AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ 82% ಏರಿಕೆ: ವಾಹನ ಸವಾರರಿಗೆ ಬಿಗ್ ಶಾಕ್!

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು 2025ರಲ್ಲಿ ಶೇ. 82ರಷ್ಟು ಹೆಚ್ಚಾಗಿವೆ. ಅತಿವೇಗ, ನಿರ್ಲಕ್ಷ್ಯ, ತಪ್ಪು ದಿಕ್ಕಿನ ಚಾಲನೆ ಮತ್ತು ಫುಟ್‌ಪಾತ್ ಪಾರ್ಕಿಂಗ್‌ಗೆ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪೊಲೀಸರು ದಾಖಲಿಸಿರುವ ಪ್ರಕರಣಗಳು 6,872ಕ್ಕೆ ಏರಿವೆ. ವಾಹನ ಸವಾರರು ಎಚ್ಚರದಿಂದಿರಬೇಕು. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.

ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆ 82% ಏರಿಕೆ: ವಾಹನ ಸವಾರರಿಗೆ ಬಿಗ್ ಶಾಕ್!
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jan 15, 2026 | 10:06 AM

Share

ಬೆಂಗಳೂರು, ಜ.15: ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಬಿಗ್​​ ಶಾಕ್​​​ ನೀಡುವ ವರದಿಯೊಂದು ಬಿಡುಗಡೆಯಾಗಿದೆ. ಇದು ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶ ಕೂಡ ಆಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮತ್ತು ತಪ್ಪು ದಿಕ್ಕಿನಲ್ಲಿ ಚಾಲನೆ , ವಿವಿಧ ವಿಭಾಗಗಳಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಸಂಚಾರ ಪೊಲೀಸರು ದಾಖಲಿಸಿರುವ ಪ್ರಕರಣಗಳ ಸಂಖ್ಯೆ 2024 ಕ್ಕೆ ಹೋಲಿಸಿದರೆ 2025ರಲ್ಲಿ ಶೇಕಡಾ 82 ರಷ್ಟು ಹೆಚ್ಚಾಗಿದೆ. ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವ ಪ್ರಕಾರ, 2025ರಲ್ಲಿ ಸುಮಾರು 6,872 ಪ್ರಕರಣಗಳು ದಾಖಲಾಗಿವೆ. ಇದು 2024ರಲ್ಲಿ ಹೊಲಿಸಿದರೆ ಈ ವರ್ಷ 3,774 ಪ್ರಕರಣಗಳು ಹೆಚ್ಚಾಗಿದೆ.

ಈ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರು ಹಲವು ಕ್ರಮವನ್ನು ತೆಗೆದುಕೊಂಡಿದ್ದಾರೆ. ಸಂಚಾರ ನಿಮಯಗಳನ್ನು ತಡೆಗಟ್ಟವ ನಿಟ್ಟಿನಲ್ಲಿ ಪೊಲೀಸರು ಕೇಸ್​​ ದಾಖಲಿಸಿಕೊಂಡಿದ್ದಾರೆ. ಆದರೆ ವಾಹನ ಸವಾರರು ದಿನದಿಂದ ದಿನಕ್ಕೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತ ಇದ್ದಾರೆ. ಬಿಎನ್ಎಸ್​​ನ 285ರ ಅಡಿಯಲ್ಲಿ, ಸಂಚಾರಕ್ಕೆ ಅಡ್ಡಿಯುಂಟು ಮಾಡುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಅವಕಾಶ ಇದೆ. ಅನೇಕ ಸಂದರ್ಭಗಳಲ್ಲಿ, ಸವಾರರು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಾರೆ. ಇದು ಕೂಡ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತದೆ. ಇದಕ್ಕೂ ಕೂಡ ಕ್ರಮವನ್ನು ತೆಗೆದುಕೊಂಡಿದ್ದೇವೆ. ಇನ್ನು ಪ್ರಕರಣವನ್ನು ದಾಖಲಿಸುವುದು ಸಂಚಾರ ದಟ್ಟಣೆ ಉಂಟಾದಾಗ ಮಾತ್ರ, ಇಲ್ಲವೆಂದರೆ ಚಲನ್ ನೀಡಲಾಗುತ್ತದೆ ಮತ್ತು ದಂಡವನ್ನು ಸಂಗ್ರಹಿಸಲಾಗುತ್ತದೆ ಎಂದು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಡಿಎಚ್‌ಗೆ ತಿಳಿಸಿದರು.

ಇನ್ನು ಅಪಘಾತಕ್ಕೆ ಕಾರಣವಾಗುವ ಅತಿಯಾದ ವೇಗ ಮತ್ತು ನಿರ್ಲಕ್ಷ್ಯ ವಾಹನ ಸಂಚಾರಕ್ಕೂ ಕೂಡ ಪ್ರಕರಣ ದಾಖಲಾಗಿದೆ. ಜನರಿಗೆ ತಮ್ಮ ಜೀವದ ಬಗ್ಗೆ ಬೆಲೆ ತಿಳಿಯಲಿ ಮತ್ತು ಜತೆಗೆ ಇದರಿಂದ ಇತರ ಸಂಚಾರ ಮಾಡುವ ವಾಹನಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಅತಿಯಾದ ವೇಗ ಮತ್ತು ನಿರ್ಲಕ್ಷ್ಯ ವಾಹನ ಚಲವಣೆಗೂ ಪ್ರಕರಣವನ್ನು ದಾಖಲಿಸಿದ್ದೇವೆ. ಫುಟ್‌ಪಾತ್ ಪಾರ್ಕಿಂಗ್ ಮತ್ತು ಫುಟ್‌ಪಾತ್ ಚಾಲನೆಯನ್ನು ಕೂಡ ಗುರುತಿಸಿದ್ದೇವೆ. ಈ ಬಗ್ಗೆ ಸಾರ್ವಜನಿಕ ವಲಯದಿಂದಲೇ ದೂರುಗಳು ಬಂದಿದೆ. ಇದನ್ನು ತಡೆಯಲು ಕೂಡ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವ. ಫುಟ್‌ಪಾತ್‌ನಲ್ಲಿ ಪಾರ್ಕಿಂಗ್ ಮಾಡುವ ಅಥವಾ ಚಾಲನೆ ಮಾಡುವ ಸಣ್ಣ ದ್ವಿಚಕ್ರ ವಾಹನ ಚಾಲಕರಿಗೆ ಚಲನ್ ವಿಧಿಸಲಾಗುತ್ತದೆ. ಇಂತಹ ಸಂಚಾರದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ. ಈ ಕಾರಣಕ್ಕೆ ಫುಟ್‌ಪಾತ್ ಚಾಲನೆ ಅಕ್ರಮ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಕರ ಸಂಕಾಂತ್ರಿಗೆ ಸಿಲಿಕಾನ್​​ ಸಿಟಿ ದುಬಾರಿ: ಗಗನಕ್ಕೇರಿದ ಹೂವು, ಹಣ್ಣು, ಕಬ್ಬು, ಎಳ್ಳು ಬೆಲ್ಲ ಬೆಲೆ

ಡೆಕ್ಕನ್ ಹೆರಾಲ್ಡ್ ವರದಿ ಪ್ರಕಾರ, 2025ರಲ್ಲಿ ನಗರದಲ್ಲಿ 896 ಗಂಭೀರ ಅಪಘಾತಗಳು ಸಂಭವಿಸಿದೆ. 2024 ಕ್ಕೆ ಹೋಲಿಸಿದರೆ ಶೇಕಡಾ 3 ರಷ್ಟು ಕಡಿಮೆಯಾಗಿದೆ ಮತ್ತು 4,228 ಮಾರಕವಲ್ಲದ ಅಪಘಾತಗಳು, 2024 ಕ್ಕೆ ಹೋಲಿಸಿದರೆ ಶೇಕಡಾ 4 ರಷ್ಟು ಹೆಚ್ಚಾಗಿದೆ. ಇನ್ನು ಗಂಭೀರವಲ್ಲ ಅಪಘಾತಗಳ ಹೆಚ್ಚಳಕ್ಕೆ ಬಿಟಿಪಿಯ(ಬೆಂಗಳೂರು ಟ್ರಾಪಿಕ್​​​​ ಪೊಲೀಸ್) ನ್ಯಾಯವ್ಯಾಪ್ತಿಯ ಹೆಚ್ಚಳವೇ ಕಾರಣ ಎಂದು ರೆಡ್ಡಿ ಹೇಳಿದ್ದಾರೆ. ನಮ್ಮ ಮಿತಿಗೆ ಮೂರು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಸೇರಿಸಲಾಯಿತು. ಬಿಟಿಪಿಯ ಅಧಿಕಾರ ವ್ಯಾಪ್ತಿ ಸುಮಾರು 15% ಹೆಚ್ಚಾಗಿದೆ. ಆದ್ದರಿಂದ, ಅಪಘಾತಗಳ ಸಂಖ್ಯೆಯೂ ಸ್ವಲ್ಪ ಕಡಿಮೆಯಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 am, Thu, 15 January 26