ಬೆಂಗಳೂರಿನ ಈ ರಸ್ತೆಯಲ್ಲಿ ಇನ್ಮುಂದೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ, ಯು ಟರ್ನ್ ಕಟ್​​​

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಿಂದ ಕೆಆರ್​ಪುರ ಪೊಲೀಸ್ ಠಾಣೆಯವರೆಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ, ನವೆಂಬರ್ 19ರಿಂದ ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಬಿಬಿಎಂಪಿ ಜಂಕ್ಷನ್​ನಿಂದ ಕೆಆರ್​ಪುರ ಪೊಲೀಸ್ ಠಾಣೆವರೆಗಿನ ರಸ್ತೆಯಲ್ಲಿ ಏಕಮುಖ ಸಂಚಾರಕ್ಕಾಗಿ ಮಾತ್ರ ಇರುತ್ತದೆ. ಕೆಲವು ಯು-ಟರ್ನ್ ಗಳನ್ನು ಮುಚ್ಚಲಾಗಿದೆ.

ಬೆಂಗಳೂರಿನ ಈ ರಸ್ತೆಯಲ್ಲಿ ಇನ್ಮುಂದೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ, ಯು ಟರ್ನ್ ಕಟ್​​​
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Nov 19, 2024 | 8:23 AM

ಬೆಂಗಳೂರು, ನವೆಂಬರ್​ 19: ಬೆಂಗಳೂರು (Bengaluru) ನಗರದ ಹಳೆ ಮದ್ರಾಸ್ ರಸ್ತೆಯಿಂದ (Old Madras Road) ಕೆಆರ್​ಪುರ ಹೊಸ ಪೊಲೀಸ್ ಠಾಣೆವರಗಿನ (KR Pura Police Station) ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಇಂದಿನಿಂದ (ನ.19)ರಿಂದ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಈ ಕುರಿತು ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್​ ಮುಖಾಂತರ ಮಾಹಿತಿ ತಿಳಿಸಿದ್ದಾರೆ.

ಹಳೆ ಮದ್ರಾಸ್ ರಸ್ತೆಯ ಬಿಬಿಎಂಪಿ ಜಂಕ್ಷನ್‌ನಿಂದ ಕೆಆರ್​ಪುರ ಹೊಸ ಪೊಲೀಸ್ ಠಾಣೆ ಪಶು ಆಸ್ಪತ್ರೆವರೆಗಿನ ರಸ್ತೆಯನ್ನು ಪ್ರಾಯೋಗಿಕವಾಗಿ ಏಕಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದೆ. ಹಳೆ ಮದ್ರಾಸ್ ರಸ್ತೆಯ ಬಿಬಿಎಂಪಿಜಂಕ್ಷನ್ ಯು ಟರ್ನ್​​ ಅನ್ನು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ ಪ್ರಾಯೋಗಿಕವಾಗಿ ಮುಚ್ಚಲಾಗಿದೆ.

ಮಾರ್ಗ ಬದಲಾವಣೆ

  • ಹಳೆ ಮದ್ರಾಸ್ ರಸ್ತೆಯಿಂದ ಕೆಆರ್​ಪುರ ಹೊಸ ಪೊಲೀಸ್ ಠಾಣೆ ಮಾರ್ಗವಾಗಿ ಕೆಆರ್​ಪುರ ಗ್ರಾಮ ಮತ್ತು ಟಿ.ಸಿ ಪಾಳ್ಯ, ಆನಂದಪುರ ಕಡೆಗೆ ಸಂಚರಿಸುವ ವಾಹನ ಸವಾರರು ಫ್ರೀ ಲೆಪ್ಸ್ ಟರ್ನ್ ಪಡೆದು ಮುಂದೆ ಸಂಚರಿಸಬಹುದಾಗಿದೆ.
  • ಐಟಿಐ ಗೇಟ್ ಕಡೆಯಿಂದ ಹೊಸಕೋಟೆ ಕಡೆಗೆ ಹೋಗುವ ಬಿಎಂಟಿಸಿ ಬಸ್‌ಗಳು ಕಡ್ಡಾಯವಾಗಿ ಶ್ರೀರಾಮ ಆಸ್ಪತ್ರೆ ಬಳಿ ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸಿಕೊಂಡು ಹೋಗಬೇಕು.
  • ಐಟಿಐ ಗೇಟ್ ಕಡೆಯಿಂದ ಡಿಸೇಲ್ ಶೆಡ್ ರಸ್ತೆಯಲ್ಲಿರುವ ಬಸ್ ನಿಲ್ದಾಣಕ್ಕೆ ಹೋಗುವ ಬಿಎಂಟಿಸಿ ಬಸ್‌ಗಳು ಸರ್ಕಾರಿ ಕಾಲೇಜ್ ಜಂಕ್ಷನ್ ಬಳಿ ಯು ಟರ್ನ್ ಪಡೆದು ಎಡಭಾಗದಲ್ಲಿ ಚಲಿಸಿ ಡಿಪೋ ಕಡೆಗೆ ಸಂಚರಿಸಬೇಕು.
  • ಆನಂದಪುರ ಮತ್ತು ಕೆಆರ್​ಪುರ ಗ್ರಾಮದ ಕಡೆಯಿಂದ ಬರುವ ವಾಹನ ಸವಾರರು ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಹಾಸನ್ ಅಯ್ಯಂಗಾರ್ ಬೇಕರಿ ಬಳಿ ಎಡ ತಿರುವು ಪಡೆದು ಹಳೆ ಮದ್ರಾಸ್ ರಸ್ತೆ ಮೂಲಕ ಸಂಚರಿಸಿ ಜಿಆರ್​ಟಿ ಬಳಿ ಯು ಟರ್ನ್ ಪಡೆದು ನಗರದ ಕಡೆಗೆ ಸಂಚರಿಸಬೇಕು.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಸಿಗದೆ ಪ್ರಯಾಣಿಕರ ಪರದಾಟ! ಪೀಕ್ ಅವರ್, ರಾತ್ರಿ ವೇಳೆ ಸಿಗ್ತಿಲ್ಲ ಟ್ಯಾಕ್ಸಿ

  • ಐಟಿಐ ಗೇಟ್ ಕಡೆಯಿಂದ ಬರುವ ಭಾರಿ ಸರಕು-ಸಾಗಣೆ ವಾಹನಗಳು ಸರ್ಕಾರಿ ಕಾಲೇಜ್ ಜಂಕ್ಷನ್‌ನಲ್ಲಿ ಯು ಟರ್ನ್ ಪಡೆದು ನಗರದ ಕಡೆಗೆ ಸಂಚರಿಸಬೇಕು.
  • ಟಿಸಿ ಪಾಳ್ಯ ಕಡೆಯಿಂದ ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಮುನಿಯಪ್ಪ ಗಾರ್ಡನ್ ಬಳಿ ಎಡ ತಿರುವು ಪಡೆದು ಸರ್ಕಾರಿ ಕಾಲೇಜ್ ರಸ್ತೆ ಮೂಲಕ ಸರ್ಕಾರಿ ಕಾಲೇಜ್ ಜಂಕ್ಷನ್ ತಲುಪಿ ನಗರದ ಕಡೆಗೆ ಸಂಚರಿಸಬೇಕು.

ಟ್ವಿಟರ್​ ಪೋಸ್ಟ್​​

  • ಕೆಆರ್​ಪುರ ಮಾರುಕಟ್ಟೆ ಕಡೆಯಿಂದ ಕೆಆರ್​ಪುರ ಗ್ರಾಮದ ಕಡೆಗೆ ಸಂಚರಿಸುವ ವಾಹನ ಸವಾರರು ಸರ್ಕಾರಿ ಆಸ್ಪತ್ರೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಕೆಆರ್​ಪುರ ಹೊಸ ಪೊಲೀಸ್ ಠಾಣೆ ಮಾರ್ಗವಾಗಿ ಮುಂದೆ ಸಂಚರಿಸಬೇಕು ಎಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ