ಬೆಂಗಳೂರಿಗರನ್ನು ಗಡ ಗಡ ನಡುಗಿಸುತ್ತಿರುವ ಚಳಿ: ಮುಂದಿನ ವಾರ ಇನ್ನಷ್ಟು ಏರಿಕೆ!

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬೆಳಿಗ್ಗೆ, ಸಂಜೆಯಾದ್ರೆ ಸಾಕು ಚುಮು ಚುಮು ಚಳಿ ಹೆಚ್ಚಾಗಿದ್ದು. ಎಲ್ಲಿ ನೋಡಿದ್ರು ಸ್ವೆಟರ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ‌‌‌. ಹಾಗಾದರೆ, ಈ ಬಾರಿಯ ಚಳಿಗಾಲ ಹೇಗಿರುತ್ತೆ ಅಂತೀರಾ ಈ ಸ್ಟೋರಿ ನೋಡಿ.

ಬೆಂಗಳೂರಿಗರನ್ನು  ಗಡ ಗಡ ನಡುಗಿಸುತ್ತಿರುವ ಚಳಿ: ಮುಂದಿನ ವಾರ ಇನ್ನಷ್ಟು ಏರಿಕೆ!
ಪ್ರಾತಿನಿಧಿಕ ಚಿತ್ರ
Follow us
Vinayak Hanamant Gurav
| Updated By: ರಮೇಶ್ ಬಿ. ಜವಳಗೇರಾ

Updated on: Nov 19, 2024 | 8:36 PM

ಬೆಂಗಳೂರು, (ನವೆಂಬರ್ 19): ಸಿಲಿಕಾನ್ ಸಿಟಿಯಲ್ಲಿ ನಾಲ್ಕೈದು ದಿನಗಳಿಂದ ವಿಪರೀತ ಚಳಿಯ ಅನುಭವ ಆಗುತ್ತಿದ್ದು, ಇಡೀ ದೇಹ ಗಡ ಗಡ ನಡುಗುವಂತಹ ಸ್ಥಿತಿ ಬಂದಿದೆ. ಊಟಿಯ ರೀತಿಯಲ್ಲಿ ಬೆಂಗಳೂರು ಬದಲಾಗ್ತಿದೆ. ಸಾಮಾನ್ಯವಾಗಿ ನವೆಂಬರ್ ಕೊನೆವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಶುರುವಾಗಿ ಶಿವರಾತ್ರಿ ಅಂದ್ರೆ ಫೆಬ್ರವರಿವರೆಗೂ ಚಳಿಯ ಅನುಭವವಿರುತ್ತದೆ. ಆದರೆ ಈ ಬಾರಿ ಸತತವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹವಾಮಾನ ಪರಿಸ್ಥಿತಿ ಬದಲಾಗಿದ್ದು, ಈ ಬಾರಿ ಅಧಿಕ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನೂ ಈ ಪರಿಸ್ಥಿತಿಗೆ ಮುಖ್ಯ ಕಾರಣ ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶವು ಕಡಿಮೆ ಇರಲಿದ್ದು, ಇದಕ್ಕೆ ಲಾ-ನಿನ್ ಪರಿಸ್ಥಿತಿ ಎಂದು ಕರೆಯುತ್ತಾರೆ. ಈ ಲಾ-ನಿನ್ ಪರಿಸ್ಥಿತಿಯಿಂದ ಚಳಿಗಾಲವು ಮಾರ್ಚ್ ವರೆಗೂ ಮುಂದುವರೆಯುತ್ತದೆ. ಜೊತೆಗೆ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ 8ರಿಂದ 10ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಹಾಗೂ ಬೆಂಗಳೂರಲ್ಲಿ 12ರಿಂದ 14ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಇನ್ನೂ ಚಳಿಗಾಲ ಆರಂಭಕ್ಕೂ ಮುನ್ನವೇ ಚಳಿ ಹೆಚ್ಚಾಗಿದ್ದು, ವಾತಾವರಣ ಬದಲಾವಣೆಯಿಂದ ನಮ್ ಬೆಂಗಳೂರು ಮಂದಿ ಈಗಾಗಲೇ ಸ್ವೆಟರ್, ಸ್ಕಾರ್ಫ್, ಮಪ್ಲರ್, ಜರ್ಕಿನ್ ಹಾಗೂ ದೊಡ್ಡ ದೊಡ್ಡ ಕಂಬಳಿಯ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಮಾರ್ಕೆಟ್‌ಗೆ ಸ್ವೇಟರ್ ಗಳು ಲಗ್ಗೆ ಇಟ್ಟಿವೆ. ಈ ಬಾರಿ ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8ಗಂಟೆಯವರೆಗೂ ಶೀತದ ವಾತವರಣ ಇರುತ್ತಿರುವುದಿರಿಂದ ಶೀತ -ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉಸಿರಾಟ, ಎಲುಬು ಕೀಲು ನೋವು ಇರುವವರು ಆದಷ್ಟು ಬೆಚ್ಚಗೆ ಇರುವಂತೆ ಮತ್ತು ಚಳಿಗಾಲ ಮುಗಿಯೋ ವರೆಗೆ ಉಗುರು ಬೆಚ್ಚಗಿನ ನೀರು ಬಿಸಿ ಆಹಾರ ಸೇವಿಸುವಂತೆ ಹವಾಮಾನ ಇಲಾಖೆ ತಜ್ಞರು ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಈ ಬಾರಿ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಿಸಿಲು, ಮಳೆಗಾಲದಲ್ಲಿ ಹೆಚ್ಚಾಗಿ ಮಳೆ ಹಾಗೂ ಇದೀಗ ಚಳಿಗಾಲ ಆರಂಭಕ್ಕೂ ಮುನ್ನ ಚಳಿ ಶುರುವಾಗಿದ್ದು, ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಸೂಕ್ತ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್