Bengaluru Rain: ಬೆಂಗಳೂರಿನ ವಿಜಯನಗರ ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 12, 2024 | 5:39 PM

ಕಳೆದ ಆರೇಳು ದಿನಗಳಿಂದ ಆಗುತ್ತಿರುವ ಮಳೆಗೆ ಬೆಂಗಳೂರು ಜನರು ಸಂತಸಗೊಂಡಿದ್ದಾರೆ. ರಣ ಬಿಸಿಲಿಗೆ ಕಂಗಾಲಾಗಿದ್ದ ಸಿಲಿಕಾನ್​ ಸಿಟಿ ಮಂದಿಗೆ ಸಂಜೆಯಾಗುಯತ್ತಲೇ ವರುಣನ ದರ್ಶನವಾಗುತ್ತಿದೆ. ಅದರಂತೆ ಇಂದು ಕೂಡ ಬೆಂಗಳೂರಿನ ವಿಜಯನಗರ, ನಾಗರಭಾವಿ ಸೇರಿದಂತೆ ಹಲವೆಡೆ ಭರ್ಜರಿ ಮಳೆ ಶುರುವಾಗಿದೆ.

Bengaluru Rain: ಬೆಂಗಳೂರಿನ ವಿಜಯನಗರ ಸೇರಿದಂತೆ ಹಲವೆಡೆ ತುಂತುರು ಮಳೆ ಆರಂಭ
ಬೆಂಗಳೂರು ಮಳೆ
Follow us on

ಬೆಂಗಳೂರು, ಮೇ.11: ಬಿಸಿಲಿಗೆ ಬಸವಳಿದಿದ್ದ ಬೆಂಗಳೂರು ಮಂದಿ, ಕಳೆದ ಆರೇಳು ದಿನದಿಂದ ಆಗುತ್ತಿರುವ ಮಳೆಯಿಂದ ಫುಲ್​ ಖುಷ್​ ಆಗಿದ್ದಾರೆ. ಸಂಜೆಯಾಗುತ್ತಿದ್ದಂತೆ ಮಳೆ(Rain)ಯ ಆರ್ಭಟ ಶುರುವಾಗುತ್ತಿದೆ. ಅದರಂತೆ ಇಂದು ಕೂಡ ನಗರದ ವಿಜಯನಗರ, ನಾಗರಭಾವಿ ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಶುರುವಾಗಿದೆ. ಇನ್ನುಳಿದಂತೆ ರಿಚ್​ಮಂಡ್​ ಸರ್ಕಲ್​, ಮೆಜೆಸ್ಟಿಕ್, ಚಾಮರಾಜಪೇಟೆಯಲ್ಲಿ ಮೋಡಕವಿದ ವಾತಾವರಣವಿದೆ.

ಇಂದಿನಿಂದ ಮೇ‌ 15ರವರೆಗೆ ಬೆಂಗಳೂರಿಗೂ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಇಂದು ಭಾರಿ ಮಳೆಯಾಗಿದ್ದು, ಮೇ 12, 13, 14, 15 ನಾಲ್ಕು ದಿನಗಳ ಕಾಲ ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಬಿರುಗಾಳಿ, ಗುಡುಗು ಸಹಿತ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಇಂದಿನಿಂದ ಮೇ‌ 15ರವರೆಗೆ ಬೆಂಗಳೂರಿಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಈ ವೇಳೆ ಲಘು ಪ್ರವಾಹ, ನೈಸರ್ಗಿಕ ಸಮಸ್ಯೆಗಳು ಎದುರಾಗುವ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:Karnataka Rains: ವಿಜಯಪುರ, ಚಿಕ್ಕಮಗಳೂರು, ಹುಬ್ಬಳ್ಳಿ ಸೇರಿ ಕರ್ನಾಟಕದ ಹಲವೆಡೆ ಮಳೆ

ಚಿಕ್ಕಮಗಳೂರು, ಮೈಸೂರು ಜಿಲ್ಲೆಯಲ್ಲಿ ಭರ್ಜರಿ ಮಳೆ

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ಹಲವೆಡೆ ಇಂದು ಭಾರಿ ಮಳೆಯಾಗಿದೆ. ಕುಡಿಯುವ ನೀರಿಗೂ ಪರದಾಡುತ್ತಿದ್ದ ಬಯಲುಸೀಮೆ ಭಾಗದ ಜನರು, ಬಿಸಿಲಿನಿಂದ ಕಂಗೆಟ್ಟಿದ್ದರು. ಇದೀಗ ದಿಢೀರ್​ ಮಳೆಯಿಂದ ಬಯಲುಸೀಮೆ ರೈತರಲ್ಲಿ ಮಂದಹಾಸ ಮೂಡಿದೆ. ಇನ್ನು ಧಾರಾಕಾರ ಮಳೆ ಹಿನ್ನೆಲೆ ತೆಂಗು, ಅಡಿಕೆ ಬೆಳೆಗಾರರು, ರೈತರಲ್ಲಿ ಸಂತಸ ಮನೆ ಮಾಡಿದ.

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಉತ್ತಮ ಮಳೆyಯಾಗಿದ್ದು, ಬಿರು ಬೇಸಿಗೆಯಿಂದ ಬಸವಳಿದಿದ್ದ ವನ್ಯಜೀವಿಗಳು ಖುಷ್​ ಅಗಿವೆ. ನಾಗರಹೊಳೆ ಅಭಯಾರಣ್ಯ, ಕಬಿನಿ ಹಿನ್ನೀರಿನಲ್ಲಿ ವನ್ಯಜೀವಿಗಳ ಕಲರವ ಹೆಚ್ಚಾಗಿದ್ದು, ಗಜ ಸಮೂಹ ಕ್ರೀಡೆಯಲ್ಲಿ ತೊಡಗಿದೆ. ಜಿಂಕೆಗಳ ಸ್ವಚ್ಛಂದ ವಿಹಾರ, ಉತ್ತಮ ಮಳೆಯಿಂದಾಗಿ ನಾಗರಹೊಳೆ ಅಭಯಾರಣ್ಯಕ್ಕೆ ಜೀವ ಕಳೆ ಬಂದಿದೆ. ಆನೆ, ಹುಲಿ, ಜಿಂಕೆ ಸೇರಿದಂತೆ ಎಲ್ಲಾ ಪ್ರಾಣಿಗಳ ಬಿಂದಾಸ್ ಓಡಾಟ ನಡೆಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Sun, 12 May 24