
ಬೆಂಗಳೂರು, ಡಿಸೆಂಬರ್ 18: ಹುಡುಗಿಯರ ಮೊಬೈಲ್ ನಂಬರ್ ಕೇಳಿದ ಆರೋಪ ವಿಚಾರವಾಗಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಪಬ್ನಲ್ಲಿ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೆರಿದ್ದು, ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ. ನಾಗರಬಾವಿ ರಸ್ತೆಯಲ್ಲಿರುವ ಪಬ್ನಲ್ಲಿ ನಡೆದ ಘಟನೆ ಸಂಬಂಧ ಎರಡೂ ಕಡೆಯವರ ದೂರು ಪಡೆದಿರುವ ಪೊಲೀಸರು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪಬ್ನಲ್ಲಿ ಹೇಮಂತ್ ಜೊತೆಗಿದ್ದ ಯುವತಿಯರ ಫೋನ್ ನಂಬರ್ ಅನ್ನು ಉಮೇಶ್ ಎಂಬವರು ಕೇಳಿದ್ದಾರೆ. ಈ ವೇಳೆ ಯುವತಿಯರು ಮೊಬೈಲ್ ನಂಬರ್ ನೀಡಲು ನಿರಾಕರಿಸಿರುವ ಕಾರಣಕ್ಕೆ ಅವರ ಜೊತೆಗೆ ಉಮೇಶ್ ಅಸಭ್ಯವರ್ತನೆ ತೋರಿದ್ದಾರೆ. ಘಟನೆ ಬಗ್ಗೆ ಪಬ್ ಸಿಬ್ಬಂದಿಗೆ ಹೇಮಂತ್ ದೂರು ನೀಡಿದ್ದು, ಆ ಬಳಿಕ ಉಮೆಶ್ ಟೇಬಲ್ನ ಪಬ್ನವರು ಬೇರೆಡೆಗೆ ಶಿಫ್ಟ್ ಮಾಡುವ ಮೂಲಕ ಪರಿಸ್ಥಿತಿ ಶಾಂತಗೊಳಿಸಿದ್ದರು. ಆದ್ರೆ ಪಾರ್ಟಿ ಮುಗಿಸಿ ಪಬ್ನಿಂದ ಹೊರಬರುವಾಗ ಉಮೆಶ್ ಮತ್ತೆ ಹೇಮಂತ್ಗೆ ಬೈದಿದ್ದು ರಾದ್ಧಾಂತಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್; ಯುವತಿ ಮೇಲೆ ವಿಕೃತಿ ಮೆರೆದ ಗ್ಯಾಂಗ್
ಉಮೇಶ್ ಮಾತಿನಿಂದ ಹೇಮಂತ್ ಕೂಡ ಸಿಟ್ಟಾಗಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿದೆ. ಆಕ್ರೋಶಭರಿತರಾಗಿದ್ದ ಹೇಮಂತ್ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಪಬ್ ಬಳಿಗೆ ಕೆಲ ಹುಡುಗರನ್ನು ಕರೆಸಿ ಮತ್ತೆ ಅಟ್ಯಾಕ್ಗೆ ಮುಂದಾಗಿದ್ದಾರೆ. ಈ ವೇಳೆ ದೊಡ್ಡ ಗಲಾಟೆ ನಡೆಯದಂತೆ ಪಬ್ ಸಿಬ್ಬಂದಿ ಮತ್ತು ಸ್ಥಳಕ್ಕೆ ಬಂದ ಜ್ಞಾನಭಾರತಿ ಪೊಲೀಸರು ತಡೆದಿದ್ದಾರೆ. ಬಳಿಕ ಹೇಮಂತ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಉಮೇಶ್ ದೂರು ನೀಡಿದ್ದರೆ, ಅಸಭ್ಯ ವರ್ತನೆ ಆರೋಪದಡಿ ಉಮೇಶ್ ವಿರುದ್ಧ ಹೇಮಂತ್ ಜೊತೆಗಿದ್ದ ಯುವತಿಯರು ಕೂಡ ಪ್ರತಿದೂರು ದಾಖಲಿಸಿದ್ದಾರೆ. ಇಬ್ಬರ ದೂರಿನ ಅನ್ವಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.