AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರಿಗೇ ಬುದ್ಧಿ ಕಲಿಸಿದ ಬೆಂಗಳೂರಿನ ಬೀದಿ ನಾಯಿಗಳು: ಟ್ರಾಫಿಕ್ ರೂಲ್ಸ್ ಪಾಲಿಸಿ ‘ಜಿಬ್ರಾ ಕ್ರಾಸಿಂಗ್’ನಲ್ಲೇ ರಸ್ತೆ ದಾಟಿದ ಶ್ವಾನಗಳ ಗುಂಪು

ಬೆಂಗಳೂರಿನ ಬೀದಿ ನಾಯಿಗಳು ಜಿಬ್ರಾ ಕ್ರಾಸಿಂಗ್ ಬಳಸಿ ರಸ್ತೆ ದಾಟಿದ ವೈರಲ್ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಸಂಚಾರ ನಿಯಮ ಪಾಲಿಸುವ ಈ ಶಿಸ್ತುಬದ್ಧ ನಾಯಿಗಳು ಮನುಷ್ಯರಿಗೂ ಪಾಠ ಕಲಿಸಿವೆ. "ಡೋಗೇಶ್" ಎಂಬ ತಮಾಷೆಯ ಶೀರ್ಷಿಕೆಯಡಿ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ, ಮಾನವರ ಅಜಾಗರೂಕತೆ ಮತ್ತು ಪ್ರಾಣಿಗಳ ಪ್ರಜ್ಞೆಯನ್ನು ಎತ್ತಿ ಹಿಡಿದಿದೆ. ಇದು ಸಾರ್ವಜನಿಕರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ.

ಮನುಷ್ಯರಿಗೇ ಬುದ್ಧಿ ಕಲಿಸಿದ ಬೆಂಗಳೂರಿನ ಬೀದಿ ನಾಯಿಗಳು: ಟ್ರಾಫಿಕ್ ರೂಲ್ಸ್ ಪಾಲಿಸಿ 'ಜಿಬ್ರಾ ಕ್ರಾಸಿಂಗ್'ನಲ್ಲೇ ರಸ್ತೆ ದಾಟಿದ ಶ್ವಾನಗಳ ಗುಂಪು
ವೈರಲ್​​​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Jul 20, 2026 | 2:38 PM

Share

ಬೆಂಗಳೂರು, ಜು.20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆದರೆ, ಇದೀಗ ನಗರದ ಅತ್ಯಂತ ಬುದ್ಧಿವಂತ ಹಾಗೂ ಕಾನೂನು ಪಾಲಿಸುವ ಶ್ವಾನಗಳ ಹಿಂಡೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಬೆಂಗಳೂರಿನ ಬೀದಿಯೊಂದರಲ್ಲಿ ನಿಯಮಬದ್ಧವಾಗಿ ಕೇವಲ ಜಿಬ್ರಾ ಕ್ರಾಸಿಂಗ್ (Zebra Crossing) ಮೂಲಕವೇ ರಸ್ತೆ ದಾಟುತ್ತಿರುವ ಬೀದಿ ನಾಯಿಗಳ ಶಿಸ್ತು ಇಡೀ ಸೋಶಿಯಲ್​ ಮೀಡಿಯಾದಲ್ಲಿ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಹಂಚಿಕೊಳ್ಳಲಾದ ಈ ಕಿರು ವಿಡಿಯೋಗೆ, “ಬೆಂಗಳೂರಿನಲ್ಲಿ ಜಿಬ್ರಾ ಕ್ರಾಸಿಂಗ್ ಬಳಸುತ್ತಿರುವ ಡೋಗೇಶ್” ಎಂಬ ತಮಾಷೆಯ ಶೀರ್ಷಿಕೆಯನ್ನು ನೀಡಲಾಗಿದೆ. ವಿಡಿಯೋ ಚಿಕ್ಕದಾಗಿದ್ದರೂ, ಅತ್ಯಂತ ಮನರಂಜನಾತ್ಮಕವಾಗಿದ್ದು, ನೋಡನೋಡುತ್ತಿದ್ದಂತೆಯೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಾಹನಗಳು ಬರುವ ಹಾದಿಯನ್ನು ಗಮನಿಸಿ, ಪಾದಚಾರಿಗಳಿಗಾಗಿ ಮೀಸಲಿಟ್ಟ ಜಿಬ್ರಾ ಕ್ರಾಸಿಂಗ್‌ನಲ್ಲೇ ನಾಯಿಗಳು ಸಾಲಾಗಿ ರಸ್ತೆ ದಾಟುವ ದೃಶ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಮಳೆ ಕೊರತೆಯಿಂದ ಬತ್ತಿದ ತುಂಗಭದ್ರಾ ನದಿ: ನೀರಿಲ್ಲದೆ ಸಾವಿರಾರು ಮೀನುಗಳು ಸಾವು

ಎಕ್ಸ್​ ಪೋಸ್ಟ್​ ಇಲ್ಲಿದೆ ನೋಡಿ:

ಈ ಶ್ವಾನಗಳ ವ್ಯವಸ್ಥಿತ ಮತ್ತು ನಾಗರಿಕ ನಡವಳಿಕೆಯನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಮನುಷ್ಯರು ಈ ಪ್ರಾಣಿಗಳನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ನಾಯಿಗಳಿಗೆ ಜಿಬ್ರಾ ಕ್ರಾಸಿಂಗ್‌ನ ಉದ್ದೇಶ ಸರಿಯಾಗಿ ಅರ್ಥವಾಗಿದೆ. ಆದರೆ ಕೆಲವು ಮನುಷ್ಯರು ಇಂದಿಗೂ ಜಿಬ್ರಾ ಕ್ರಾಸಿಂಗ್‌ಗಳನ್ನು ಪಾರ್ಕಿಂಗ್ ಜಾಗ ಎಂದುಕೊಂಡಿದ್ದಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. “ಮನುಷ್ಯರಿಗಿಂತ ಪ್ರಾಣಿಗಳಿಗೇ ರಸ್ತೆ ಮತ್ತು ಜಾಗದ ಪ್ರಜ್ಞೆ ಹೆಚ್ಚಾಗಿದೆ” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದ ನಾಯಿಗಳು ಹೆಚ್ಚು ನಾಗರಿಕವಾಗಿವೆ ಇನ್ನೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ನಡುವೆ ಇಂತಹ ಸಕಾರಾತ್ಮಕ ಮತ್ತು ಮುದ್ದಾದ ವಿಡಿಯೋಗಳು ಸಾರ್ವಜನಿಕರಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತಿರುವುದು ವಿಶೇಷವಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Mon, 20 July 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More