Vegetables Price in Bangalore: ಬೆಂಗಳೂರು: ಹೂವು, ತರಕಾರಿ ಬಲು ದುಬಾರಿ, ಇಲ್ಲಿದೆ ದರ ಪಟ್ಟಿ

| Updated By: Ganapathi Sharma

Updated on: Jul 23, 2024 | 8:14 AM

ಅಷಾಢಮಾಸಲ್ಲಿ ಸಾಮಾನ್ಯವಾಗಿ ಹೂವು ಹಾಗೂ ತರಕಾರಿಗಳ ಬೆಲೆ ಜಾಸ್ತಿಯಾಗುತ್ತದೆ. ಆದರೆ ಈ ವರ್ಷ ವಿಪರೀತ ಮಳೆಯ ಕಾರಣದಿಂದಾಗಿ ತರಕಾರಿ ಹಾಗೂ ಹೂಗಳ ಬೆಲೆ ಜಾಸ್ತಿಯಾಗಿದ್ದು, ಬೆಲೆ‌ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ.‌ ಬೆಂಗಳೂರಿನಲ್ಲಿ ಹೂವು, ತರಕಾರಿ ಬೆಲೆ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ.

Vegetables Price in Bangalore: ಬೆಂಗಳೂರು: ಹೂವು, ತರಕಾರಿ ಬಲು ದುಬಾರಿ, ಇಲ್ಲಿದೆ ದರ ಪಟ್ಟಿ
ಬೆಂಗಳೂರು: ಆಷಾಢ ಮಾಸದಲ್ಲೇ ಹೂವಿನ ಬೆಲೆ ಗಗನಕ್ಕೆ, ತರಕಾರಿಗಳ‌ ಬೆಲೆಯೂ ಏರಿಕೆ
Follow us on

ಬೆಂಗಳೂರು, ಜುಲೈ 23: ಬೆಂಗಳೂರಿನಲ್ಲಿ ಹಾಗೂ ನಗರದ ಹೊರವಲಯಗಳಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ.‌ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಈ‌ ಮಧ್ಯೆ ಮಳೆಯಿಂದಾಗಿ ಬೆಳೆದ ಬೆಳೆಗಳಿಗೆ ಕೂಡ ಹಾನಿಯಾಗುತ್ತಿದ್ದು, ಮಾರುಕಟ್ಟೆಗೆ ಸರಿಯಾಗಿ ತರಕಾರಿ- ಹೂಗಳು ಬರುತ್ತಿಲ್ಲ. ಹೀಗಾಗಿ ತರಕಾರಿ ಹಾಗೂ ಹೂಗಳ ಬೆಲೆ ಏರಿಕೆಯಾಗಿದೆ.

ಸಾಮಾನ್ಯವಾಗಿ 70-80 ರೂ. ಇರಬೇಕಿದ್ದ ಸೇವಂತಿಗೆ ಹೂವು ಇದೀಗ ಸಗಟು ಮಾರುಕಟ್ಟೆಯಲ್ಲಿಯೇ 250-300 ರೂ.ಗೆ ಮಾರಟವಾಗುತ್ತಿದ್ದರೆ, ಚಿಲ್ಲರೆ ಮಾರಾಟಗಾರರು ಕಾಲು ಕೆ.ಜಿ. ಸೇವಂತಿ ಹೂವಿಗೆ 100 ರೂ.ಗೆ‌‌ ಮಾರುತ್ತಿದ್ದಾರೆ. ಇನ್ನು ಕೆಜಿಗೆ 400 ರೂ‌ ನಗದಿ ಮಾಡಲಾಗಿದೆ. ಸದ್ಯ ಕಾಕಡ 500, ಮಲ್ಲಿಗೆ 300, ಕನಕಾಂಬರ 800, ಗುಲಾಬಿ – 200 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಆಷಾಢ ಮಾಸದಲ್ಲಿಯೇ ಇಷ್ಟೊಂದು ಬೆಲೆ ಏರಿಕೆಯಾಗಿದ್ದು, ಶ್ರಾವಣ ಮಾಸದಲ್ಲಿ ಹೂವಿನ ಬೆಲೆ ಇನ್ನೆಷ್ಟು ಏರಿಕೆಯಾಗಬಹುದು ಎಂಬ ಆತಂಕದಲ್ಲಿ ಗ್ರಾಹಕರು ಇದ್ದಾರೆ.

ಹೂವಿನ ಬೆಲೆ ಪಟ್ಟಿ (ರೂಪಾಯಿಗಳಲ್ಲಿ)

ಹೂವು ಬೆಲೆ
ಗುಲಾಬಿ 80 – 100
ಸೇವಂತಿಗೆ 300
ಸುಗಂಧರಾಜ 40-50
ಕಾಕಡ 400 – 500
ಮಲ್ಲಿಗೆ 300
ಕನಕಾಂಬರ 600 – 800

ಹೂವಿನ ಜೊತೆಗೆ ತರಕಾರಿಗಳ ಬೆಲೆಯೂ ಏರಿಕೆಯಗಿದ್ದು, ಟೊಮೆಟೊ ದರ ಕೆಜಿಗೆ 100 ರೂ. ಸಮೀಪ ಬಂದು ನಿಂತಿದೆ. ಇನ್ನು ಉಳಿದ ಕ್ಯಾರೆಟ್, ಬಟಾಣಿ, ಈರುಳ್ಳಿ ಬೆಲೆಯು ಜಾಸ್ತಿಯಾಗುತ್ತಿದೆ. ಸದ್ಯ ಹೆಚ್ಚು ಮಳೆಯಾಗುತ್ತಿರುವುದರಿಂದ ತರಕಾರಿಗಳು ಕೊಳೆತು ಹೋಗುತ್ತಿದ್ದು, ಮಾರುಕಟ್ಟೆಗೆ ಹೆಚ್ಚು ತರಕಾರಿಗಳು ಪೂರೈಕೆಯಾಗುತ್ತಿಲ್ಲ.‌ ಮುಂದಿನ ದಿನಗಳಲ್ಲಿ ಬೆಲೆ ಮಳೆ ಹೆಚ್ಚಾದ್ರೆ ತರಕಾರಿಗಳ‌ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದೆ.‌ ತರಕಾರಿ ಬೆಲೆ ಜಾಸ್ತಿಯಾಗುತ್ತಿರುವುದರಿಂದ ತರಕಾರಿ ವ್ಯಾಪರವು ಡಲ್ ಆಗಿದೆ ಅಂತ ತರಕಾರಿ ವ್ಯಾಪಾರಸ್ಥರು ಹೇಳಿದ್ದಾರೆ. ಆದರೆ, ಕೆಲವೊಂದು ತರಕಾರಿಗಳ ಬೆಲೆ ತುಸು ಇಳಿಕೆಯೂ ಆಗಿದೆ ಎಂಬುದು ಗಮನಾರ್ಹ.

ತರಕಾರಿ ಬೆಲೆ ಪಟ್ಟಿ (ದರ ಕೆಜಿಗೆ ರೂಪಾಯಿಗಳಲ್ಲಿ)

ತರಕಾರಿ ಹಿಂದಿನ ಬೆಲೆ ಇಂದಿನ ಬೆಲೆ
ಟೊಮೆಟೊ 65 60
ಬಿಳಿ ಬದನೆ 50 49
ಮೆಣಸಿನ ಕಾಯಿ 80 80
ನುಗ್ಗೆ ಕಾಯಿ 130
ಊಟಿ ಕ್ಯಾರೆಟ್ 80 100
ನವಿಲುಕೋಸು 80 40
ಮೂಲಂಗಿ 70 30
ಹೀರೇಕಾಯಿ 80 40
ಆಲೂಗಡ್ಡೆ 40 35
ಈರುಳ್ಳಿ 40 50
ಕ್ಯಾಪ್ಸಿಕಂ 60 50
ಹಾಗಲಕಾಯಿ 60 60
ಕೊತ್ತಂಬರಿ ಸೊಪ್ಪು 40 70
ಶುಂಠಿ 198 185
ಬೆಳ್ಳುಳ್ಳಿ 220 350
ಪಾಲಕ್ 46
ಪುದಿನ 92
ಬಟಾಣಿ 210 210
ನಾಟಿ ಬೀನ್ಸ್ 75 65

ಇದನ್ನೂ ಓದಿ: ಬಿಬಿಎಂಪಿ ಇನ್ಮುಂದೆ ಗ್ರೇಟರ್ ಬೆಂಗಳೂರು ಅಥಾರಿಟಿ? ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ

ಒಟ್ಟಿನಲ್ಲಿ ಮಳೆಯ ಕಾರಣದಿಂದಾಗಿ ತರಕಾರಿ ಬೆಳೆಗಳಿಗೆ ರೋಗ ಹಾಗೂ ಕೀಟಾಣುಗಳ ಹಾವಾಳಿ ಜಾಸ್ತಿಯಾಗಿದ್ದು ತರಕಾರಿ ಬೆಲೆ‌ ದುಪ್ಪಾಟ್ಟಾಗಿದೆ.‌ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾದರೆ ತರಕಾರಿ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ