Bangalore Power Cut: ಬೆಂಗಳೂರಿನಲ್ಲಿ ಬುಧವಾರ ಎಲ್ಲೆಲ್ಲಿ ಪವರ್​ಕಟ್? ಇಲ್ಲಿದೆ ವಿವರ

|

Updated on: Jun 27, 2023 | 10:52 PM

ಹೆಚ್ಚಿನ ಕಾಮಗಾರಿಗಳನ್ನು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಸಲಾಗುವುದು, ಇದರ ಪರಿಣಾಮವಾಗಿ ಕನಿಷ್ಠ ಐದು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Bangalore Power Cut: ಬೆಂಗಳೂರಿನಲ್ಲಿ ಬುಧವಾರ ಎಲ್ಲೆಲ್ಲಿ ಪವರ್​ಕಟ್? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL) ದುರಸ್ತಿ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ (BESCOM) ವೆಬ್‌ಸೈಟ್​​ನಲ್ಲಿ ಮಾಹಿತಿ ನೀಡಲಾಗಿದೆ. ಮುಖ್ಯವಾಗಿ ಮೊದಲ ತ್ರೈಮಾಸಿಕದ ನಿಯತಕಾಲಿಕ ನಿರ್ವಹಣಾ ಯೋಜನೆಗಳ ಜಾರಿ, ಟವರ್‌ಗಳ ನಿರ್ಮಾಣ, ಮೇಲ್ವಿಚಾರಣೆ, ಬಸ್ ಐಸೊಲೇಟರ್‌ಗಳ ನಿರ್ವಹಣೆ ಇತ್ಯಾದಿ ಕಾರ್ಯಗಳು ನಡೆಯಲಿವೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಸಲಾಗುವುದು, ಇದರ ಪರಿಣಾಮವಾಗಿ ಕನಿಷ್ಠ ಐದು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.

ಬುಧವಾರ ಎಲ್ಲೆಲ್ಲಿ ಪವರ್ ಕಟ್?

ವಿಶ್ವಪ್ರಿಯ ಲೇಔಟ್, ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ಪ್ರೆಸ್ಟೀಜ್ ಸಾಂಗ್ ಆಫ್ ಸೌತ್, ತೇಜಸ್ವಿನಿ ನಗರ, ಹಿರಾನಂದನಿ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಲಿಟಾ ಪ್ರೊಮೆನೇಡ್ ಅಪಾರ್ಟ್‌ಮೆಂಟ್‌ಗಳು, ಕೆಆರ್ ಲೇಔಟ್, ಶಾರದ ನಗರ, ಚುಂಚುಘಟ್ಟ ಮತ್ತು ಉಪ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳು, ಎಲ್ 6 ಮತ್ತು ಟಿ ಟೆಕ್ ಪಾರ್ಕ್ ಹಾರೋಬೆಲೆಯ 11 ಕಿಲೋವೋಲ್ಟ್ (ಕೆವಿ) ಉಪ ಕೇಂದ್ರಗಳು, ಕುನ್ನೂರು, ಹುಕುಂದ, ಕೋಡಿಹಳ್ಳಿ, ಬಿಜ್ಜಹಳ್ಳಿ, ಹುಣಸೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇದನ್ನೂ ಓದಿ: ರಸ್ತೆಯಲ್ಲಿ ಜಲ್ಲಿ ತೆರವು ಮಾಡಿದ ಟ್ರಾಪಿಕ್ ಪೊಲೀಸ್: ಬಿಬಿಎಂಪಿಯನ್ನು ಟೀಕಿಸಿ ಸಿಬ್ಬಂದಿ ಹೊಗಳಿದ ನೆಟ್ಟಿಗರು

ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತ ಜಯಂತಿ ಕಾಲೇಜು, ಬಿಳಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ನೂರು, ಪಟೇಲ್ ರಾಮಯ್ಯ ಲೇಔಟ್, ಅಂಜನಪ್ಪ ಲೇಔಟ್, ಸಿಎಸ್‌ಐ ಗೇಟ್, ಬೈರತಿ ಕ್ರಾಸ್ ಹಳ್ಳಿ, ಎವರ್ ಗ್ರೀನ್ ಲೇಔಟ್, ಅಗರ ಪಂಚಾಯಿತಿ, ಎಕೆಆರ್ ಸ್ಕೂಲ್ ನ್ಯೂ ಮಿಲೇನಿಯಂ ಶಾಲೆ, ಪಟಾಲಮ್ಮ ದೇವಸ್ಥಾನ ರಸ್ತೆ, ರಾಜು ಲೇಔಟ್, ಪ್ರಕಾಶ್ ಗಾರ್ಡನ್, ಲಕ್ಕಮ್ಮ ಲೇಔಟ್, ಕ್ರಿಸ್ಟಿಯನ್ ಕಾಲೇಜು ರಸ್ತೆ, ಕುಪ್ಪೆ, ಹಲಗೆರೆ, ಕೊರ್ತಿ, ಕೆ.ಎಚ್.ಹಳ್ಳಿ ಪಟ್ಟಣ, ಚೌಡನಕುಪ್ಪೆ, ತಾವರೆಕೆರೆ ಮತ್ತು ಹಂಗರಹಳ್ಳಿ ಪ್ರದೇಶಗಳಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 pm, Tue, 27 June 23