ಚಂಡಮಾರುತದ ಎಫೆಕ್ಟ್​​: ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ! 21.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ದಿತ್ವಾ ಚಂಡಮಾರುತದ ಪರಿಣಾಮದಿಂದ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದೆ. ಶನಿವಾರ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ವರ್ಷದ ಅತಿ ಚಳಿ ದಿನವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಾಮಾನ್ಯಕ್ಕಿಂತ 5.8 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನವಿದ್ದು, ಮುಂದಿನ 2 ದಿನ ಇದೇ ರೀತಿಯ ಶೀತ ವಾತಾವರಣ ಮುಂದುವರಿಯಲಿದೆ.

ಚಂಡಮಾರುತದ ಎಫೆಕ್ಟ್​​: ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ! 21.6 ಡಿಗ್ರಿ ಸೆಲ್ಸಿಯಸ್‌ ತಾಪಮಾನ
ಪ್ರಾತಿನಿಧಿಕ ಚಿತ್ರ

Updated on: Nov 29, 2025 | 11:22 PM

ಬೆಂಗಳೂರು, ನವೆಂಬರ್​ 29: ಸಿಲಿಕಾನ್ ಸಿಟಿಯಲ್ಲಿ (bangaluru) ಚಳಿಗಾಲ (Cold) ಆರಂಭವಾಗಿದೆ. ಈ ಸಲ ವ್ಯಾಪಕ ಮಳೆಯಾಗಿದ್ದು, ಹೆಚ್ಚು ಚಳಿ ಜನರನ್ನ ಕಾಡುವ ಆತಂಕ ಇದೆ.‌ ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ 16 ಡಿಗ್ರಿ ಸೆಲ್ಸಿಯಸ್​ಗೆ ವಾತಾವರಣ ಕುಸಿದೆ. ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಚಳಿ ಹೆಚ್ಚಾಗಿದೆ. ಶನಿವಾರದಂದು ನಗರದಲ್ಲಿ 21.6 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದ್ದು, ಈ ವರ್ಷದ ಅತ್ಯಂತ ಚಳಿ ದಿನವಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಜ್ಯ ಹವಾಮಾನ ಇಲಾಖೆ, ಶನಿವಾರದಂದು ಬೆಂಗಳೂರಿನಲ್ಲಿ 21.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಅದು ಈ ವರ್ಷದ ಅತ್ಯಂತ ಚಳಿ ದಿನವಾಗಿದೆ. ಒಂದೇ ಒಂದು ಹನಿ ಮಳೆ ಇಲ್ಲದೆ ಸಾಮಾನ್ಯಕ್ಕಿಂತ -5.8 ಡಿಗ್ರಿ ಸೆಲ್ಸಿಯಸ್​ರಷ್ಟು ಕಡಿಮೆ ತಾಪಮಾನ ಹೊಂದಿರುವುದು ಅದು ತುಂಬಾ ಅಪರೂಪ ಎಂದು ಹೇಳಿದೆ.

ರಾಜ್ಯ ಹವಾಮಾನ ಇಲಾಖೆ ಟ್ವೀಟ್​

ತಮಿಳುನಾಡಿನ ಉಂಟಾಗಿರುವ ದಿತ್ವಾ ಚಂಡಮಾರುತದ ಪರಿಣಾಮದಿಂದಾಗಿ ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಹಗಲಿನ ತಾಪಮಾನವು 25 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆಯಾಗಲು ಕಾರಣವಾಗುತ್ತದೆ. ಸಾಮಾನ್ಯವಾಗಿ ನಿರಂತರ ಮಳೆ ಸುರಿದರೆ ಮಾತ್ರ ಈ ವ್ಯತ್ಯಸವಾಗುವುದನ್ನು ಕಾಣಬಹುದು, ಆದರೆ ಇಂದು ಹಾಗಾಗಲಿಲ್ಲ. ಮೋಡ ಕವಿದ ವಾತಾವರಣದ್ದರೂ ಮಳೆ ಆಗಿಲ್ಲ.

ಕಳೆದ ಮೂರು ದಾಖಲಾಗಿರುವ ಗರಿಷ್ಠ ತಾಪಮಾನ

  • ಗುರುವಾರ: 25.2 ಡಿಗ್ರಿ ಸೆಲ್ಸಿಯಸ್
  • ಶುಕ್ರವಾರ: 25.3 ಡಿಗ್ರಿ ಸೆಲ್ಸಿಯಸ್
  • ಶನಿವಾರ: 21.6 ಡಿಗ್ರಿ ಸೆಲ್ಸಿಯಸ್

ಇದನ್ನೂ ಓದಿ: Bengaluru Weather: ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ಭಾರೀ ಚಳಿ

ಇನ್ನು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 2 ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಇತ್ತ ಬೆಂಗಳೂರಿನಲ್ಲಿ ಮುಂದಿನ 2 ದಿನ ಇದೇ ವಾತಾವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us