರು, ಪರಿಚಯದವರು ಕೇಳಿದರೆಂದು ಹಿಂದೆಮುಂದೆ ವಿಚಾರಿಸದೆ ವಾಹನ ಕೊಟ್ಟರೆ ನಾಳೆ ಕೋರ್ಟ್​ಗೆ ಅಲೆಯಬೇಕಾಗಬಹುದು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Wed, 20 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ