ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾಳೆ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಟೆಕ್ಕಿ

|

Updated on: Mar 19, 2025 | 1:14 PM

ಬೆಂಗಳೂರಿನ ಟೆಕ್ಕಿ ಶ್ರೀಶಾಂತ್ ಅವರು ತಮ್ಮ ಪತ್ನಿ ಬಿಂದುಶ್ರೀ ಮತ್ತು ಅವರ ಕುಟುಂಬದವರ ವಿರುದ್ಧ ವೈಯಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲು ಮಾಡಿದ್ದಾರೆ. ಹಣಕ್ಕಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕಿರುಕುಳದಿಂದ ಕೆಲಸ ಕಳೆದುಕೊಂಡಿದ್ದಾರೆ ಮತ್ತು ವಿಚ್ಛೇದನಕ್ಕೆ 45 ಲಕ್ಷ ರೂಪಾಯಿ ಬೇಡಿಕೆಯಿದೆ ಎಂದು ಹೇಳಿದ್ದಾರೆ. ಪತ್ನಿ ಬಿಂದುಶ್ರೀ ಪತಿ ಜೊತೆ ಬಾಳಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾಳೆ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಟೆಕ್ಕಿ
ಟೆಕ್ಕಿ ಶ್ರೀಕಾಂತ್​
Follow us on

ಬೆಂಗಳೂರು, ಮಾರ್ಚ್​ 19: ಪತ್ನು ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಟೆಕ್ಕಿ ಅತುಲ್​ ಸುಭಾಷ್​ (Atul Subash) ಆತ್ಮಹತ್ಯೆ ಗೆ ಶರಣಾಗಿದ್ದ ಪ್ರಕರಣ ದೇಶ್ಯಾದ್ಯಂತ ಚರ್ಚೆಯಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಹಣಕ್ಕಾಗಿ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ನನಗೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ಟೆಕ್ಕಿ ಶ್ರೀಶಕಾಂತ್​ ಎಂಬವರು ಆರೋಪ ಮಾಡಿದ್ದಾರೆ. ಪತಿ ಶ್ರೀಕಾಂತ್ ಪತ್ನಿ ಬಿಂದುಶ್ರೀ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ (Vyalikaval Police Station) ಎನ್​ಸಿಆರ್ ದಾಖಲು ಮಾಡಿದ್ದಾರೆ.

“ಬಿಂದುಶ್ರೀಯನ್ನು 2022ರ ಆಗಸ್ಟ್​ನಲ್ಲಿ ವಿವಾಹವಾಗಿದ್ದೇನೆ. ಮದುವೆಯಾಗಿ ಎರಡು ವರ್ಷಗಳಾದರೂ ಸಹ ಒಂದು ದಿನ ಸರಿಯಾಗಿ ಸಂಸಾರ ಮಾಡಿಲ್ಲ. ಬಲವಂತವಾಗಿ ಮುಟ್ಟಿದರೆ ಡೆತ್​ನೋಟ್ ಬರೆದಿಟ್ಟು ಸಾಯುತ್ತೇನೆ ಅಂತ ಬ್ಲಾಕ್ ಮೇಲ್ ಮಾಡುತ್ತಾರೆ. ಹಣಕ್ಕಾಗಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಮತ್ತು ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾರೆ. ಪತ್ನಿ ಮನೆಯವರು ಮನೆ ಕೊಂಡುಕೊಳ್ಳಲು ಲಕ್ಷಾಂತರ ರೂ. ಹಣ ಕೇಳಿದ್ದರು. ಹಣ ನೀಡದಿದ್ದಕ್ಕೆ ಪತ್ನಿ ಕಡೆಯಿಂದ ಕಿರುಕುಳ ಕೊಡುಸುತ್ತಿದ್ದಾರೆ. ನೀನು ಸರಿ ಹೋಗುವವರೆಗೂ ನಿನ್ನ ಪಕ್ಕ ಬರಲ್ಲ. ಹೀಗಾಗಿ, 60 ವರ್ಷ ಆದ್ಮೇಲೆ ಮಕ್ಕಳು ಮಾಡಿಕೊಳ್ಳೋಣ” ಎಂದು ಶ್ರೀಕಾಂತ ಪತ್ನಿ ಬಿಂದುಶ್ರೀ ಮತ್ತು ಅವರ ಕುಟುಂಬಸ್ಥರ ವಿರುದ್ಧ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Bengaluru techie death: ಟೆಕ್ಕಿ ಅತುಲ್​ ಸುಭಾಷ್​ ಮಗು ಎಲ್ಲಿ? ಬೆಂಗಳೂರು ಪೊಲೀಸರಿಂದ ಮಹತ್ವದ ಸುಳಿವು

ಇದನ್ನೂ ಓದಿ
ಅತುಲ್ ಸುಭಾಷ್ ಕೇಸ್​: ಮಗುವನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
ಅತುಲ್ ಸುಭಾಷ್‌ ಆತ್ಮಹತ್ಯೆ ಕೇಸ್​: ನಿಖಿತಾ ಸೇರಿ ಮೂವರಿಗೆ ಜಾಮೀನು ಮಂಜೂರು
Atul Subhash​: ಆರೋಪಿಗಳ ಬಂಧನಕ್ಕೆ ಪೊಲೀಸರು ಸೃಷ್ಟಿಸಿದ್ದರು ವ್ಯೂಹ
ಅತುಲ್​ ಸುಭಾಷ್ ಆತ್ಮಹತ್ಯೆ: ಟೆಕ್ಕಿಯ ​ಪತ್ನಿ, ಅತ್ತೆ ಮತ್ತು ಭಾಮೈದ ಬಂಧನ

“ಶ್ರೀಕಾಂತ್ ಖಾಸಗಿ ಕಂಪನಿವೊಂದರಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿದ್ದೆ ವರ್ಕ್ ಫ್ರಮ್ ಹೋಮ್ ವೇಳೆ ಪತ್ನಿಯ ಕಿರುಕುಳದಿಂದ ಶ್ರೀಕಾಂತ್​ ಕೆಲಸ ಕಳೆದುಕೊಂಡಿದ್ದೇನೆ. ಮೀಟಿಂಗ್ ವೇಳೆ ಬಂದು ಜಗಳ, ಡ್ಯಾನ್ಸ್ ಮಾಡುತ್ತಾಳೆ. ವಿಚ್ಛೇದನ ಕೇಳಿದರೆ 45 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೀಕಾಂತ್ ಪತ್ನಿ ವಿರುದ್ಧ ಆರೋಪಿಸಿದ್ದಾರೆ.

ಇನ್ನು, ಪೊಲೀಸರು ಬಿಂದುಶ್ರೀ ಹೇಳಿಕೆ ಪಡೆದುಕೊಂಡಿದ್ದು, “ಆತನ‌ ಜೊತೆ ಬಾಳಲು ಇಷ್ಟ ಇಲ್ಲ, ಇಬ್ಬರಿಗೂ ಸರಿಹೊಂದಲ್ಲ ಎಂದು ಹೇಳಿದ್ದಾರೆ.

ವರದಿ: ಪ್ರದೀಪ್​ ಚಿಕ್ಕಾಟಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:13 pm, Wed, 19 March 25