ಬೆಂಗಳೂರು ಬಿಎಂಟಿಸಿ ಬಸ್​ನಲ್ಲಿ ಮಹಿಳೆಯರಿಬ್ಬರ ಜಗಳ: ‘ಉಚಿತ ಪ್ರಯಾಣದೊಂದಿಗೆ ಉಚಿತ ಮನರಂಜನೆ’ ಎಂದ ಜನ

|

Updated on: Feb 11, 2024 | 6:58 PM

ಕಿಟಕಿ ಮುಚ್ಚುವ ವಿಚಾರವಾಗಿ ಶುರುವಾದ ಮಹಿಳೆಯರಿಬ್ಬರ ಜಗಳ ಪರಸ್ಪರ ಚಪ್ಪಲಿಯಿಂದ ಹೊಡೆದಾಡುವ ಹಂತಕ್ಕೆ ಹೋಗಿದೆ. ಬೆಂಗಳೂರು ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಸರ್ಕಾರ ಉಚಿತ ಬಸ್ ಪ್ರಯಾಣದ ಜೊತೆಗೆ ಉಚಿತ ಮನರಂಜನೆಯನ್ನು ಸಹ ಒದಗಿಸುತ್ತಿದೆ ಎಂದು ಜನರು ತಮಾಷೆ ಮಾಡಿದ್ದಾರೆ.

ಬೆಂಗಳೂರು ಬಿಎಂಟಿಸಿ ಬಸ್​ನಲ್ಲಿ ಮಹಿಳೆಯರಿಬ್ಬರ ಜಗಳ: ‘ಉಚಿತ ಪ್ರಯಾಣದೊಂದಿಗೆ ಉಚಿತ ಮನರಂಜನೆ’ ಎಂದ ಜನ
ಮಹಿಳೆಯರಿಬ್ಬರ ಜಗಳ
Follow us on

ಬೆಂಗಳೂರು, ಫೆಬ್ರವರಿ 11: ಸಂಪೂರ್ಣ ಪ್ರಯಾಣಿಕರಿಂದ ತುಂಬಿತುಳುಕುತಿದ್ದಂತಹ ಬಿಎಂಟಿಸಿ ಬಸ್ (BMTC bus) ​​ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಮಹಿಳೆಯರಿಬ್ಬರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿರುವಂತಹ ಘಟನೆ ಬೆಂಗಳೂರು ಮೆಜೆಸ್ಟಿಕ್‌ನಿಂದ ಪೀಣ್ಯಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ನಡೆದಿದೆ. ಸದ್ಯ ಆ ಇಬ್ಬರು ಮಹಿಳೆಯರ ಗಲಾಟೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ವೈರಲ್​ ಆದ ವಿಡಿಯೋದಲ್ಲಿ ಕೋಪಗೊಂಡ ಮಹಿಳೆಯರಿಬ್ಬರು ತಮ್ಮ ತಮ್ಮ ಚಪ್ಪಲಿಯಿಂದ ಪರಸ್ಪರಿಗೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಕಿಟಕಿ ಮುಚ್ಚುವಂತೆ ಒಬ್ಬರು ಮಹಿಳೆ ಕೇಳಿಕೊಂಡಿದ್ದಾರೆ. ಇದಕ್ಕೆ ಮತ್ತೊಬ್ಬ ಮಹಿಳೆ ನಿರಾಕರಿಸಿದ್ದಾರೆ. ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಇಬ್ಬರ ಮಧ್ಯೆ ಜಗಳ ನಡೆದಿದೆ. ಸಹ ಪ್ರಯಾಣಿಕರು ಮತ್ತು ಬಸ್ ಕಂಡಕ್ಟರ್ ಅವರನ್ನು ದಾರಿ ಮಧ್ಯದಲ್ಲಿಯೇ ಇಳಿಸುವುದಾಗಿ ಹೇಳಿದರು ಗಲಾಟೆ ನಿಲ್ಲಿಸಿಲ್ಲ ಎನ್ನಲಾಗಿದೆ. ಅದೇ ಬಸ್ಸಿನಲ್ಲಿದ್ದ ವ್ಯಕ್ತಿಯೊಬ್ಬರು ಇಡೀ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿಡಿಯೋ ನೋಡಿದವರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯಾಗಿ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ವೈರಲ್​ ಆದ ವಿಡಿಯೋ 

ಕರ್ನಾಟಕ ಸರ್ಕಾರವು ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ನೀಡಿದೆ. ಉಚಿತ ಬಸ್ ಪ್ರಯಾಣದ ಜೊತೆಗೆ ಉಚಿತ ಮನರಂಜನೆಯನ್ನು ಸಹ ಒದಗಿಸುತ್ತಿದೆ ಎಂದು ಮತ್ತೊಬ್ಬರು ತಮಾಷೆಯಾಗಿ ಹೇಳಿದ್ದಾರೆ. ಇದು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಇನ್ನೊಂದು ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ಶಕ್ತಿ ಯೋಜನೆ ಎಫೆಕ್ಟ್, ಬಸ್​ನಲ್ಲಿ ಮಹಿಳೆಯರ ಫೈಟ್; ವಿಡಿಯೋ ವೈರಲ್​

ಮತ್ತೊಬ್ಬ ಬಳಕೆದಾರ ‘ಒಂದು ಕಾಲದಲ್ಲಿ, ಬಿಎಂಟಿಸಿ ಪ್ರಯಾಣವು ತುಂಬಾ ಶಾಂತಿಯುತವಾಗಿತ್ತು. ಈಗ ಜನರು ಕಿಟಕಿ ವಿಚಾರವಾಗಿ ತಮ್ಮ ಚಪ್ಪಲಿಗಳಿಂದ ಪರಸ್ಪರ ಜಗಳವಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿ: ಸೀಟ್‌ಗಾಗಿ ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಮಧ್ಯೆ ಜಗಳ, ವಿಡಿಯೋ ವೈರಲ್

‘ಸಾರ್ವಜನಿಕ ಸಾರಿಗೆಯಲ್ಲಿ ಸುರಕ್ಷತೆ ಮತ್ತು ಭದ್ರತೆ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಅಷ್ಟೊಂದು ಹದಗೆಟ್ಟಿದೆಯೇ? ಬಸ್ಸಿನಲ್ಲಿ ಮಾರ್ಷಲ್‌ಗಳು ಏಕೆ ಇಲ್ಲ’? ಎಂದು ಮತ್ತೊಬ್ಬ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:58 pm, Sun, 11 February 24