Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ನಿಧನ; ಖಚಿತ ಪಡಿಸಿದ ಕುಟುಂಬ
Zakir Hussain: ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿರುವ ಜಾಕಿರ್ ಹುಸೇನ್, ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾರವರ ಹಿರಿಯ ಪುತ್ರ. ಮಾರ್ಚ್ 9, 1951 ರಂದು ಮುಂಬೈನಲ್ಲಿ ಜನಿಸಿದ ಜಾಕಿರ್ ಹುಸೇನ್, ಚಿಕ್ಕ ವಯಸ್ಸಿನಿಂದಲೂ ಸಂಗೀತದ ವಾತಾವರಣದಲ್ಲಿ ಬೆಳೆದವರು. ಅವರು ನಿಧನ ಹೊಂದಿದ ವಿಚಾರ ಸಾಕಷ್ಟು ಬೇಸರ ತರಿಸಿದೆ.
ದೆಹಲಿ, ಡಿಸೆಂಬರ್ 15: ವಿಶ್ವವಿಖ್ಯಾತ ತಬಲಾ ಮಾಂತ್ರಿಕ (73) ಜಾಕಿರ್ ಹುಸೇನ್ (Zakir Hussain) ನಿಧನರಾಗಿದ್ದಾರೆ. 73 ವಯಸ್ಸಿನ ಜಾಕಿರ್ ಅವರಿಗೆ ಕಳೆದ ಎರಡು ವಾರಗಳಿಂದ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಭಾನುವಾರ ತಮ್ಮ ಕೊನೆಯುಸಿರೆಳೆದಿದ್ದಾರೆ. ಜಾಕಿರ್ ಹುಸೇನ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾಗಿರುವ ಜಾಕಿರ್ ಹುಸೇನ್, ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾರವರ ಹಿರಿಯ ಪುತ್ರ. ಮಾರ್ಚ್ 9, 1951 ರಂದು ಮುಂಬೈನಲ್ಲಿ ಜನಿಸಿದ ಜಾಕಿರ್ ಹುಸೇನ್, ಚಿಕ್ಕ ವಯಸ್ಸಿನಿಂದಲೂ ಸಂಗೀತದ ವಾತಾವರಣದಲ್ಲಿ ಬೆಳೆದವರು. ಅವರ ತಂದೆಯ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಜಾಕಿರ್ ಹುಸೇನ್ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿದರು.
ಮುಂಬೈನ ಮಾಹಿಂ ಪ್ರದೇಶದ ಸೇಂಟ್ ಮೈಕೆಲ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ್ದು, ತಮ್ಮ ಏಳನೇ ವಯಸ್ಸಿನಲ್ಲೇ ಸಾರ್ವಜನಿಕವಾಗಿ ತಬಲಾ ಪ್ರದರ್ಶನ ನೀಡುತ್ತಿದ್ದರು. 12ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸತೊಡಗಿದರು. ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಪದವಿ ಕೂಡ ಪಡೆದಿದುಕೊಂಡಿದ್ದಾರೆ. ಜೊತೆಗೆ ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ನಂತರ ಭಾರತ ಸೇರಿದಂತೆ ವಿಶ್ವದಾದ್ಯಂತ ತಬಲಾ ವಾದನ ಪ್ರಖ್ಯಾತಿಗಳಿಸಿದ್ದರು.
ಪ್ರಧಾನಿ ಮೋದಿ ಸಂತಾಪ
Deeply saddened by the passing of the legendary tabla maestro, Ustad Zakir Hussain Ji. He will be remembered as a true genius who revolutionized the world of Indian classical music. He also brought the tabla to the global stage, captivating millions with his unparalleled rhythm.…
— Narendra Modi (@narendramodi) December 16, 2024
ಪ್ರಶಸ್ತಿಗಳು
ಜಾಕಿರ್ ಹುಸೇನ್ ಅವರು ತಮ್ಮ ವೃತ್ತಿಜೀವನದಲ್ಲಿ 5 ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. 66ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 5 ಪ್ರಶಸ್ತಿ ಪಡೆದಿದ್ದರು. ಅಷ್ಟೇ ಅಲ್ಲದೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ
‘ಪ್ರಸಿದ್ಧ ಮಾಂತ್ರಿಕ, ಸಾರ್ವಕಾಲಿಕ ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರಾದ ಉಸ್ತಾದ್ ಜಾಕೀರ್ ಹುಸೇನ್ ನಿಧನದಿಂದ ತೀವ್ರ ಆಘಾತ, ದುಃಖವಾಗಿದೆ. ಹುಸೇನ್ ನಿಧನದಿಂದ ದೇಶಕ್ಕೆ, ಲಕ್ಷಾಂತರ ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದೆ. ಉಸ್ತಾದ್ ಕುಟುಂಬ, ಭ್ರಾತೃತ್ವ, ಅನುಯಾಯಿಗಳಿಗೆ ಪ್ರಾಮಾಣಿಕ ಸಂತಾಪ’ ಎಂದು ಟ್ವೀಟ್ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಜಾಕೀರ್ ಹುಸೇನ್ ವಿಧಿವಶಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಸಂತಾಪ ಸೂಚಿಸಿದ್ದು, ‘ಅವರ ಸಾವಿನ ಸುದ್ದಿ ತಿಳಿದ ತುಂಬಾ ನೋವಾಗಿದೆ. ತಬಲಾದ ಅವರ ಲಯದಿಂದಲೇ ಗಡಿಯಾಚೆಗಿನ ಹೃದಯ ಒಂದುಗೂಡಿಸುತ್ತಿದ್ದರು. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅವರ ಕೊಡುಗೆ ಅಪಾರ’ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:21 pm, Sun, 15 December 24