ಮನೆಯಲ್ಲಿ ಅಗ್ನಿ ದುರಂತ; ಉಡುಪಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಸಾವು

ಉಡುಪಿಯ ಅಂಬಲಪಾಡಿಯ ಗಾಂಧಿನಗರದ ಮನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಮೃತಪಟ್ಟಿದ್ದಾರೆ. ರಮಾನಂದ ಅವರ ಪತ್ನಿಗೆ ಚಿಕಿತ್ಸೆ ಮುಂದುವರೆದಿದ್ದು ಇಬ್ಬರು ಮಕ್ಕಳು ಪ್ರಣಾಪಾಯದಿಂದ ಪಾರಾಗಿದ್ದಾರೆ.

ಮನೆಯಲ್ಲಿ ಅಗ್ನಿ ದುರಂತ; ಉಡುಪಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಸಾವು
ಮನೆಯಲ್ಲಿ ಅಗ್ನಿ ದುರಂತ; ಉಡುಪಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಸಾವು
Follow us
| Updated By: ಆಯೇಷಾ ಬಾನು

Updated on:Jul 15, 2024 | 9:04 AM

ಉಡುಪಿ, ಜುಲೈ.15: ಉಡುಪಿಯ ಅಂಬಲಪಾಡಿಯ ಗಾಂಧಿನಗರದ ಮನೆಯೊಂದರಲ್ಲಿ ಅಗ್ನಿ ಅವಘಡ (Fire) ಸಂಭವಿಸಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್‌ ಮಾಲೀಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ (Death). ಇನ್ನು ಮೃತರ ಪತ್ನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅದೃಷ್ಟವಶಾತ್​​ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಬೆಂಕಿಯ ಜ್ವಾಲೆಯಿಂದಾಗಿ ಪ್ರಜ್ಞೆ ತಪ್ಪಿದ್ದ ಗಂಡ ಹೆಂಡತಿಯನ್ನು ಅಗ್ನಿಶಾಮಕ ಸಿಬ್ಬಂದಿ ವಿನಾಯಕ್ ರಕ್ಷಿಸಿದ್ದರು. ಘಟನೆಯಲ್ಲಿ ರಮಾನಂದ ಶೆಟ್ಟಿ ಹಾಗೂ ಅವರ ಪತ್ನಿ ಅಶ್ವಿನಿಗೆ ಗಂಭೀರ ಗಾಯಗಳಾಗಿದ್ದವು. ಇಬ್ಬರನ್ನೂ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಆದರೆ ಶೆಟ್ಟಿ ಬಾರ್ & ರೆಸ್ಟೋರೆಂಟ್‌ ಮಾಲೀಕರಾದ ರಮಾನಂದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅಶ್ವಿನಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಅದೃಷ್ಟವಶಾತ್​​ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಉಡುಪಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಕಿಯ ಜ್ವಾಲೆಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ ನಿರ್ವಹಣೆಗೆ ಬರಲಿವೆ ಹೆಚ್ಚುವರಿ 750 ಎಐ ಕ್ಯಾಮರಾ

ಇಬ್ಬಳು ಮಹಿಳೆಯರಿಗೆ ದೋಖಾ.. ಮತ್ತೊಬ್ಬಳ ಜತೆ ಪರಾರಿ

ಪ್ರೀತಿಸೋದಾಗಿ ನಂಬಿಸಿ ಕೆಲ ದಿನ ಲಿವಿಂಗ್ ಟುಗೆದರ್​ನಲ್ಲಿದ್ದು, ಪರಾರಿಯಾಗ್ತಿದ್ದ ಬಿಹಾರ ಮೂಲದ ಸೋನುಕುಮಾರ್ ಎಂಬುವನ ವಿರುದ್ಧ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ 2 ಪ್ರತ್ಯೇಕ ದೂರುಗಳು ದಾಖಲಾಗಿವೆ. ಬೆಂಗಳೂರಿನ ನೆಲಗೆದರನಹಳ್ಳಿಯಲ್ಲಿದ್ದ ಸೋನುಕುಮಾರ್, ಯುವತಿ ಮತ್ತು ವಿಚ್ಛೇದಿತ ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್​ನಲ್ಲಿದ್ದ. ಆದ್ರೆ, ಇಬ್ಬರನ್ನೂ ಬಿಟ್ಟು ಪೀಣ್ಯದ ಮಹಿಳೆ ಜೊತೆ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸೋನುಕುಮಾರ್​ಗಾಗಿ ಪೀಣ್ಯ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಹೊತ್ತಿ ಉರಿದ ಫಿಶ್​ಮಿಲ್.. ತಪ್ಪಿದ ಅನಾಹುತ

ಮಂಗಳೂರಿನ ಬಜ್ಪೆ ಬಳಿ ಫಿಶ್​ಮಿಲ್ ಹೊತ್ತಿ ಉರಿದ ಘಟನೆ ನಡೆದಿದೆ. ಶಾರ್ಟ್​ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮೀನು ಸಂಸ್ಕರಣಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:53 am, Mon, 15 July 24