AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕರ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ ದುಬಾರಿ: ಗಗನಕ್ಕೇರಿದ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ ಬೆಲೆ

ಬೆಂಗಳೂರಿನಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಜೋರಾಗಿದ್ದರೂ, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ, ಗೆಣಸು, ಅವರೆಕಾಯಿ ಬೆಲೆ ಗಗನಕ್ಕೇರಿದೆ. ಕೆ.ಆರ್. ಮಾರ್ಕೆಟ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಉತ್ಸಾಹದಿಂದ ಖರೀದಿ ಮಾಡುತ್ತಿದ್ದಾರೆ. ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಹಬ್ಬದ ಖುಷಿ ಹೆಚ್ಚಿದೆ.

ಮಕರ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ ದುಬಾರಿ: ಗಗನಕ್ಕೇರಿದ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ ಬೆಲೆ
ಸಾಂದರ್ಭಿಕ ಚಿತ್ರ
Kiran Surya
| Edited By: |

Updated on:Jan 15, 2026 | 8:21 AM

Share

ಬೆಂಗಳೂರು, ಜ.15: ಬೆಂಗಳೂರು ಮೊದಲೇ ದುಬಾರಿ, ಇನ್ನು ಹಬ್ಬ ದಿನ ಕೇಳಬೇಕಾ. ಮಕರ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ (Bengaluru Sankranti shopping) ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಎಲ್ಲವೂ ದುಬಾರಿ ಎಂದು ಗ್ರಾಹಕರು ಮುಖದಲ್ಲಿ ಹಬ್ಬದ ಖುಷಿಯೇ ಇಲ್ಲ. ಈ ಹಬ್ಬದಂದು ಹಿನ್ನಲೆಯಲ್ಲಿ ಗ್ರಾಹಕರ ಕಿಸೆ ಸುಡುವುದು ಖಂಡಿತ. ಕೆ.ಆರ್ ಮಾರ್ಕೆಟ್ ನಲ್ಲಿ ಕಬ್ಬುಗಳ ಜೊತೆಗೆ ಎಳ್ಳು ಬೆಲ್ಲ, ಕಡಲೆಕಾಯಿ, ಗೆಡ್ಡೆ ಗೆಣಸುಗಳು, ಹಣ್ಣು, ಹೂವುಗಳ ಕಾರುಬಾರು ಜೋರಾಗಿದೆ. ಇನ್ನು ವಿಶೇಷವೆಂದರೆ ಬೆಂಗಳೂರಿನ ಬೀದಿ.. ಬೀದಿಗಳಲ್ಲಿ ಕಬ್ಬುಗಳ ಮಾರಾಟ ಹೆಚ್ಚಾಗಿದೆ. ಎಳ್ಳು ಬೆಲ್ಲದ ಜತೆಗೆ ಈ ಬಾರಿ ಸಂಕಾಂತ್ರಿಗೆ ಕಬ್ಬು ಕೂಡ ಪೈಪೋಟಿ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಸಂಕ್ರಾಂತಿಯ ಸುಗ್ಗಿ ಜೋರಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿಯ ಭರಾಟೆ ಕಳೆದ ಎರಡು ದಿನಗಳಿಂದ ಜೋರಾಗಿದೆ.

ಕೆಆರ್ ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ವಿಜಯನಗರ, ಜಯನಗರ, ದಾಸರಹಳ್ಳಿ, ಕೆಆರ್ ಪುರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಕಬ್ಬು, ಖರೀದಿ ಭರಾಟೆ ಜೋರಾಗಿದೆ. ಬೆಂಗಳೂರಿನಲ್ಲಿ ಮರಕ ಸಂಕಾಂತ್ರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಕಾರಣ ಜನ ಖಂಡಿತ ಬೆಲೆ ಏರಿಕೆ ಆದ್ರೂ ಇವುಗಳನ್ನು ಖರೀದಿ ಮಾಡುತ್ತಾರೆ. ಇತರ ಮಾರುಕಟ್ಟೆಗಳಿಗೆ ಹೊಲಿಸಿದ್ರೆ ಕೆ.ಆರ್ ಮಾರ್ಕೆಟ್ ನಲ್ಲಿ ಸ್ವಲ್ಪ ಕಡಿಮೆ ಇದೆ ಎಂದು ಜನ ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ಬೆಲೆ ದುಬಾರಿಯಾಗಿದೆ. ಅದರಲ್ಲೂ ಕನಕಾಂಬರ, ಕಾಕಡ, ಮಲ್ಲಿಗೆ ಮತ್ತು ಸೇವಂತಿ ಹೂವುಗಳ ದರ ಹೆಚ್ಚಾಗಿದೆ. ದಾಳಿಂಬೆ, ಕಡಲೆಕಾಯಿ, ಅವರೆಕಾಯಿ, ಬೆಲ್ಲ ಮತ್ತು ಕಬ್ಬಿನ ಬೆಲೆಗಳು ಏರಿಕೆಯಾಗಿವೆ. ಅದರೂ ಕೂಡ ಗ್ರಾಹಕರ ಖರೀದಿ ಮಾತ್ರ ಜೋರಾಗಿದೆ. ಈ ಬೆಲೆ ಏರಿಕೆಯಿಂದ ವ್ಯಾಪರಸ್ಥರ ಮೊಗದಲ್ಲಿ ಅಂದಹಾಸ ತಂದಿದೆ.

ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಕಳಪೆ ಗಾಳಿ ಗುಣಮಟ್ಟ, ಅಸ್ತಮಾ, ಉಸಿರಾಟ ತೊಂದರೆ ಹೆಚ್ಚಾಗಲಿದೆ

ಹೂಗಳು ಬೆಲೆ ಎಷ್ಟಿದೆ?

ಕನಕಾಂಬರ-700-800 ರೂ.

ಕಾಕಡ-500-600 ರೂ.

ಸೇವಂತಿ-70 ರೂ.

ಗುಲಾಬಿ-80 ರೂ.

ಚಂಡು- 30-40 ರೂ.

ಹಣ್ಣುಗಳ ಬೆಲೆ ಎಷ್ಟಿದೆ?

ಕಬ್ಬು ಜೋಡಿ- 120 -150 ರೂ.

ಬೆಲ್ಲ (ಒಂದು ಕೆ.ಜಿ.) -80 ರೂ.

ಸೇಬು ಹಣ್ಣು- 160 ರೂ.

ದಾಳಿಂಬೆ ಹಣ್ಣು- 140 ರೂ.

ಕಡಲೆಕಾಯಿ-100 ರೂ.

ಅವರೆಕಾಯಿ- 50 ರಿಂದ 60 ರೂ.

ಸಿಹಿ ಗೆಣಸು- 40 ರುಪಾಯಿ

ಇನ್ನು ಮಾವಿನಸೊಪ್ಪು ಕಟ್ಟು- 20 ರೂ, ರೆಡಿಮೇಡ್ ಎಳ್ಳು ಬೆಲ್ಲಕ್ಕೂ ಡಿಮ್ಯಾಂಡ್ ಇದೆ. ಇದಕ್ಕೂ 250 ರಿಂದ 300 ರುಪಾಯಿ ಇದೆ. ಕಬ್ಬಿನ ಜೊತೆಗೆ ಮಾರುಕಟ್ಟೆಗೆ ಗೆಡ್ಡೆ, ಗೆಣಸು ಅವರೆಕಾಳು, ನೆಲ ಕಡಲೆ, ಹಬ್ಬಕ್ಕೆ ಬಹು ಮುಖ್ಯವಾಗಿ ಬೇಕಾಗುವಂತಹ ಹೂವಿನ ಎಲ್ಲದರ ಬೆಲೆ ಕೂಡ ಏರಿಕೆ ಕಂಡಿದೆ. ಇನ್ನು ವರ್ಷದ ಮೊದಲನೇ ಹಬ್ಬ ಆಗಿರುವ ಕಾರಣ ಎಷ್ಟೇ ಬೆಲೆ ಏರಿಕೆ ಆದ್ರು ಕೂಡ ಹಬ್ಬ ಮಾಡೋದು ಅನಿವಾರ್ಯ ಅಂತ ಸಿಲಿಕಾನ್ ಸಿಟಿ ಮಂದಿ ನಗುತ್ತಾಳೆ ಖರೀದಿ ಮಾಡ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:15 am, Thu, 15 January 26