ನನಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಎಂದ ಶಿಕ್ಷಕಿಗೆ ವಿದ್ಯಾರ್ಥಿಗಳು ಮಾಡಿದ್ದೇನು? ನೋಡಿ

ಬೆಂಗಳೂರಿನ ಶಾಲೆಯೊಂದರ 'ಟೀಚ್ ಫಾರ್ ಇಂಡಿಯಾ' ಶಿಕ್ಷಕಿ ದೀಪಾಲಿ ದಹಿಕಾಂಬ್ಳೆ ಅವರಿಗೆ ವಿದ್ಯಾರ್ಥಿಗಳು ಪ್ರತಿದಿನ ಹಣ್ಣುಗಳನ್ನು ತಂದುಕೊಡುತ್ತಿರುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ಶಿಕ್ಷಕಿಯ ಕೇವಲ ಒಂದು ಮಾತನ್ನು ಗಂಭೀರವಾಗಿ ಪರಿಗಣಿಸಿದ ಮಕ್ಕಳು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇದು ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯ ಮತ್ತು ಮಕ್ಕಳ ನಿಸ್ವಾರ್ಥ ಪ್ರೀತಿಯ ಅದ್ಭುತ ಕಥೆಯಾಗಿದ್ದು, ಇಂಟರ್ನೆಟ್‌ನಲ್ಲಿ ಜನರ ಮನ ಗೆದ್ದಿದೆ.

ನನಗೆ ಹಣ್ಣುಗಳೆಂದರೆ ತುಂಬಾ ಇಷ್ಟ ಎಂದ ಶಿಕ್ಷಕಿಗೆ ವಿದ್ಯಾರ್ಥಿಗಳು ಮಾಡಿದ್ದೇನು? ನೋಡಿ
ವಿಡಿಯೋ
Image Credit source: social Media

Updated on: Feb 02, 2026 | 11:38 AM

ಬೆಂಗಳೂರು, ಫೆ.2: ಬೆಂಗಳೂರಿನ ಶಾಲೆಯೊಂದರ ಮಕ್ಕಳ (Bengaluru Students) ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಈ ವಿಡಿಯೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ‘ಟೀಚ್ ಫಾರ್ ಇಂಡಿಯಾ’ (Teach For India)ದಲ್ಲಿ ಶಿಕ್ಷಕಿ ತರಬೇತಿ ಪಡೆಯುತ್ತಿರುವ ದೀಪಾಲಿ ದಹಿಕಾಂಬ್ಳೆ, ಒಮ್ಮೆ ತಮ್ಮ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ತಮಗೆ ‘ಹಣ್ಣುಗಳೆಂದರೆ ಇಷ್ಟ’ ಎಂದು ಸುಮ್ಮನೆ ಹೇಳಿದ್ದರು. ಶಿಕ್ಷಕಿಯ ಈ ಮಾತನ್ನು ಬಹಳ ಗಂಭೀರವಾಗಿ ತೆಗೆದುಕೊಂಡ ಮಕ್ಕಳು, ಅಂದಿನಿಂದ ಪ್ರತಿದಿನ ಅವರಿಗೆ ಹಣ್ಣುಗಳನ್ನು ತಂದುಕೊಡಲು ಆರಂಭಿಸಿದ್ದಾರೆ. ದೀಪಾಲಿ ತನ್ನ ಫೆಲೋಶಿಪ್‌ನ ಭಾಗವಾಗಿ ದೂರದ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಹೋಗಿ ಪಾಠ ಮಾಡುತ್ತಾರೆ.

ದೀಪಾಲಿ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, ಶಾಲೆಯ ಪುಟ್ಟ ಮಕ್ಕಳು ಕಿಟಕಿಯ ಮೂಲಕ ಶಿಕ್ಷಕರಿಗೆ ಹಣ್ಣುಗಳನ್ನು ನೀಡುತ್ತಿರುವ ದೃಶ್ಯವಿದೆ. ಮಕ್ಕಳು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ಶಿಕ್ಷಕಿಯ ಮೇಲಿನ ಪ್ರೀತಿಯಿಂದ ಪ್ರತಿದಿನ ತಲಾ ಒಂದು ಹಣ್ಣನ್ನು ತಂದುಕೊಡುವ ರೂಢಿ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, ನೆಟ್ಟಿಗರು ಮಕ್ಕಳ ಈ ನಿಸ್ವಾರ್ಥ ಪ್ರೀತಿ ಮತ್ತು ಶಿಕ್ಷಕಿ ಮಕ್ಕಳಲ್ಲಿ ಮೂಡಿಸಿರುವ ನಂಬಿಕೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್​​​ ನ್ಯೂಸ್​: ಇನ್ಮುಂದೆ ಈ ರೈಲಿನಲ್ಲಿ ಊಟ ಉಚಿತ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ನಾವು ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಮಿಗಿಲಾದ ಕ್ಷಣಗಳು ಇವು. ಮಕ್ಕಳ ಈ ಪುಟ್ಟ ಉಡುಗೊರೆಗಳು ನನಗೆ ಹೆಚ್ಚು ಸಂತೋಷ ನೀಡುತ್ತವೆ ಎಂದು ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿ ಇನ್ಸ್ಟಾಗ್ರಾಮ್​​​ ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ನೋಡುವ ಈ ಶಿಕ್ಷಕಿ ದೊಡ್ಡ ಅಭಿನಂದನೆಗಳು ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಮತ್ತೊಬ್ಬರು, ಶೈಕ್ಷಣಿಕ ಫಲಿತಾಂಶಗಳನ್ನು ಮಾತ್ರವಲ್ಲದೆ ಸಹಾನುಭೂತಿಯನ್ನು ರೂಪಿಸುವಲ್ಲಿ ಶಿಕ್ಷಕರು ವಹಿಸುವ ಪಾತ್ರ ಇದು ಎಂದು ಹೇಳಿದ್ದಾರೆ. ಇಂತಹ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಇನ್ನೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ