AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಾಚರಣೆಗೆ ಹೊಸ ರೂಲ್ಸ್: ಪಬ್, ಕ್ಲಬ್, ಹೋಟೆಲ್​ಗಳಿಗೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧತೆ ಶುರುವಾಗಿದೆ. ಈಗಾಗಲೇ ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಬ್ರೀಗೇಡ್ ರೋಡ್​​ನಲ್ಲಿ 2026 ರ ಸ್ವಾಗತಕ್ಕೆ ಕೌಂಡ್​ಡೌನ್ ಶುರುವಾಗಿದ್ದು ಪಬ್, ಬಾರ್ ಹಾಗೂ ಕ್ಲಬ್​ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮಾರ್ಗಸೂಚಿಯಲ್ಲಿ ಸೂಚಿಸಿರುವ ನಿಯಮಗಳೇನು? ಇಲ್ಲಿದೆ ವಿವರ.

ಹೊಸ ವರ್ಷಾಚರಣೆಗೆ ಹೊಸ ರೂಲ್ಸ್: ಪಬ್, ಕ್ಲಬ್, ಹೋಟೆಲ್​ಗಳಿಗೆ ಮಾರ್ಗಸೂಚಿ ಬಿಡುಗಡೆ
ಸಾಂದರ್ಭಿಕ ಚಿತ್ರ
Vinay Kashappanavar
| Edited By: |

Updated on: Dec 17, 2025 | 6:35 AM

Share

ಬೆಂಗಳೂರು, ಡಿಸೆಂಬರ್ 17: ಹೊಸ ವರ್ಷವನ್ನು (New Year) ಸ್ವಾಗತಿಸಲು, 2026 ರ ಆಗಮನದ ಗ್ರ್ಯಾಂಡ್ ಸೆಲೆಬ್ರೇಷನ್​​ಗೆ ಬಾರ್, ಪಬ್ ಮಾಲೀಕರು ಸಿದ್ಧತೆ ಶುರು ಮಾಡಿದ್ದಾರೆ. ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರು (Bengaluru) ಸಜ್ಜಾಗುತ್ತಿದೆ. ಗೋವಾದ ನೈಟ್ ಕ್ಲಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಜನ ಮೃತಪಟ್ಟ ಘಟನೆಯ ನಂತರ ಇದೀಗ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರಿನ ಪಬ್, ಬಾರ್, ಕ್ಲಬ್​ಗಳಿಗೆ ಕೆಲವು ಸಲಹೆಗಳನ್ನು ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿವೆ.

ಧ್ವನಿವರ್ಧಕದ ಸೌಂಡ್ ಎಷ್ಟಿರಬೇಕು? ಏನೆಲ್ಲ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು? ಎಲ್ಇಡಿ ಸ್ಕ್ರೀನ್ ಹಾಗೂ ಸುರಕ್ಷಿತಾ ಮಾನದಂಡಗಳ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಜೊತೆಗೆ ಸರ್ಕಾರದಿಂದಲೂ ಪಬ್, ಬಾರ್, ಕ್ಲಬ್​ಗಳಿಗೆ ನೋಟಿಸ್ ನೀಡಲಾಗಿದೆ. ಎಂಜಿ ರಸ್ತೆ , ಚರ್ಚ್ ಸ್ಟ್ರೀಟ್ ರೋಡ್ ಹಾಗೂ ಬ್ರಿಗೇಡ್ ರಸ್ತೆ ಸೇರಿದಂತೆ ಸಂಭ್ರಮಾಚರಣೆ ನಡೆಯುವ ರಸ್ತೆಗಳ ನೆಲಮಹಡಿ, ಅಂಡರ್ ಪಾಸ್ ಬಂದ್ ಮಾಡಲಾಗುತ್ತದೆ.

ಹೊಸ ವರ್ಷ ಸಂಭ್ರಮಾಚರಣೆಗೆ ಹೊಸ ರೂಲ್ಸ್ ಏನೇನು?

  • ಹೊಸ ವರ್ಷದ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ
  • ಸಂಭ್ರಮಾಚರಣೆಗೆ ನಿಗದಿತ ಸಮಯ ಕಡ್ಡಾಯ ಫಾಲನೆ
  • ಹೊಸ ವರ್ಷಕ್ಕೆ ಕಡ್ಡಾಯ ಧ್ವನಿರ್ವಕ ಪರವಾನಗಿ ಪಡೆಯಬೇಕು
  • ಧ್ವನಿರ್ವಕಗಳ ತೀವ್ರತೆ ನೈಟ್ ಟೈಮ್ ಜನವಸತಿ ಪ್ರದೇಶಗಳಲ್ಲಿ 45DB ಇರಬೇಕು
  • ಕಮರ್ಷಿಯಲ್ – 55DB ಹಾಗೂ ಇಂಡಸ್ಟ್ರೀಯಲ್ ಏರಿಯಾ ಮಿತಿ 70DB
  • ಸ್ಥಳವಕಾಶಕ್ಕೆ ತಕ್ಕಂತೆ ಪಾಸ್ ಅಥವಾ ಟಿಕೇಟ್ ನೀಡಬೇಕು
  • ನೆಲಮಹಡಿ, ಪಾರ್ಕಿಂಗ್ ಹಾಗೂ ಟೆರೆಸ್ ಗಳಲ್ಲಿ ಪಾರ್ಟಿ ಆಯೋಜನಗೆ ಬ್ರೇಕ್
  • ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್​ಗಳ ಒಳಭಾಗಕ್ಕೆ ಮಾತ್ರ LED ಹಾಕಬೇಕು
  • ಸಾರ್ವಜನಿಕರಿಗೆ ಕಾಣುವಂತೆ LED ಹಾಕುವಂತಿಲ್ಲ
  • ಭದ್ರತೆ ದೃಷ್ಟಿಯಿಂದ ಗ್ರಾಹಕರ ಸ್ಕ್ರಿನಿಂಗ್ ತಪಾಸಣೆ ಮಾಡಬೇಕು
  • ಕಾರ್ಯಕ್ರಮದಲ್ಲಿ ಅಗ್ನಿ ನಿರೋಧಕ ಬಳಕೆ ಇರಬೇಕು
  • ಕಾಲ್ತುಳಿತ ಪ್ರಕರಣ ಆಗದಂತೆ ನೋಡಿಕೊಳ್ಳಬೇಕು
  • ತುರ್ತು ನಿಗಮಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು
  • ಹೋಟೆಲ್ ಪ್ರವೇಶ, ನಿರ್ಗಮನ, ಪಾರ್ಕಿಂಗ್ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಅಳವಡಿಸಬೇಕು
  • ಹೋಟೆಲ್, ಬಾರ್, ಪಬ್ ಹಾಗೂ ಕ್ಲಬ್​ಗಳಲ್ಲಿ ಮಾದಕ ದ್ರವ್ಯ ಮಾರಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು
  • ಕಾರ್ಯಕ್ರಮದ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ನೀಡಬಾರದು
  • NO SMOKING/ NO DRUGS ಫಲಕಗಳನ್ನ ಅಳವಡಿಸಬೇಕು
  • ಹೊಸ ವರ್ಷಕ್ಕೆ ಆಗಮಿಸುವ ಸೆಲೆಬ್ರಿಟೀಸ್, ಅತಿಥಿ ಕಲಾವಿದರ ಮಾಹಿತಿ ಮೊದಲೇ ಪೊಲೀಸ್ ಇಲಾಖೆಗೆ ತಿಳಸಬೇಕು

ಇನ್ನು ಮಹಿಳೆಯರ ರಕ್ಷಣೆ ಹಾಗೂ ಅಹಿತಕರ ಘಟನೆ ನಿಯಂತ್ರಣಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ದಿನ ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಎಂಜಿ ರಸ್ತೆ ಸೇರಿದಂತೆ ಮೂರು ರಸ್ತೆಗಳ ಬೇಸ್ಮೆಂಟ್ ಶಾಪ್​ಗಳಯ, ನೆಲಮಹಡಿಯ ಅಂಗಡಿಗಳು ಹಾಗೂ ಅಂಡರ್ ಪಾಸ್​​ಗಳನ್ನು ಬಂದ್ ಮಾಡುವಂತೆ ಬ್ರಿಗೇಡ್ ರೋಡ್ ಸಂಘಟನೆ ಹೇಳಿದೆ. ನೆಲಮಹಡಿಯಲ್ಲಿ ಪಾರ್ಟಿ ಹಾಗೂ ಮೋಜು ಮಸ್ತಿಯಿಂದ ಮಹಿಳೆಯರ ಸುರಕ್ಷಿತಗೆ ಧಕ್ಕೆ ಸಾಧ್ಯತೆ ಹಿನ್ನಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ತಡೆಗೆ ಅಲೋಕ್​​ ಕುಮಾರ್​​ ಮಾಸ್ಟರ್​​ ಪ್ಲ್ಯಾನ್​​: ಇಲ್ಲಿದೆ ಮಾಹಿತಿ

ಒಟ್ಟಿನಲ್ಲಿ ಈ ವರ್ಷ ರಾಜಧಾನಿಯ ಜನ 2025ಕ್ಕೆ ಗುಡ್ ಬೈ ಹೇಳಿ 2026 ರ ಸ್ವಾಗತಕ್ಕೆ ಸಿದ್ಧತೆ ಮಾಡಿದ್ದು ಜಿಬಿಎ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಸೂಕ್ತ ನಿಗಾವಹಿಸೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ