Bengaluru Real Estate: ಮನೆ ಖರೀದಿಸಲು ಎನ್​ಆರ್​ಐಗಳಿಗೆ ಬೆಂಗಳೂರೇ ಇಷ್ಟವಂತೆ; ಕಾರಣಗಳಿವು…

|

Updated on: Jul 15, 2024 | 1:18 PM

NRIs investing in Silicon city homes: ಬೆಂಗಳೂರಿನಲ್ಲಿ ಭೂಮಿ ಬೆಲೆ ಯಾವಾಗಲೂ ಚಿನ್ನಕ್ಕಿಂತ ಒಂದು ತೂಕ ಹೆಚ್ಚು. ಈ ಮಣ್ಣಿಗೆ ಹೂಡಿಕೆ ಮಾಡಿದರೆ ಭರಪೂರ ಲಾಭ. ಅಂತೆಯೇ, ಬೆಂಗಳೂರಿನಲ್ಲಿ ಬಿಕರಿಯಾಗುತ್ತಿರುವ ಹಲವು ಮನೆಗಳು ಎನ್​ಆರ್​ಐಗಳ ಪಾಲಾಗುತ್ತಿವೆ. ಒಳ್ಳೆಯ ವಾತಾವರಣ, ರಿಯಲ್ ಎಸ್ಟೇಟ್ ಮೌಲ್ಯ, ಮನೆ ಬಾಡಿಗೆ ಇತ್ಯಾದಿ ಕಾರಣಗಳಿಗೆ ಅನಿವಾಸಿ ಭಾರತೀಯರನ್ನು ಬೆಂಗಳೂರು ಸೆಳೆದಿದೆ.

Bengaluru Real Estate: ಮನೆ ಖರೀದಿಸಲು ಎನ್​ಆರ್​ಐಗಳಿಗೆ ಬೆಂಗಳೂರೇ ಇಷ್ಟವಂತೆ; ಕಾರಣಗಳಿವು...
ಮನೆ
Follow us on

ಬೆಂಗಳೂರು, ಜುಲೈ 15: ಸಿಲಿಕಾನ್ ಸಿಟಿ ಎನಿಸಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ದರ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಉದ್ಯಾನನಗರಿಯ ನೆಲಕ್ಕೆ ಸಖತ್ ಬೇಡಿಕೆ ಇದೆ. ಅದರಲ್ಲೂ ಅನಿವಾಸಿ ಭಾರತೀಯರಿಗೆ ಮನೆ ಅಥವಾ ನಿವೇಶನ ಖರೀದಿಸಲು ಬೆಂಗಳೂರೇ ನೆಚ್ಚಿನ ನಗರವಂತೆ. ಹಾಗಂತ ವಿವಿಧ ಕನ್ಸಲ್ಟೆನ್ಸಿ ಸಂಸ್ಥೆಗಳಿಂದ ಹೆಕ್ಕಿ ತೆಗೆದ ದತ್ತಾಂಶಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವೆಬ್​ಸೈಟ್ ವರದಿ ಮಾಡಿದೆ. ಕುತೂಹಲ ಎಂದರೆ ಈ ದತ್ತಾಂಶಗಳ ಪ್ರಕಾರ ಎನ್​ಆರ್​ಐಗಳು ಬೆಂಗಳೂರಿನಲ್ಲಿ ಆಸ್ತಿ ಖರೀದಿಸಲು ಪ್ರಮುಖವಾಗಿ ಹೂಡಿಕೆಗೆಯಂತೆ. ಇಲ್ಲಿ ವಾಸಕ್ಕಾಗಿ ಆಸ್ತಿ ಖರೀದಿಸುವವರಿಗಿಂತ ಹೂಡಿಕೆಗೆ ಮುಂದಾಗಿರುವವರ ಸಂಖ್ಯೆ ಹೆಚ್ಚು.

ಗಮನಿಸಬೇಕಾದ ಸಂಗತಿ ಎಂದರೆ ಬೆಂಗಳೂರಿನಲ್ಲಿ ಮನೆ ಅಥವಾ ಆಸ್ತಿ ಖರೀದಿಸುತ್ತಿರುವ ಎನ್​ಆರ್​ಐಗಳಲ್ಲಿ ಹೆಚ್ಚಿನವರು ಕಡಿಮೆ ಬೆಲೆಯ ಮತ್ತು ಮಧ್ಯಮ ಬೆಲೆಯ ಆಸ್ತಿ ಮೇಲೆ ಹಣ ಹಾಕುತ್ತಿದ್ದಾರೆ. ಎರಡು ಬೆಡ್​ರೂಮ್​ನ ಫ್ಲಾಟ್​ಗಳು ಅಥವಾ ಸಣ್ಣದಾದ ಮೂರು ಬೆಡ್​ರೂಮ್ ಫ್ಲಾಟ್​ಗಳಿಗೆ ಇವರಿಂದ ಬೇಡಿಕೆ ಇದೆ. ವಿದೇಶಗಳಲ್ಲಿ ತೀರಾ ಶ್ರೀಮಂತರಲ್ಲದ ಈ ಅನಿವಾಸಿ ಭಾರತೀಯರು ತಮ್ಮ ಉಳಿತಾಯ ಹಣವನ್ನು ಈ ಮನೆಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಇನ್ಫಿ ನಾರಾಯಣ ಮೂರ್ತಿಗಳೇ! ಕನಿಷ್ಠ 1 ಗಂಟೆಯಾದರೂ ಹೆಚ್ಚು ಕೆಲಸ ಮಾಡಲು ನಿಮ್ಮ ತಂಡಕ್ಕೆ ಹೇಳಿ – ಬೆಂಗಳೂರು ಸಿಎ ಟಾಂಟ್

ಎನ್​ಆರ್​ಐಗಳು ಬೆಂಗಳೂರಿನಲ್ಲಿ ಮನೆ ಖರೀದಿಸಲು ಪ್ರಮುಖ ಕಾರಣಗಳಿವು…

  • ಮನೆ ಬಾಡಿಗೆ ಹೆಚ್ಚು ಸಿಗುತ್ತದೆ
  • ರಿಯಲ್ ಎಸ್ಟೇಟ್ ಮೌಲ್ಯವೃದ್ಧಿ ಹೆಚ್ಚೇ ಇರುತ್ತದೆ.
  • ಸುರಕ್ಷಿತ ಸ್ಥಳ
  • ಒಳ್ಳೆಯ ಹವಾಮಾನ
  • ಬೆಂಗಳೂರಿನ ಕಾಸ್ಮೊಪೊಲಿಟನ್ ಸಂಸ್ಕೃತಿ
  • ವಾಣಿಜ್ಯಾತ್ಮಕವಾಗಿಯೂ ನಗರದ ಬೆಳವಣಿಗೆ

ಇವೆಲ್ಲಾ ಅಂಶಗಳು ಎನ್​ಆರ್​ಐಗಳಿಗೆ ಬೆಂಗಳೂರು ಆಕರ್ಷಕವಾಗಿ ಕಾಣುವಂತೆ ಮಾಡಿವೆ. ಇವರು ಹೂಡಿಕೆಗೆ ಮನೆ ಖರೀದಿಸುತ್ತಿರುವುದರಾದರೂ ನಿವೃತ್ತಿ ಬಳಿಕ ದೇಶಕ್ಕೆ ವಾಪಸ್ ಬರುವುದಾದರೆ ಬೆಂಗಳೂರನ್ನು ವಾಸಸ್ಥಳವನ್ನಾಗಿ ಮಾಡಿಕೊಳ್ಳುವ ಇರಾದೆಯೂ ಇರಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಜಾಂಡಿಸ್, ಎಚ್ಚರ ವಹಿಸುವಂತೆ ವೈದ್ಯರ ಸಲಹೆ

ಅಧಿಕ ಬಾಡಿಗೆ ಬರುವ ಸ್ಥಳಗಳಲ್ಲಿ ಹೂಡಿಕೆ

ಐಟಿ ಕಾರಿಡಾರ್​ಗಳಿಗೆ ಸಮೀಪ ಇರುವ ಪ್ರದೇಶಗಳಲ್ಲಿ ಎನ್​ಆರ್​ಐಗಳು ಮನೆ ಖರೀದಿಸುತ್ತಿದ್ದಾರೆ. ಖ್ಯಾತ ರಿಯಲ್ ಎಸ್ಟೇಟ್ ಕಂಪನಿಗಳು ಅಭಿವೃದ್ಧಿಪಡಿಸಿದ ಅಪಾರ್ಟ್ಮೆಂಟ್​ಗಳಿಗೆ ಬೇಡಿಕೆ ಇದೆ. ಇಲ್ಲೆಲ್ಲಾ ತಮ್ಮ ಮನೆಗಳಿಗೆ ಉತ್ತಮ ಬಾಡಿಗೆ ಸಿಗುತ್ತದೆ ಎನ್ನುವುದು ಈ ಎನ್ನಾರೈಗಳ ಲೆಕ್ಕಾಚಾರ ಇರಬಹುದು.

ನಗರದ ಪೂರ್ವಭಾಗದಲ್ಲಿರುವ ವೈಟ್​ಫೀಲ್ಡ್, ಸರ್ಜಾಪುರ ರಸ್ತೆ; ಉತ್ತರ ಭಾಗದಲ್ಲಿರುವ ಥಣಿಸಂದ್ರ, ದೇವನಹಳ್ಳಿ, ಹೆಬ್ಬಾಳ; ದಕ್ಷಿಣ ಭಾಗದ ಕನಕಪುರ ರಸ್ತೆ ಹೀಗೆ ಈ ಭಾಗದಲ್ಲಿ ಎನ್​ಆರ್​ಐಗಳಿಂದ ಮನೆ ಖರೀದಿ ಹೆಚ್ಚಿದೆ. ಈ ಪ್ರದೇಶಗಳಲ್ಲಿ ಚದರಡಿ ಜಾಗಗಳಿಗೆ 12,000 ರೂವರೆಗೂ ಬೆಲೆ ಇದೆ.

ಇನ್ನಷ್ಟು ಬೆಂಗಳೂರು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ