Atul Subhash: ನನ್ನ ಮೊಮ್ಮಗ ಬದುಕಿದ್ದಾನಾ ಇಲ್ಲವೋ ಎಂಬುದೂ ಗೊತ್ತಿಲ್ಲ: ಅತುಲ್ ತಂದೆ

ನನ್ನ ಮೊಮ್ಮಗ ಬದುಕಿದ್ದಾನಾ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆ ಪವನ್ ಕುಮಾರ್ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಅತುಲ್ ಸುಭಾಷ್ ಪತ್ನಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ 24 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದಾರೆ ಹಾಗೆಯೇ 90 ನಿಮಿಷಗಳ ವಿಡಿಯೋವನ್ನು ಕೂಡ ಮಾಡಿಟ್ಟಿದ್ದರು. ಅತುಲ್ ಮಗನಿಗೆ ನಾಲ್ಕೂವರೆ ವರ್ಷವಾಗಿದ್ದು, 2021ರ ಬಳಿಕ ಮಗನ ಮುಖವನ್ನೇ ನಾನು ನೋಡಿಲ್ಲ, ಆತ ಹೇಗಿದ್ದಾನೆ ಎಂಬುದೂ ಮರೆತು ಹೋಗಿದೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದರು.

Atul Subhash: ನನ್ನ ಮೊಮ್ಮಗ ಬದುಕಿದ್ದಾನಾ ಇಲ್ಲವೋ ಎಂಬುದೂ ಗೊತ್ತಿಲ್ಲ: ಅತುಲ್ ತಂದೆ
ಅತುಲ್ ಸುಭಾಷ್ Image Credit source: India Today
Follow us
ನಯನಾ ರಾಜೀವ್
|

Updated on: Dec 15, 2024 | 2:39 PM

ನನ್ನ ಮೊಮ್ಮಗ ಬದುಕಿದ್ದಾನಾ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಮೃತ ಟೆಕ್ಕಿ ಅತುಲ್ ಸುಭಾಷ್ ತಂದೆ ಪವನ್ ಕುಮಾರ್ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಅತುಲ್ ಸುಭಾಷ್ ಪತ್ನಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ 24 ಪುಟಗಳ ಡೆತ್​ನೋಟ್ ಬರೆದಿಟ್ಟಿದ್ದಾರೆ ಹಾಗೆಯೇ 90 ನಿಮಿಷಗಳ ವಿಡಿಯೋವನ್ನು ಕೂಡ ಮಾಡಿಟ್ಟಿದ್ದರು. ಅತುಲ್ ಮಗನಿಗೆ ನಾಲ್ಕೂವರೆ ವರ್ಷವಾಗಿದ್ದು, 2021ರ ಬಳಿಕ ಮಗನ ಮುಖವನ್ನೇ ನಾನು ನೋಡಿಲ್ಲ, ಆತ ಹೇಗಿದ್ದಾನೆ ಎಂಬುದೂ ಮರೆತು ಹೋಗಿದೆ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದರು.

ಇದೀಗ ಅತುಲ್ ಪತ್ನಿ, ಆಕೆಯ ತಾಯಿ ಹಾಗೂ ಸಹೋದರನನ್ನು ಪೊಲೀಸರು ಬಂಧಿಸಿದ್ದು, ಮಗುವನ್ನು ನೋಡಿಕೊಳ್ಳುವವರ್ಯಾರು ಎನ್ನುವ ಪ್ರಶ್ನೆ ಉದ್ಭವವಾಗಿತ್ತು. ಆದರೆ ಸಾಯುವ ಮುನ್ನ ಟೆಕ್ಕಿ ತನ್ನ ಮಗುವನ್ನು ಪೋಷಕರಿಗೆ ಒಪ್ಪಿಸುವಂತೆ ಕೇಳಿಕೊಂಡಿದ್ದರು. ಇದೀಗ ಅತುಲ್ ತಂದೆ ಪವನ್ ಕುಮಾರ್ ಮೋದಿ ಮಾತನಾಡಿ, ನನ್ನ ಮೊಮ್ಮಗ ಎಲ್ಲಿದ್ದಾನೆ, ಹೇಗಿದ್ದಾನೆ, ಬದುಕಿದ್ದಾನಾ ಇಲ್ಲವೋ ಎಂಬುದು ಕೂಡ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಮೊಮ್ಮಗನೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ, ಕೆಲವೊಮ್ಮೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಿದೆ, ನಿಕಿತಾ ಕುಟುಂಬವು ತನ್ನ ಮೊಮ್ಮಗನ ಹೆಸರಿನಲ್ಲಿ ನಮ್ಮ ಮೇಲೆ ಹೊಸ ಪ್ರಕರಣವನ್ನು ದಾಖಲಿಸಿದೆ ಎಂದು ತಿಳಿದಾಗ ಮತ್ತಷ್ಟು ಆಘಾತವಾಗಿತ್ತು ಎಂದರು.

ಮತ್ತಷ್ಟು ಓದಿ: Atul Subhash Case: ತಂದೆ ಇಲ್ಲ, ತಾಯಿ, ಅಜ್ಜಿ, ಮಾವ ಎಲ್ಲರೂ ಜೈಲುಪಾಲು, ಮಗು ನೋಡಿಕೊಳ್ಳೋದ್ಯಾರು?

ಅತುಲ್ ಸುಭಾಷ್ ವಿರುದ್ಧ ನಿಕಿತಾ ವರದಕ್ಷಿಣೆ ಕಿರುಕುಳ ಸೇರಿ 9 ಪ್ರಕರಣಗಳನ್ನು ದಾಖಲಿಸಿದ್ದರು, ಅದರ ವಿಚಾರಣೆಗಾಗಿ ಅತುಲ್ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ 40 ಬಾರಿ ಪ್ರಯಾಣಿಸಿದ್ದ ಎಂದು ಆತನ ಪೋಷಕರು ತಿಳಿಸಿದ್ದಾರೆ. 6 ಪ್ರಕರಣಗಳು ಕೆಳ ನ್ಯಾಯಾಲಯದಲ್ಲಿದ್ದರೆ, 3 ಪ್ರಕರಣಗಳು ಹೈಕೋರ್ಟ್​ನಲ್ಲಿವೆ.

ನಿಕಿತಾ ಸಿಂಘಾನಿಯಾ ಅವರನ್ನು ಗುರುಗ್ರಾಮ್‌ನಿಂದ ಬಂಧಿಸಲಾಗಿದ್ದು, ಆಕೆಯ ತಾಯಿ ಮತ್ತು ಸಹೋದರನನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಸುಭಾಷ್‌ನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಸುಭಾಷ್ ಅವರು ಡಿಸೆಂಬರ್ 9 ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ