ಬೆಂಗಳೂರು, ಮಾರ್ಚ್ 23: ಬೆಂಗಳೂರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 24 ಸಾವಿರ ಲೀಟರ್ ಮತ್ತು ಮೇಲ್ಪಟ್ಟ ವಾಟರ್ ಟ್ಯಾಂಕರ್ಗಳಿಗೆ (Water Tanker) ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. 24 ಸಾವಿರ ಲೀಟರ್ ಮತ್ತು ಮೇಲ್ಪಟ್ಟ 200 ವಾಟರ್ ಟ್ಯಾಂಕರ್ಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆಗೆ ಪಡೆದಿದೆ. ಸಾರ್ವಜನಿಕರು ಈ ವಾಟರ್ ಟ್ಯಾಂಕರ್ಗಳನ್ನು ಉಪಯೋಗಿಸಕೊಳ್ಳಬಹುದಾಗಿದೆ.
ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದ ಜಲಮಂಡಳಿ
ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ. ಜಲಮಂಡಳಿ ಈ ಹಿಂದೆ 600 ರಿಂದ 1,200 ಲೀಟರ್ ವಾಟರ್ ಟ್ಯಾಂಕರ್ಗಳಿಗೂ ಮಾತ್ರ ದರ ನಿಗದಿ ಮಾಡಿತ್ತು. ಇದೀಗ 24 ಸಾವಿರ ಲೀಟರ್ ಮತ್ತು ಮೇಲ್ಪಟ್ಟ ವಾಟರ್ ಟ್ಯಾಂಕರ್ಗಳಿಗೆ ದರ ನಿಗದಿ ಮಾಡಿದೆ. ಜಿಎಸ್ಟಿ ಸೇರಿಸಿ ಈ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕುವ ಸಂಬಂಧ ಇತ್ತೀಚೆಗಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ, ನೀರಿನ ಟ್ಯಾಂಕರ್‌ಗಳ ಮಾಲೀಕರು ಮಾರ್ಚ್ 7ರ ಗಡುವಿನ ಒಳಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ದರ ನಿಗದಿ ಸಂಬಂಧ ಈ ಸೂಚನೆ ನೀಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ