AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ ಮಾಜ್​ ಮುನೀರ್​​ ಕೈವಾಡ ದೃಢ

ಮಾರ್ಚ್​ 1 ರಂದು ರಾಮೇಶ್ವರಂ ಕೇಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದಾದ ಬೆನ್ನಲ್ಲೇ ಎನ್​ಐಎ ಅಧಿಕಾರಿಗಳು ಮಾರ್ಚ್​ 4ರ ರಾತ್ರಿ ಪರಪ್ಪನ ಅಗ್ರಹಾರದ ಮೇಲೆ ದಾಳಿ ಮಾಡಿ, ಶಂಕಿತ ಉಗ್ರ ಮಾಜ್​ ಮುನೀರ್​ನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಶಂಕಿತ ಉಗ್ರ ಮಾಜ್​ ಮುನೀರ್ ಸತ್ಯ ಬಾಯಿಬಿಟ್ಟಿದ್ದಾನೆ.

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ ಮಾಜ್​ ಮುನೀರ್​​ ಕೈವಾಡ ದೃಢ
ರಾಮೇಶ್ವರಂ ಕೆಫೆ
Shivaprasad B
| Edited By: |

Updated on:Apr 08, 2024 | 3:07 PM

Share

ಬೆಂಗಳೂರು, ಏಪ್ರಿಲ್​ 08: ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ ಬಾಂಬ್ ಸ್ಫೋಟ (Bomb Blast) ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರ ಮಾಜ್​ ಮುನೀರ್ ಕೈವಾಡವಿರುವುದು ಧೃಡವಾಗಿದೆ. ಶಂಕಿತ ಉಗ್ರ ಮಾಜ್​ ಮುನೀರ್ ಎನ್​ಐಎ (NIA) ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ​

ಮಾರ್ಚ್​ 1 ರಂದು ರಾಮೇಶ್ವರಂ ಕೇಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಇದಾದ ಬೆನ್ನಲ್ಲೇ ಎನ್​ಐಎ ಅಧಿಕಾರಿಗಳು ಮಾರ್ಚ್​ 4ರ ರಾತ್ರಿ ಪರಪ್ಪನ ಅಗ್ರಹಾರ ಸೇರಿದಂತೆ ದೇಶದ 18 ಜೈಲುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಪರಿಶೀಲಿಸಿದ್ದರು. ಈ ಸಮಯದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಶಂಕಿತ ಉಗ್ರ ಮಾಜ್​ ಮುನೀರ್​ನನ್ನು ಎನ್​ಐಎ ಅಧಿಕಾರಿಗಳು ಎಂಟು ದಿನಗಳ ಕಾಲ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಎನ್​ಐಎ ಅಧಿಕಾರಿಗಳು ಮಾಜ್ ಮುನೀರ್ ಇದ್ದ ಜೈಲು ಕೋಣೆಯನ್ನು ತಪಾಸಣೆ ನಡೆಸಿದಾಗ ನೋಟ್ ಬುಕ್ ಒಂದರಲ್ಲಿ ಕೆಲವು ಕೋಡ್ ವರ್ಡ್‌ ಬರೆಯಲಾಗಿತ್ತು. ಇವುಗಳನ್ನು ಡಿಕೋಡ್ ಮಾಡಿದಾಗ ಎನ್​ಐಎ ಅಧಿಕಾರಿಗಳಿಗೆ, ಕೆಫೆ ಸ್ಫೋಟ ಸಂಬಂಧ ಲಿಂಕ್ ಲಭ್ಯವಾಗಿತ್ತು. ಮಾಜ್ ಮುನೀರ್​ ಜೈಲಿನಲ್ಲಿದ್ದುಕೊಂಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದನು ಎಂಬುವುದು ಬಯಲಾಯಿತು.

ಇದನ್ನೂ ಓದಿ:  ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್​ಐಎ

ಮಾಜ್​ ಮುನೀರ್​ ವಿಚಾರಣೆ ನಡೆಸಿದಾಗ ಮುಜಾಮಿಲ್​ ಷರೀಫ್​ನ ಕೈವಾಡವಿರುವುದೂ ತಿಳಿಯಿತು. ಕೂಡಲೆ ಎನ್​ಐಎ ಅಧಿಕಾರಿಗಳು ಮುಜಾಮಿಲ್​ ಷರೀಫ್​ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು. ಆಗ ಮುಜಾಮಿಲ್​ ಷರೀಫ್​ ಮಾಜ್​ ಮುನೀರ್​ ಕೈವಾಡದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದನು. ಬಳಿಕ ಎನ್​ಐಎ ಅಧಿಕಾರಿಗಳು ಮಾಜ್​ ಮುನೀರ್​ನನ್ನೂ ಬಂಧಿಸಿದರು.

ಮಾಜ್​ ಮುನೀರ್​ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. ಈತ ಎಂಜಿನಿಯರ್​ ಪದವಿಧರನಾಗಿದ್ದಾನೆ. ಈತನು ಕೆಲವು ವರ್ಷಗಳ ಹಿಂದೆ ನಡೆದ ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದುಕೊಂಡು ಹೊರ ಬಂದಿದ್ದನು. ಅನಂತರ ಶಿವಮೊಗ್ಗ ಪ್ರಾಯೋಗಿಕ ಸ್ಫೋಟ ನಡೆಸಿದ್ದನು. ಈ ಪ್ರಕರಣದಲ್ಲಿ ಬಂಧಿಸಿದಾಗ ಐಸಿಸ್​ ಸಂಚು ಬಹಿರಂಗವಾಗಿದೆ.

2013ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾಗಿದ್ದ ದಾವಾ ಸೆಂಟರ್​ಗೆ ಮಾಜ್ ಮುನೀರ್ ಹೋಗಿದ್ದರು. ದಾವಾ ಸೆಂಟರ್ ಹೆಸರಿನಲ್ಲಿ ವ್ಯಾಟ್ಸಾಪ್ ಗ್ರೂಪ್ ಕೂಡ ಆರಂಭಿಸಿದ್ದನು. ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲು ಆಸಕ್ತನಾಗಿದ್ದ ಮಾಜ್ 2016ರಲ್ಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದನು. ​2019ರಲ್ಲಿ CAA, NRC ವಿಚಾರವಾಗಿ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆಗ ಮಾಜ್​ ಮುನೀರ್ Ummah News ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ರಚಿಸಿದ್ದನು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:55 pm, Mon, 8 April 24

ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ