AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Grammy Awards 2024 Winners List: ಗ್ರ್ಯಾಮಿ ಅವಾರ್ಡ್ಸ್​ನಲ್ಲಿ ಭಾರತಕ್ಕೆ ಮೂರು ಪ್ರಶಸ್ತಿ; ಇಲ್ಲಿದೆ ಅವಾರ್ಡ್​ ಪಡೆದವರ ಪಟ್ಟಿ

ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ ಶಕ್ತಿ ತಂಡಕ್ಕೆ ಸಿಕ್ಕಿದೆ. ರಾಕೇಶ್ ಚೌರಾಸಿಯಾ ಅವರು ಎರಡು ಅವಾರ್ಡ್ ಪಡೆದಿದ್ದಾರೆ. ಶಕ್ತಿ ಬ್ಯಾಂಡ್ ಹಾಗೂ ರಾಕೇಶ್ ಚೌರಾಸಿಯಾ​ಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಶುಭಾಶಯ ತಿಳಿಸಲಾಗುತ್ತಿದೆ. ಈ ಮೊದಲು ಭಾರತದ ಅನೇಕರು ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ.

Grammy Awards 2024 Winners List: ಗ್ರ್ಯಾಮಿ ಅವಾರ್ಡ್ಸ್​ನಲ್ಲಿ ಭಾರತಕ್ಕೆ ಮೂರು ಪ್ರಶಸ್ತಿ; ಇಲ್ಲಿದೆ ಅವಾರ್ಡ್​ ಪಡೆದವರ ಪಟ್ಟಿ
ಗ್ರ್ಯಾಮಿ ಅವಾರ್ಡ್ಸ್​ನಲ್ಲಿ ಭಾರತಕ್ಕೆ ಮೂರು ಪ್ರಶಸ್ತಿ
ರಾಜೇಶ್ ದುಗ್ಗುಮನೆ
|

Updated on: Feb 05, 2024 | 12:09 PM

Share

66ನೇ ಸಾಲಿನ ಗ್ರ್ಯಾಮಿ ಅವಾರ್ಡ್ಸ್ (Grammy Awards) ಕಾರ್ಯಕ್ರಮ ಫೆಬ್ರವರಿ 4ರಂದು (ಭಾರತೀಯ ಕಾಲಮಾನ ಫೆಬ್ರವರಿ 5) ನಡೆದಿದೆ. ಈ ಕಾರ್ಯಕ್ರಮದಲ್ಲಿ ಭಾರತಕ್ಕೆ ಮೂರು ಅವಾರ್ಡ್​ಗಳು ಬಂದಿವೆ. ‘ದಿ ಮೂಮೆಂಟ್’ ಆಲ್ಬಂಗಾಗಿ ಜಾಕಿರ್ ಹುಸೇನ್ ಅವರ ಬ್ಯಾಂಡ್ ‘ಶಕ್ತಿ’ ಪ್ರಶಸ್ತಿ ಗೆದ್ದಿದೆ. ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಅವಾರ್ಡ್ ದೊರೆತಿದೆ. ಇದರ ಜೊತೆ ರಾಕೇಶ್ ಚೌರಾಸಿಯಾ ಅವರು ಎರಡು ಅವಾರ್ಡ್ ಪಡೆದಿದ್ದಾರೆ. ‘ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಹಾಗೂ ಸಮಕಾಲೀನ ವಾದ್ಯಗಳ ಆಲ್ಬಮ್ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ. ಈ ಸಾಲಿನ ಗ್ರ್ಯಾಮಿ ಅವಾರ್ಡ್​ನಲ್ಲಿ ಭಾರತ ಮಿಂಚಿದೆ. ಇದಲ್ಲದೆ ವಿದೇಶಿ ಗಾಯಕರಾದ ಮೈಲಿ ಸೈರಸ್ ಹಾಗೂ ಟೈಲರ್ ಸ್ವಿಫ್ಟ್ ಕೂಡ ಅವಾರ್ಡ್ ಗೆದ್ದಿದ್ದಾರೆ. ಕೆಲವು ಪ್ರಮುಖ ಅವಾರ್ಡ್​ಗಳ ವಿವರ ಇಲ್ಲಿದೆ.

‘ರೆಕಾರ್ಡ್ ಆಫ್​ ದಿ ಇಯರ್’ ಅವಾರ್ಡ್ ಮೈಲಿ ಸೈರಸ್​ ಪಾಲಾಗಿದೆ. ‘ಫ್ಲವರ್ಸ್’ ಆಲ್ಬಂಗೆ ಈ ಅವಾರ್ಡ್ ದೊರೆತಿದೆ. ‘ಆಲ್ಬಂ ಆಫ್ ದಿ ಇಯರ್’ ಅವಾರ್ಡ್ ಟೈಲರ್ ಸ್ವಿಫ್ಟ್ ಪಾಲಾಗಿದೆ. ‘ಮಿಡ್​ನೈಟ್’ ಆಲ್ಬಂಗೆ ಈ ಪ್ರಶಸ್ತಿ ದೊರೆತಿದೆ. ಸಾಂಗ್ ಆಫ್ ದಿ ಇಯರ್ ಅವಾರ್ಡ್​ ‘ವಾಟ್ ವಾಸ್ ಐ ಮೇಡ್ ಫಾರ್’ ಹಾಡಿಗೆ ಸಿಕ್ಕಿದೆ.

ರಿಕ್ಕಿ ಕೇಜ್ ಟ್ವೀಟ್

ಅತ್ಯುತ್ತಮ ನವ ಕಲಾವಿದ ಅವಾರ್ಡ್ ವಿಕ್ಟೋರಿಯಾ ಮೊನೆಟ್​ಗೆ ದೊರೆತಿದೆ. ಬೆಸ್ಟ್ ಪಾಪ್ ವೋಕಲ್ ಆಲ್ಬಂ ಅವಾರ್ಡ್ ಟೈಲರ್ ಸ್ವಿಫ್ಟ್ ಪಡೆದಿದ್ದಾರೆ. ಅತ್ಯುತ್ತಮ ಪಾಪ್ ಸೋಲೋ ಪರ್ಫಾರ್ಮೆನ್ಸ್ ಅವಾರ್ಡ್ ಮೈಲಿ ಸೈರಸ್ ಅವರ ‘ಫ್ಲವರ್ಸ್’ ಆಲ್ಬಂಗೆ ಸಿಕ್ಕಿದೆ. ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ ‘ದಿಸ್ ಮೂಮೆಂಟ್’ ಸಿದ್ಧಪಡಿಸಿದ ಶಕ್ತಿ ತಂಡಕ್ಕೆ ಸಿಕ್ಕಿದೆ. ರಾಕೇಶ್ ಚೌರಾಸಿಯಾ ಅವರು ಎರಡು ಅವಾರ್ಡ್ ಪಡೆದು ಬೀಗಿದ್ದಾರೆ. ರಾಕೇಶ್ ಚೌರಾಸಿಯಾ ಅವರು ಕೊಳಲು ವಾದಕರು. ಇವರು ಹರಿಪ್ರಸಾದ್ ಚೌರಾಸಿಯಾ ಅವರ ಸಂಬಂಧಿ ಆಗಿದ್ದಾರೆ.

ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್​ ಗೆದ್ದ ಝಾಕಿರ್ ಹುಸೇನ್ ಬ್ಯಾಂಡ್; ಅಭಿನಂದನೆ ತಿಳಿಸಿದ ರಿಕ್ಕಿ

ರಾಕೇಶ್ ಚೌರಾಸಿಯಾ ಹಾಗೂ ಶಕ್ತಿ ಬ್ಯಾಂಡ್​ಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಶುಭಾಶಯ ತಿಳಿಸಲಾಗುತ್ತಿದೆ. ಈ ಮೊದಲು ಭಾರತದ ಅನೇಕರು ಗ್ರ್ಯಾಮಿ ಅವಾರ್ಡ್ ಪಡೆದು ಬೀಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ