AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರಿನ ಜಲ ಮೂಲಗಳಿಗೆ ಹೊಸ ಕಂಟಕ: ರಾಜಕಾಲುವೆ, ಕೆರೆಗಳ ಮೇಲೆ ರಸ್ತೆ ನಿರ್ಮಾಣಕ್ಕೆ GBA, BDA ಮಾಸ್ಟರ್ ಪ್ಲ್ಯಾನ್

ಬೆಂಗಳೂರು ಸಂಚಾರ ನಿಯಂತ್ರಣಕ್ಕೆ ಜಿಬಿಎ, ಬಿಡಿಎ ನೂರಾರು ಕಿ.ಮೀ. ಹೊಸ ರಸ್ತೆ ಯೋಜನೆ ರೂಪಿಸಿವೆ. ಆದರೆ, ಈ ರಸ್ತೆಗಳು ಕೆರೆಗಳು ಹಾಗೂ ರಾಜಕಾಲುವೆಗಳ ಮೇಲೆ ಹಾದುಹೋಗುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ನಗರದ ನೀಲಿ-ಹಸಿರು ಪರಿಸರಕ್ಕೆ ಗಂಭೀರ ಅಪಾಯ ತಂದೊಡ್ಡಿದ್ದು, ರಿಯಲ್ ಎಸ್ಟೇಟ್ ಲಾಭಕ್ಕೆ ಜಲಮೂಲಗಳನ್ನು ಬಲಿ ನೀಡಲಾಗುತ್ತಿದೆ ಎಂಬ ಆರೋಪವಿದೆ. ಸಾರ್ವಜನಿಕರು ಮತ್ತು ತಜ್ಞರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಧಿಕಾರಿಗಳು ಆಕ್ಷೇಪಣೆಗಳ ಪರಿಶೀಲನೆಗೆ ಅವಕಾಶ ನೀಡಿದ್ದಾರೆ.

ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರಿನ ಜಲ ಮೂಲಗಳಿಗೆ ಹೊಸ ಕಂಟಕ: ರಾಜಕಾಲುವೆ, ಕೆರೆಗಳ ಮೇಲೆ ರಸ್ತೆ ನಿರ್ಮಾಣಕ್ಕೆ GBA, BDA ಮಾಸ್ಟರ್ ಪ್ಲ್ಯಾನ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 23, 2026 | 9:31 AM

Share

ಮುಖ್ಯಾಂಶಗಳು

  • ಸಂಚಾರ ದಟ್ಟಣೆ ನಿವಾರಣೆಗೆ ಬೆಂಗಳೂರಿನ ಜಲ ಮೂಲಗಳಿಗೆ ಹೊಸ ಕಂಟಕ
  • ಯಾವೆಲ್ಲಾ ಪ್ರದೇಶಗಳು ಬಾಧಿತ?
  • ಸಾರ್ವಜನಿಕರು ಹಾಗೂ ತಜ್ಞರ ತೀವ್ರ ವಿರೋಧ

ಬೆಂಗಳೂರು, ಅ,23: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು (GBA) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನೂರಾರು ಕಿಲೋಮೀಟರ್ ಉದ್ದದ ಹೊಸ ರಸ್ತೆಗಳ ನಿರ್ಮಾಣಕ್ಕೆ ಬೃಹತ್ ಯೋಜನೆ ರೂಪಿಸಿದೆ. ಆದರೆ, ಈ ಪ್ರಸ್ತಾವಿತ ರಸ್ತೆಗಳು ಕೇವಲ ರಾಜಕಾಲುವೆ ಹಾಗೂ ಕೆರೆಗಳ ಬಫರ್ ವಲಯಗಳಷ್ಟೇ ಅಲ್ಲದೆ, ನೇರವಾಗಿ ಜಲಮೂಲಗಳ ಮೇಲೆಯೇ ಹಾದುಹೋಗಲಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಬೆಂಗಳೂರಿನ ಈಗಾಗಲೇ ಕುಸಿಯುತ್ತಿರುವ ನೀಲಿ-ಹಸಿರು ಪರಿಸರ ಸಂಪತ್ತಿನ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿದೆ.

ಜಿಬಿಎ, ಬಿಡಿಎ ಮತ್ತು ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇತ್ತೀಚೆಗೆ ಪ್ರಕಟಿಸಿರುವ ಸಂಚಾರ ಜಾಲದ ನಕ್ಷೆಗಳ ಪ್ರಕಾರ, ಮುಂಬರುವ ಅಭಿವೃದ್ಧಿ ಕಾರ್ಯಗಳಿಗಾಗಿ ನೂರಾರು ಕಿ.ಮೀ. ರಸ್ತೆಗಳನ್ನು ಗುರುತಿಸಲಾಗಿದೆ. ಒಟ್ಟು 200 ಕೆರೆಗಳು ಮತ್ತು 850 ಕಿ.ಮೀ. ರಾಜಕಾಲುವೆಗಳನ್ನು ಹೊಂದಿರುವ ಜಿಬಿಎ ವ್ಯಾಪ್ತಿಯಲ್ಲಿ, ಹಲವು ಕೆರೆಗಳ ಜಾಗದಲ್ಲೇ ರಸ್ತೆಗಳು ಸಾಗುವಂತೆ ನಕ್ಷೆ ತಯಾರಿಸಲಾಗಿದೆ.

ಯಾವೆಲ್ಲಾ ಪ್ರದೇಶಗಳು ಬಾಧಿತ?:

ಪೂರ್ವ ಬೆಂಗಳೂರು: ದೊಡ್ಡಾನೆಕುಂಡಿ ಮತ್ತು ನಳ್ಳೂರುಹಳ್ಳಿ ಕೆರೆಗಳ ಸುತ್ತಮುತ್ತ.

ದಕ್ಷಿಣ ಬೆಂಗಳೂರು: ಬೇಗೂರು ಮತ್ತು ಪುಟ್ಟೇನಹಳ್ಳಿ ಕೆರೆಗಳು.

ಉತ್ತರ ಬೆಂಗಳೂರು: ದೊಡ್ಡಬೊಮ್ಮಸಂದ್ರ ಕೆರೆ ಸೇರಿದಂತೆ ಪ್ರಮುಖ ಜಲಮೂಲಗಳು.

ಇದರ ಜೊತೆಗೆ ಬೆಳ್ಳಂದೂರು ಕೆರೆ, ಪರಪ್ಪನ ಅಗ್ರಹಾರ ಕೇಂದ್ರದ ಬಳಿಯ ಕೆರೆ, ಬಾಸಾಪುರ ಮತ್ತು ಗರಬೆಭಾವಿಪಾಳ್ಯ ಕೆರೆಗಳ ಸುತ್ತಲೂ ಬಹುಮುಖಿ ರಸ್ತೆಗಳನ್ನು ಪ್ರಸ್ತಾವಿಸಲಾಗಿದೆ. ಮೈಲಸಂದ್ರ ಕೆರೆ, ಸುಬೆದಾರಪಾಳ್ಯ ಕೆರೆ, ಅಂಜನಪುರ ಬಡಾವಣೆಯ ಕೆಂಬಾಳ್ಳಿ ಹಾಗೂ ಸೋಂಪುರ ಭಾಗದಲ್ಲೂ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ರಿಯಲ್ ಎಸ್ಟೇಟ್ ಲಾಭಕ್ಕೆ ಹಸಿರು ವಲಯ ನಾಶ?:

ಖಾಸಗಿ ಜಮೀನುಗಳ ಮೂಲಕ ರಸ್ತೆ ನಿರ್ಮಿಸುವುದಕ್ಕಿಂತ, ಕೆರೆಗಳ ಬಫರ್ ವಲಯ ಹಾಗೂ ರಾಜಕಾಲುವೆಗಳ ಪಕ್ಕದಲ್ಲಿ ರಸ್ತೆ ಮಾಡುವುದು ಸುಲಭದ ಮಾರ್ಗ ಎಂದು ಅಧಿಕಾರಿಗಳು ಭಾವಿಸಿರುವಂತೆ ಕಾಣುತ್ತದೆ. ಈ ರಸ್ತೆಗಳ ನಿರ್ಮಾಣದಿಂದ ಇದುವರೆಗೆ ಅಭಿವೃದ್ಧಿ ವಲಯದಿಂದ ದೂರವಿದ್ದ ಹಸಿರು ಪ್ರದೇಶಗಳು ಹಾಗೂ ನಿರ್ಬಂಧಿತ ಜಾಗಗಳು ವಾಣಿಜ್ಯ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಮುಕ್ತವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಹೆಬ್ಬಾಳ ಟನಲ್ ಯೋಜನೆಗೆ ಕಂಟಕ: 1,128 ಮರಗಳನ್ನು ಕಡಿಯದಂತೆ ಎನ್‌ಜಿಟಿ ತಡೆ; ಬಿಡಿಎ ಪ್ರಸ್ತಾವನೆಗೆ 1,600 ಜನರ ಆಕ್ಷೇಪಣೆ

ಸಾರ್ವಜನಿಕರು ಹಾಗೂ ತಜ್ಞರ ತೀವ್ರ ವಿರೋಧ:

“ರಸ್ತೆಗಳ ರೇಖಾಚಿತ್ರವನ್ನು ಬಹಳ ಅವೈಜ್ಞಾನಿಕವಾಗಿ ಗುರುತಿಸಲಾಗಿದೆ. ಪುಟ್ಟೇನಹಳ್ಳಿ ಕೆರೆಯಲ್ಲಿ 30 ಅಡಿ ಅಗಲದ ಏರಿಯಿದೆ, ಆದರೆ ಅಲ್ಲಿ 60 ಅಡಿ ಅಗಲದ ರಸ್ತೆ ಪ್ರಸ್ತಾವಿಸಲಾಗಿದೆ. ಇದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಸಂಪೂರ್ಣ ನಾಶವಾಗಲಿದೆ” ಎಂದು ಸ್ಥಳೀಯ ನಿವಾಸಿ ಲಿಂಗರಾಜ್ ಡಿ ಅಳಲು ತೋಡಿಕೊಂಡಿದ್ದಾರೆ. “ಬೆಂಗಳೂರಿನಲ್ಲಿ ಕೇವಲ ಶೇ. 5ರಷ್ಟು ಮಾತ್ರ ನೀಲಿ-ಹಸಿರು ಸಂಪತ್ತು ಉಳಿದಿದೆ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸರ್ಕಾರದ ಇಲಾಖೆಗಳೇ ಕೆರೆ ಮತ್ತು ರಾಜಕಾಲುವೆಗಳನ್ನು ರಕ್ಷಿಸುವ ಬದಲು ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಾಗಿ ಅವುಗಳನ್ನು ಬಲಿ ನೀಡುತ್ತಿರುವುದು ದುರದೃಷ್ಟಕರ” ಎಂದು ಸಿಟಿಜೆನ್ಸ್ ಅಜೆಂಡಾ ಫಾರ್ ಬೆಂಗಳೂರು ಇದರ ಸಂಸ್ಥಾಪಕ ಸಂದೀಪ್ ಅನಿರ್ಧನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಸ್ಪಷ್ಟನೆ ಏನು?:

ಈ ಕುರಿತು ಪ್ರತಿಕ್ರಿಯೆ ನೀಡಿರುವ GBA ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕಾನೂನಿನ ಪ್ರಕಾರ ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ವಲಯಗಳಲ್ಲಿ ರಸ್ತೆಗಳನ್ನು ನಿರ್ಮಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವಿದ್ದು, ನಿರ್ದಿಷ್ಟ ಆಕ್ಷೇಪಣೆಗಳು ಬಂದರೆ ಪರಿಶೀಲಿಸಿ ರಸ್ತೆಗಳ ನಕ್ಷೆ ಹಾಗೂ ಜೋಡಣೆಯನ್ನು ಬದಲಾವಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಕ್ಷೆಗಳು ಅಂತಿಮಗೊಂಡ ಬಳಿಕ ಪರಿಷ್ಕೃತ ಮಹಾಯೋಜನೆ 2015ಕ್ಕೆಸೇರಿಸಲ್ಪಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ