ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಮಾರ್ಗಗಳ ಅನುಷ್ಠಾನ: ಟ್ರಾಫಿಕ್ ಜಂಜಾಟಕ್ಕೆ ಸಿಗುತ್ತಾ ಮುಕ್ತಿ?
ಸಂಚಾರಿ ಪೊಲೀಸರು ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 20 ಹೆವಿ ಟ್ರಾಫಿಕ್ ಜಾಮ್ ಸ್ಪಾಟ್ ಗುರುತಿಸಲಾಗಿದೆ. ಟಿನ್ ಪ್ಯಾಕ್ಟರಿ, ಹೆಬ್ಬಾಳ, ಗೊರಗುಂಟೆ ಪಾಳ್ಯ ಸೇರಿದಂತೆ ಹಲವು ಏರಿಯಾಗಳನ್ನು ಮಾರ್ಕ್ ಮಾಡಲಾಗಿದೆ.
ಬೆಂಗಳೂರು, ಅ.10: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ (Bengaluru Traffic). ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು ಎಲ್ಲರಿಗೂ ಟ್ರಾಫಿಕ್ ಕಂಟಕವಾಗಿದೆ. ಅದರಲ್ಲೂ ಪ್ರಾಣ ಉಳಿಸುವ ಌಂಬುಲೆನ್ಸ್ಗಳೇ ಟ್ರಾಫಿಕ್ ವ್ಯೂಹದಲ್ಲಿ ಸಿಲುಕಿ ಪರದಾಡುತ್ತಿರುವಂತಹ ಅನೇಕ ಘಟನೆಗಳು ನಡೆದಿವೆ. ಟ್ರಾಫಿಕ್ ಕಂಟ್ರೂಲ್ ಮಾಡಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಹೀಗಾಗಿ ಟ್ರಾಫಿಕ್ ಹತೋಟಿಗೆ ತರಲು ಹೊಸ ಹೊಸ ಮಾರ್ಗಗಳ ಅನುಷ್ಠಾನಕ್ಕೆ ಟ್ರಾಫಿಕ್ ಪೊಲೀಸ್ ಇಲಾಖೆ (Bengaluru Traffic Police) ಮುಂದಾಗಿದೆ.
ನಿಯಮ ಉಲ್ಲಂಘಟನೆ ಮಾಡಿವರ ಮೇಲೆ ಕಠಿಣ ಕ್ರಮ?
ಸಂಚಾರಿ ಪೊಲೀಸರು ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 20 ಹೆವಿ ಟ್ರಾಫಿಕ್ ಜಾಮ್ ಸ್ಪಾಟ್ ಗುರುತಿಸಲಾಗಿದೆ. ಟಿನ್ ಪ್ಯಾಕ್ಟರಿ, ಹೆಬ್ಬಾಳ, ಗೊರಗುಂಟೆ ಪಾಳ್ಯ ಸೇರಿದಂತೆ ಹಲವು ಏರಿಯಾಗಳನ್ನು ಮಾರ್ಕ್ ಮಾಡಲಾಗಿದೆ. ಮೇಟ್ರೊ ಕಾಮಾಗಾರಿ, ರಸ್ತೆ ಕಾಮಗಾರಿಗಳಿಂದ ಟ್ರಾಫಿಕ್ ಜಾಮ್ ಹೆಚ್ಚಾಗ್ತಿರುವುದು ಕಂಡು ಬಂದಿದೆ. ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಕ್ರಮಕ್ಕೆ ಚಿಂತನೆ ನಡೆದಿದ್ದು ಕಾಮಗಾರಿ ಪೂರ್ಣಗೊಳಿಸಿ ಕೂಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಲಾಗಿದೆ.
ಹೆವಿ ಟ್ರಾಫಿಕ್ ಸ್ಪಾಟ್ ಜೊತೆಗೆ 60 ಬ್ಲಾಕ್ ಸ್ಪಾಟ್ಗಳನ್ನು ಪತ್ತೆ ಮಾಡಲಾಗಿದೆ. ಸಂಚಾರಿ ಪೊಲೀಸರು, ಪಿಡಬ್ಲ್ಯೂಡಿ, ಟ್ರಾನ್ಸ್ ಪೋರ್ಟ್ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿ 20-21-22ರಲ್ಲಿ 60 ಬ್ಲಾಕ್ ಸ್ಪಾಟ್ಗಳನ್ನು ಪತ್ತೆ ಮಾಡಲಾಗಿತ್ತು. ಒಂದು ವರ್ಷದಲ್ಲಿ ಒಂದು ಸ್ಪಾಟ್ನಲ್ಲಿ ಮೂರಕ್ಕಿಂತ ಹೆಚ್ಚು ಅಪಘಾತಗಳು ಸಂಭವಿಸಿದ ಬಗ್ಗೆ ವಿಮರ್ಶೆ ಮಾಡಲಾಗಿತ್ತು. ತಾಂತ್ರಿಕ ದೋಷಗಳ ಬಗ್ಗೆ ವರದಿ ಪರಿಶೀಲಿಸಿ ನಂತರ ಬ್ಲಾಕ್ ಸ್ಪಾಟ್ ಎಂದು ಗುರುತು ಪತ್ತೆ ಮಾಡಿದ್ದರು. ಬ್ಲಾಕ್ ಸ್ಪಾಟ್ ಕಂಟ್ರೂಲ್ ಮಾಡಲು ತಿರುವುಗಳ ಬದಲಾವಣೆ, ಹಂಪ್ ಗಳ ಬದಲಾವಣೆ, ರಸ್ತೆಯ ಅಕ್ಕಪಕ್ಕದಲ್ಲಿರುವ ಕೆಲವೊಂದು ಪಾಸಿಂಗ್ ರಸ್ತೆಗಳನ್ನು ಬಂದ್ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರು, ಬೆಳಗಾವಿ ಕೇಂದ್ರ ಕಾರಾಗೃಹ ಸ್ಪೋಟಿಸುವುದಾಗಿ ಕರೆ ಮಾಡಿದ್ದ ಆರೋಪಿ ಸುಳಿವು ಪತ್ತೆ
ಮಳೆ ಬಿದ್ರೆ ಡ್ರೈನೇಜ್ ಪ್ರಬ್ಲಮ್
ಇನ್ನು ಮಳೆ ಬಂದಾಗ ಡ್ರೈನೇಜ್‌ಗಳಲ್ಲಿ ಕಸ ತುಂಬಿರುವುದರಿಂದ ಮಳೆ ನೀರು ಸಂಗ್ರಹವಾಗುತ್ತಿದೆ. ಮಳೆ ನೀರಿನಿಂದ ಟ್ರಾಫಿಕ್ ಜಾಮ್ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ಬಿಬಿಎಂಪಿಗೆ ಮಾಹಿತಿ ನೀಡಿದ್ದಾರೆ. ಹಾಗೂ ಡ್ರೈನೇಜ್ ಕ್ಲೀನ್ ಮಾಡಲು ತಿಳಿಸಿದ್ದಾರೆ. 6 ತಿಂಗಳಿನಿಂದ ಸ್ಟಾಪ್ ಆಗಿದ್ದ ವರ್ಕ್ ಶುರವಾಗಿದೆ. ಮೆಟ್ರೋ ಕಾಮಗಾರಿ ಸೇರಿದಂತೆ ಇತರೆ ಕೆಲಸಗಳು ಪ್ರಾರಂಭವಾಗಿವೆ. ವರ್ಕ್ ಫ್ರಂ ಹೋಮ್‌ನಲ್ಲಿದ್ದವರು ಈಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಮಂಗಳವಾರ, ಬುಧವಾರ, ಗುರುವಾರ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಇದನ್ನು ನಿರ್ವಹಿಸಲು ಪೀಕ್ ಅವರ್ಸ್‌ನಲ್ಲಿ ವಾಹನಗಳ ತಪಾಸಣೆ ಬೇಡ ಎಂದು ಸೂಚಿಸಲಾಗಿದೆ. ವಾಹನಗಳನ್ನ ಹಿಡಿದು ಫೈನ್ ಹಾಕುವಂತಿಲ್ಲ. ಟ್ರಾಫಿಕ್ ಕ್ಲಿಯರ್ ಮಾಡಿ ಎಂದು ಸಂಚಾರಿ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇನ್ನು ಬೆಳಗ್ಗೆ 8.30 ರಿಂದ 11 ಗಂಟೆ ಮತ್ತು ಸಂಜೆ 5 ಗಂಟೆಯಿಂದ 7 ಗಂಟೆ ವರೆಗೆ ಹೋಂ ಗಾರ್ಡಸ್, ಸ್ಥಳೀಯ ಲಾಂಡ್ ಅರ್ಡರ್ ಪೊಲೀಸರ ಬಳಕೆ ಮಾಡಿಕೊಳ್ಳಲು ಇಲಾಖೆ ಮುಂದಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ