ಟಿಡಿಆರ್​ ಹಗರಣ: ಬೆಂಗಳೂರಿನ 9 ಸ್ಥಳಗಳಲ್ಲಿ ಇಡಿ ದಾಳಿ, ಶೋಧ

ಬೆಂಗಳೂರಿನ ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಕಂಪನಿಯ ವಿರುದ್ಧ ಕೇಳಿಬಂದಿರುವ ಟಿಡಿಆರ್ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಬೆಂಗಳೂರಿನ 9 ಸ್ಥಳಗಳಲ್ಲಿ ಏಕಕಾಲಿಕ ದಾಳಿ ನಡೆಸಿ, ಅಕ್ರಮ ಹಣ ವ್ಯವಹಾರದ ದಾಖಲೆಗಳನ್ನು ಪತ್ತೆಹಚ್ಚಿದೆ. ವಾಲ್ಮಾರ್ಕ್ ಮಾಲೀಕ ರತನ್ ಲಾತ್ 27 ಕೋಟಿ ರೂಪಾಯಿಗಳ ಟಿಡಿಆರ್ ಅಕ್ರಮವಾಗಿ ಮಾರಾಟ ಮಾಡಿದ ಆರೋಪವಿದೆ. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯ್ದೆ-2002ರ ನಿಬಂಧನೆಗಳ ಅಡಿಯಲ್ಲಿ ಇಡಿ ತನಿಖೆ ನಡೆಸುತ್ತಿದೆ.

ಟಿಡಿಆರ್​ ಹಗರಣ: ಬೆಂಗಳೂರಿನ 9 ಸ್ಥಳಗಳಲ್ಲಿ ಇಡಿ ದಾಳಿ, ಶೋಧ
ಜಾರಿ ನಿರ್ದೇಶನಾಲಯ
Edited By:

Updated on: May 23, 2025 | 5:23 PM

ಬೆಂಗಳೂರು, ಮೇ 23: ಟಿಡಿಆರ್​ ಹಗರಣಕ್ಕೆ (TDR Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲುಯದ (ED) ಅಧಿಕಾರಿಗಳು ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಕಂಪನಿಗೆ ಸಂಬಂಧಿಸಿದ ಬೆಂಗಳೂರಿನಲ್ಲಿನ (Bengaluru) ಒಂಬತ್ತು ಸ್ಥಳಗಳಲ್ಲಿ ಏಕಾಕಾಲಕ್ಕೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಅಕ್ರಮ ಹಣದ ವಹಿವಾಟು ನಡೆಸಿರುವ ದಾಖಲೆಗಳು ಪತ್ತೆಯಾಗಿವೆ.

ಮೆಸರ್ಸ್ ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿರುದ್ಧ ಟಿಡಿಆರ್​​ ಅನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಾಲ್ಮರ್ಕ್ ಮಾಲೀಕ ರತನ್ ಲಾತ್ ಅವರು ಡಿಸಿಆರ್ ಪಡೆದು, 27 ಕೋಟಿಯಷ್ಟು ಟಿಡಿಆರ್​ ಅನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ಎಸಿಬಿ ಪ್ರಕರಣ ದಾಖಲಿಸಿಕೊಂಡು ತನಿಖೆ‌ ನಡೆಸಿ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

ಇದನ್ನೂ ಓದಿ
ನ್ಯಾಷನಲ್ ಹೆರಾಲ್ಡ್ ಪ್ರಕರಣ;ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ನೋಟಿಸ್ ಜಾರಿ
ರಾಹುಲ್ ವಿದೇಶಕ್ಕೆ ಹೋದಾಗಲೆಲ್ಲಾ ದಾಳಿ: ಬಿಜೆಪಿ ಐಟಿ ಸೆಲ್​​ ವಿರುದ್ಧ ಕೇಸ್
ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಬೆಂಬಲಕ್ಕೆ ನಿಂತ ಖರ್ಗೆ
Breaking ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿಗೆ ಇಡಿ ಸಮನ್ಸ್

ಟ್ವಿಟರ್​ ಪೋಸ್ಟ್​

ಇದನ್ನೂ ಓದಿ: ಡಿಕೆ ಬ್ರದರ್ಸ್​ ಬುಡಕ್ಕೆ ನ್ಯಾಷನಲ್ ಹೆರಾಲ್ಡ್ ಪ್ರಕರಣ: ಇಡಿ ಚಾರ್ಜ್​ಶೀಟ್​ಗೆ ಹೇಳಿದ್ದೇನು?

ಇದೀಗ, ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕಾಯ್ದೆ-2002ರ ನಿಬಂಧನೆ ಅಡಿಯಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ರಿಚ್ಮಂಡ್ ರಸ್ತೆಯಲ್ಲಿರುವ ಮೆಸರ್ಸ್ ವಾಲ್ಮಾರ್ಕ್ ರಿಯಾಲ್ಟಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಮತ್ತು ಕಂಪನಿಯ ನಿರ್ದೇಶಕರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಹಲವು ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಏನಿದು ಹರಗಣ?

ಟಿಡಿಆರ್ ಅನ್ನು ಬ್ರೋಕರ್​ಗಳು ಮತ್ತು ಆಸ್ತಿಗಳ ಹಿಂದಿನ ಮಾಲೀಕರು, ಬಿಬಿಎಂಪಿ ನೌಕರರು ಕಂದಾಯ ಅಧಿಕಾರಿಗಳೊಂದಿಗೆ ಸೇರಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಟಿಡಿಆರ್ ಪಡೆಯಲು ಶಾಮೀಲಾಗಿ ಸರ್ಕಾರವನ್ನು ಹಾಗೂ ಆಸ್ತಿಗಳ ನಿಜವಾದ ಮಾಲೀಕರನ್ನು ವಂಚಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಕಂದಾಯ ಬ್ರೋಕರ್ ಗಳು ಶಾಮೀಲಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ವಿಸ್ತೀರ್ಣವನ್ನು ಹೆಚ್ಚಿಸಿದ್ದಾರೆ. ಸಾರ್ವಜನಿಕ ರಸ್ತೆಗಳನ್ನು, ಹೆಚ್ಚುವರಿ ಮಹಡಿಗಳು ಮತ್ತು ನಕಲಿ ಕಟ್ಟಡಗಳಿವೆ ಎಂದು ಹೇಳಿಕೊಂಡು ಸರ್ಕಾರಕ್ಕೆ ತಪ್ಪು ಲೆಕ್ಕ ನೀಡಿದ್ದಾರೆ. ಇದರಿಂದಾಗಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಗಣನೀಯ ಆರ್ಥಿಕ ನಷ್ಟವಾಗಿದೆ.

ಹಗರಣದಲ್ಲಿ ಬಿಬಿಎಂಪಿಯ ಉನ್ನತ ಅಧಿಕಾರಿಗಳೊಂದಿಗೆ ಡೆವಲಪರ್​​ಗಳು ಭಾಗಿಯಾಗಿರುವುದನ್ನು ಇಡಿ ಪತ್ತೆಹಚ್ಚಿದೆ. 2009 ರಿಂದ 2015 ರವರೆಗೆ ಬಿಬಿಎಂಪಿ ಮತ್ತು ನಂತರ ಬಿಡಿಎ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಹೊರಡಿಸಿದ ಟಿಡಿಆರ್‌ನಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎನ್ನಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Fri, 23 May 25