ಅತುಲ್​ ಸುಭಾಷ್​ ಆತ್ಮಹತ್ಯೆ: ಪೊಲೀಸರು ಸೃಷ್ಟಿಸಿದ್ದ ವ್ಯೂಹಕ್ಕೆ ಆರೋಪಿಗಳು ಬಿದ್ದಿದ್ದು ಹೀಗೆ

Bengaluru techie death: ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿ, ಆರೋಪಿಗಳ ಮೊಬೈಲ್ ಫೋನ್ ಕಾಲ್‌ಗಳು ಮತ್ತು ಲೊಕೇಶನ್‌ಗಳನ್ನು ಬಳಸಿಕೊಂಡು ಅವರನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹರಿಯಾಣದ ಗುರುಗ್ರಾಮ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಅತುಲ್​ ಸುಭಾಷ್​ ಆತ್ಮಹತ್ಯೆ: ಪೊಲೀಸರು ಸೃಷ್ಟಿಸಿದ್ದ ವ್ಯೂಹಕ್ಕೆ ಆರೋಪಿಗಳು ಬಿದ್ದಿದ್ದು ಹೀಗೆ
ಅತುಲ್​ ಸುಭಾಷ್ ಪತ್ನಿ, ಅತ್ತೆ, ಭಾಮೈದ, ​ಅತುಲ್​ ಸುಭಾಷ್
Follow us
ವಿವೇಕ ಬಿರಾದಾರ
|

Updated on:Dec 16, 2024 | 1:18 PM

ಬೆಂಗಳೂರು, ಡಿಸೆಂಬರ್​ 16: ಉತ್ತರ ಪ್ರದೇಶ (Uttar Pradesh) ಮೂಲದ ಟೆಕ್ಕಿ ಅತುಲ್ ಸುಭಾಷ್​ (Atul Subhash) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿ ಬೆಂಗಳೂರಿಗೆ (Bengaluru) ಕರೆತಂದಿದ್ದಾರೆ. ಮೂವರನ್ನೂ ನ್ಯಾಯಂಗ ಬಂಧನದಲ್ಲಿ ಇಡಲಾಗಿದೆ. ಆರೋಪಿಗಳು ಪೊಲೀಸ್​ ಬಲೆಗೆ ಬಿದ್ದಿದ್ದು ಹೇಗೆ? ಬಲೆ ಬೀಸಿದ್ದು ಹೇಗೆ ಎಂಬ ರೋಚಕ ಸಂಗತಿ ಬಯಲಾಗಿದೆ.

ಟೆಕ್ಕಿ ಅತುಲ್​ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲು ಉತ್ತರ ಪ್ರದೇಶಕ್ಕೆ ತೆರಳಿದ್ದರು. ಪೊಲೀಸರು ಬರುತ್ತಿರುವ ವಿಚಾರ ತಿಳಿದ ಅತುಲ್​ ಅವರ ಪತ್ನಿ ನಿಖಿತಾ, ಅತ್ತೆ ನಿಶಾ ಸಿಂಘಾನಿಯಾ ಮತ್ತು ಭಾಮೈದ ಅನುರಾಗ್​ ಮನೆಯಿಂದ ಪರಾರಿಯಾಗಿದ್ದರು. ಕೊನೆಗೆ ಪೊಲೀಸರು ಮನೆಯ ಬಾಗಿಲಿಗೆ ನೋಟಿಸ್​​ ಅಂಟಿಸಿದ್ದರು. ಆದರೆ, ಆರೋಪಿಗಳನ್ನು ವಶಕ್ಕೆ ಪಡೆಯುವ ಪಣ ತೊಟ್ಟಿದ್ದ ಕರ್ನಾಟಕ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ಪೋನ್​ ಕಾಲ್​​ನಿಂದ ಬಲೆಗೆ ಬಿದ್ದ ಆರೋಪಿಗಳು

ಆರೋಪಿಗಳು ದಿನಕ್ಕೊಂದು ಸ್ಥಳ ಬದಲಾಯಿಸುತ್ತಿದ್ದರು. ಆರೋಪಿಗಳು ದೂರವಾಣಿ ಮೂಲಕ ಯಾರೆಲ್ಲ ಜೊತೆ ಸಂಪರ್ಕದಲ್ಲಿದ್ದಾರೆ ಎಂಬುವುದರ ಮಾಹಿತಿ ಪಡೆದು, ಅವರ ಮೇಲೆಯೂ ನಿಗಾ ಇಟ್ಟಿದ್ದರು. ಆರೋಪಿಗಳು ಬರೀ ವಾಟ್ಸಪ್ ಕಾಲ್ ಮಾಡುತ್ತಿದ್ದರು. ಇದರಿಂದ ಅವರನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದರೆ, ಆ ಒಂದು ಕಾಲ್​ನಿಂದ ಪೊಲೀಸರ ಬಲೆಗೆ ಬಿದ್ದರು.

ಎ1 ನಿಖಿತಾ ಸ್ಥಳ ಬದಲಾಯಿಸುವಾಗ ಮಿಸ್ ಆಗಿ ಪರಿಚಯಸ್ಥರಿಗೆ ಕಾಲ್ ಮಾಡಿದ್ದಳು. ಆಗ, ನಿಖಿತಾ ಇರುವ ಸ್ಥಳ ಪೊಲೀಸರಿಗೆ ಗೊತ್ತಾಗಿದೆ. ನಿಖಿತಾ ಮೊಬೈಲ್​ ಲೊಕೇಶನ್​ ಆಧರಿಸಿ ಬೆನ್ನು ಹತ್ತಿದ ಪೊಲೀಸರು ಹರಿಯಾಣದ ಗುರುಗ್ರಾಮ ತಲುಪಿದ್ದಾರೆ. ಗುರುಗ್ರಾಮದಲ್ಲಿ ನಿಕಿತಾ ರೂಂ ಒಂದರಲ್ಲಿ ಒಂಟಿಯಾಗಿದ್ದಳು.

ಇದನ್ನೂ ಓದಿ: ಟೆಕ್ಕಿ ಅತುಲ್​ ಸುಭಾಷ್​ ಮಗು ಎಲ್ಲಿ? ಬೆಂಗಳೂರು ಪೊಲೀಸರಿಂದ ಮಹತ್ವದ ಸುಳಿವು

ಅಲ್ಲಿ ಪೊಲೀಸರು ನಿಖಿತಾಳನ್ನು ವಶಕ್ಕೆ ಪಡೆದರು. ಬಳಿಕ, ನಿಖಿತಾಳ ಕಡೆಯಿಂದಲೇ ಆಕೆಯ ತಾಯಿ ಮತ್ತು ತಮ್ಮನಿಗೆ ಕರೆ ಮಾಡಿಸಿ, ಪ್ರಯಾಗ್​ರಾಜ್​​ನಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದರು. ಬಳಿಕ ಅವರ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಸ್ಥಳಕ್ಕೆ ತೆರಳಿ ಎ2 ನಿಶಾ ಸಿಂಘಾನಿಯಾ ಮತ್ತು ಎ3 ಸಹೋದರ ಅನುರಾಗ್​ನನ್ನು ಪ್ರಯಾಗ್​ರಾಜ್​ನಲ್ಲಿ ಬಂಧಿಸಿದರು.

ಪೊಲೀಸರು ಟ್ರಾನ್ಸಿಸ್ಟ್ ವಾರೆಂಟ್ ಪಡೆಯದೇ ಕರ್ನಾಟಕಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ. ಬೇರೆ ರಾಜ್ಯದಲ್ಲಿರುವ ಆರೋಪಿಗಳನ್ನು ಬಂಧನ ಮಾಡಿದ ಬಳಿಕ, ಅಲ್ಲಿನ ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆಯಬೇಕು. ಇಲ್ಲವಾದರೆ ಬಂಧನ ಮಾಡಿದ 24 ಗಂಟೆಯ ಒಳಗಾಗಿ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು.

ಮಾರತ್ತಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅಲ್ಲಿನ ನ್ಯಾಯಾಲಯದ ಮುಂದೆ ಹಾಜರು ಪಡಿಸದೆ ತಕ್ಷಣವೇ ಟಿಕೇಟ್ ಖರೀದಿಸಿ ವಿಮಾದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ. ಇಲ್ಲಿ, 24 ಗಂಟೆ ಕಳೆಯುವುದರ ಒಳಗಾಗಿ ಹೇಳಿಕೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಬಳಿಕ ನ್ಯಾಯಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನು, ಅವಶ್ಯಕತೆ ಇದ್ದರೇ ಬಾಡಿ ವಾರೆಂಟ್ ಮೂಲಕ‌ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಪಡೆಯಬಹುದಾಗಿದೆ. ಪೊಲೀಸರು ಮೂವರ ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತ, ಜಾಮೀನು ಕೋರಿ ಅರ್ಜಿ ಸಲ್ಲಿಕೆಗೆ ಮೂವರು ಆರೋಪಿಗಳ ಸಿದ್ದತೆ ನಡೆಸಿದ್ದಾರೆ.

ವರದಿ: ಪ್ರದೀಪ್​

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:12 am, Mon, 16 December 24

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ