ಬೆಂಗಳೂರು: ಸ್ಕೂಟಿಗೆ ಕುದುರೆ ಕಟ್ಟಿ ಎಳೆದ ವ್ಯಕ್ತಿ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
ಬೆಂಗಳೂರಿನ ರಸ್ತೆಯೊಂದರಲ್ಲಿ ಸ್ಕೂಟರ್ ಸವಾರನೊಬ್ಬ ಕುದುರೆಯನ್ನು ತನ್ನ ಸ್ಕೂಟರ್ಗೆ ಕಟ್ಟಿ ಎಳೆದುಕೊಂಡು ಹೋಗುತ್ತಿರುವ ಅಮಾನವೀಯ ವೀಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುದುರೆ ಭಯಭೀತವಾಗಿರುವಂತೆ ಕಂಡುಬಂದಿದ್ದು, ಸವಾರನ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಾಣಿ ಹಿಂಸೆಯ ಈ ಘಟನೆ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ಬೆಂಗಳೂರು, ನವೆಂಬರ್ 3: ಬೆಂಗಳೂರಿನ (Bengaluru) ರಸ್ತೆಯೊಂದರಲ್ಲಿ ಸ್ಕೂಟರ್ ಸವಾರನೊಬ್ಬ ತನ್ನ ಗಾಡಿಗೆ ಕುದುರೆಯೊಂದನ್ನು ಕಟ್ಟಿ ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ. ಈ ಅಮಾನವೀಯ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ.
ಸ್ಕೂಟರ್ಗೆ ಸವಾರನ ಅನಾಗರಿಕತೆ
ಸವಾರನೊಬ್ಬ ತನ್ನ ಸ್ಕೂಟರ್ಗೆ ಅಸಹಾಯಕ ಕುದುರೆಯನ್ನು ಕಟ್ಟಿ, ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ತನ್ನ ಸುತ್ತ ಮುತ್ತಲೂ ಓಡಾಡುತ್ತಿರುವ ವಾಹನಗಳನ್ನು ನೋಡಿ ಕುದುರೆ ಭಯಭೀತವಾದಂತೆ ಈ ವೀಡಿಯೋದಲ್ಲಿ ಕಂಡುಬಂದಿದೆ. ಸ್ಕೂಟರ್ಗೆ ಓಡಿಸುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸದೆ ಕೈಯಲ್ಲಿ ಫೋನ್ ಹಿಡಿದು ಪುಂಡಾಟ ಮೆರೆದಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈತನ ಬೇಜವಾಬ್ದಾರಿತನ ಮತ್ತು ಅನಾಗರಿಕತೆಗೆ ಅಸಹನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.
ವೈರಲ್ ವೀಡಿಯೋ ಹೊಂದಿರುವ ಎಕ್ಸ್ ಪೋಸ್ಟ್ ಇಲ್ಲಿದೆ
Shocking cruelty on Bengaluru roads! In a disturbing display of inhumanity, a biker was seen tying a helpless horse to his scooter and dragging it through busy traffic road, all while recording videos for social media.The terrified animal struggled to keep up as vehicles rushed… pic.twitter.com/JQvmlFyX5e
— Karnataka Portfolio (@karnatakaportf) November 3, 2025
ಈ ಕುರಿತು ಕರ್ನಾಟಕ ಪೋರ್ಟ್ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರಾಣಿಗಳು ಮನರಂಜನಾ ಸಾಧನಗಳಲ್ಲ; ಅವು ನಮ್ಮಂತೆಯೇ ನೋವು, ಭಯ ಮತ್ತು ಆಯಾಸವನ್ನು ಅನುಭವಿಸುತ್ತವೆ. ಅಧಿಕಾರಿಗಳು ಈ ಕ್ರೌರ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವನಂತಹ ಜನರು ಕಠಿಣ ಶಿಕ್ಷೆಯನ್ನು ಎದುರಿಸುವಂತೆ ನೋಡಿಕೊಳ್ಳಬೇಕು ಎಂದು ಬರೆಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:36 pm, Mon, 3 November 25




