ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಜಾಂಡಿಸ್, ಎಚ್ಚರ ವಹಿಸುವಂತೆ ವೈದ್ಯರ ಸಲಹೆ

ಇತ್ತೀಚಿನ ದಿನಗಳಲ್ಲಿ ಪುಟಾಣಿಗಳಲ್ಲಿ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಶುರುವಾಗಿದೆ. ಅದರಲ್ಲೂ ಮಕ್ಕಳಲ್ಲಿ ಡೆಂಗ್ಯೂ ಜ್ವರದ ಜೊತೆ ಜಾಂಡಿಸ್, ಕಾಮಾಲೆ ಕಾಟ ಶುರುವಾಗಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಮಕ್ಕಳ ಆರೋಗ್ಯ ಬಗ್ಗೆ ಕೊಂಚ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಜಾಂಡಿಸ್, ಎಚ್ಚರ ವಹಿಸುವಂತೆ ವೈದ್ಯರ ಸಲಹೆ
ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಜಾಂಡಿಸ್
Follow us
| Updated By: ಆಯೇಷಾ ಬಾನು

Updated on: Jul 15, 2024 | 10:22 AM

ಬೆಂಗಳೂರು, ಜುಲೈ.15: ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ (Dengue) ಕಾಟ ಶುರುವಾಗಿದೆ. ಡೆಂಗ್ಯೂ ಜ್ವರಕ್ಕೆ ಮಕ್ಕಳು ಪರದಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಡೆಂಗ್ಯೂ ಜ್ವರದ ಜೊತೆಗೆ ಮಕ್ಕಳಲ್ಲಿ ಜಾಂಡಿಸ್ (Jaundice), ಕಾಮಾಲೆ ಕಾಟ ಶುರುವಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಅಂದ್ರೆ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ನೀರು ಹಾಗೂ ಆಹಾರ ಸಿಗದೇ ಇರುವುದು, ಹೊರಗಡೆಯ ಆಹಾರ ಸೇವನೆ, ಪ್ರಮುಖವಾಗಿ ಕಲುಷಿತ ನೀರು, ಆಹಾರ ಮತ್ತು ಹೆರಿಗೆ ಆಸ್ಪತ್ರೆಗಳಲ್ಲಿ ತಾಯಿ ಹಾಗು ಮಗುವಿಗೆ ವಿಟಮಿನ್ ಡಿ ಹಾಗೂ ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗ್ತೀದೆ ಜಾಂಡಿಸ್, ಕಾಮಾಲೆ ಕಂಡು ಬರ್ತಿದೆ.

ರಾಜಧಾನಿ ಶಾಲಾ ಮಕ್ಕಳಲ್ಲಿ ಡೆಂಗ್ಯೂ ಜ್ವರದ ಜೊತೆ ಜಾಂಡಿಸ್‌ ಹಾವಳಿ ಶುರುವಾಗಿದ್ದು ಪುಟಾಣಿ ಮಕ್ಕಳ ಜೀವ ಹಿಂಡುತ್ತಿದೆ. ಜಾಂಡಿಸ್ ಹಾಗೂ ಟೈಫಾಯ್ಡ ಜ್ವರ, ಡೆಂಗ್ಯೂ ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಶಾಲಾ ಮಕ್ಕಳಲ್ಲಿ ಹೆಚ್ಚಾಗಿ ಜಾಂಡಿಸ್ ಕಾಣಿಸಿಕೊಳ್ಳುತ್ತಿದೆ. ಕಳೆದ ಕೆಲದಿನಗಳಿಂದ ಬೆಂಗಳೂರಿನಲ್ಲಿ ಶಾಲಾ ಮಕ್ಕಳು ಹೆಚ್ಚಾಗಿ ಕಲುಷಿತ ನೀರು ಸೇವನೆ ಹಾಗೂ ರಸ್ತೆ ಪಕ್ಕದ ಆಹಾರ ಸೇವನೆಯಿಂದ ಅಶ್ವಚ್ಛತೆ ಶಾಲೆಗಳಲ್ಲಿ ಉತ್ತಮ ಕುಡಿಯುವ ನೀರಿನ ಕೊರತೆಯಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದ ಮಕ್ಕಳಲ್ಲಿ ಜಾಂಡಿಸ್ ಶುರುವಾಗಿದೆ.

ಮಕ್ಕಳಲ್ಲಿ ಕಾಮಾಲೆಯಿಂದ ವಾಂತಿ ಭೇದಿ, ಜ್ವರ, ಆಯಾಸಾ, ಮೈ ಕೈ ನೋವು ಮುಖದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಒಂದೆಡೆ ಮಕ್ಕಳಿಗೆ ಡೆಂಗ್ಯೂ ಜ್ವರ ಕಾಡುತ್ತಿದ್ದರೆ. ಇನ್ನೊಂದೆಡೆ ಮಕ್ಕಳಿಗೆ ಜಾಂಡಿಸ್ ಹಾವಳಿ ಇಡುತ್ತಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಎರಡು ವಿಧದ ಕಾಮಾಲೆ ಕಂಡುಬರುತ್ತದೆ. ಇದರಲ್ಲಿ ಸೈಕಲಾಜಿಕಲ್ ಜಾಂಡಿಸ್ ಮತ್ತು ಪೆಥಲಾಜಿಕಲ್ ಜಾಂಡಿಸ್. ಯಕೃತ್ ನಲ್ಲಿ ಯಾವುದಾದರೂ ಸೋಂಕು ಅಥವಾ ಯಾವುದೇ ಚಯಾಪಚಯ ಪರಿಸ್ಥಿತಿಯಲ್ಲಿ ತೊಂದರೆ ನೀಡುವುದರಿಂದ ಎದುರಾಗುತ್ತದೆ. ಸದ್ಯ ವಾತಾವರಣ ಹಿನ್ನಲೆ ಮಕ್ಕಳಲ್ಲಿ ಜ್ವರದ ಜೊತೆ ಜಾಂಡಿಸ್ ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಬಿಸಿ ನೀರು ಸೇವನೆ, ಉತ್ತಮ ಮನೆ ಆಹಾರ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಮಕ್ಕಳ ಆರೋಗ್ಯ ಬಗ್ಗೆ ನಿಗಾವಹಿಸುವಂತೆ ವೈದ್ಯರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಅಗ್ನಿ ದುರಂತ; ಉಡುಪಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಸಾವು

ಮಕ್ಕಳಲ್ಲಿ ಜಾಂಡಿಸ್ ಲಕ್ಷಣಗಳು ಏನು?

  • ವಾಂತಿ, ಭೇದಿ
  • ಜ್ವರ, ಆಯಾಸಾ
  • ಮೈ ಕೈ ನೋವು
  • ಮುಖದಲ್ಲಿ ನೋವು ಕಾಣಿಸಿಕೊಳ್ಳುವುದು
  • ತೀವ್ರವಾದ ಆಯಾಸ ಹಾಗೂ ಸುಸ್ತು
  • ವಾಂತಿ ಜೊತಗೆ ಜ್ವರ

ಒಟ್ನಲ್ಲಿ ಮನೆಯಲ್ಲೊಂದು ಮಗು ಇದ್ದರೆ ಮನೆ ತುಂಬಾ ನಗು ಎಂಬ ಮಾತು ನಾವೆಲ್ಲರೂ ಕೇಳಿದ್ದೇವೆ. ಅದೇ ರೀತಿ ಮನೆಯಲ್ಲಿರುವ ಮಗು ಯಾವಾಗಲೂ ನಗೆ ಬೀರಬೇಕು ಎಂದರೆ ಮಕ್ಕಳ ಆರೋಗ್ಯ ಚೆನ್ನಾಗಿರಬೇಕು. ಪೋಷಕರು ಇತ್ತೀಚೆಗೆ ಮಕ್ಕಳಲ್ಲಿ ಶುರುವಾಗಿರುವ ಸಾಂಕ್ರಾಮಿಕ ಖಾಯಿಲೆಗಳಿಂದ ದೂರವಿಟ್ಟು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಗಮನಹರಿಸಬೇಕು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ