ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಯುವಕರ ವಿರುದ್ಧ ಪ್ರಕರಣ ದಾಖಲು

ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿ ವಿಕೃತಿ ಮೆರೆದಿದ್ದ ಯುವಕರ ವಿರುದ್ಧ ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಯುವಕರ ವಿರುದ್ಧ ಪ್ರಕರಣ ದಾಖಲು
ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವಕರು
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 04, 2022 | 10:05 PM

ಬೆಂಗಳೂರು: ಪ್ರಾಣಿ ಹಿಂಸೆ ಮಹಾಪಾಪ ಅನ್ನುತ್ತಾರೆ. ಆದರೆ ಇಲ್ಲಿ ಕೆಲ ಯುವಕರು ಮಾನವೀಯತೆಯನ್ನು ಮರೆತು ದೌರ್ಜನ್ಯ ಮೆರೆದಿದ್ದಾರೆ. ಮೂಕ ಪ್ರಾಣಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಬೊಗಳಿದ್ದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿ ವಿಕೃತಿ ಮೆರೆದಿದ್ದ ಯುವಕರ ವಿರುದ್ಧ ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಹುಲ್, ರಜತ್ ಹಾಗೂ ರಂಜಿತ್ ನಾಯಿಗೆ ಥಳಿಸಿದ್ದ ಯುವಕರು.

ಘಟನೆ ಹಿನ್ನೆಲೆ

ಇಂದು ಸಂಜೆ ಭಟ್ಟರಹಳ್ಳಿಯ ಮಂಜುನಾಥ್​ ಲೇಔಟ್​ ನಾಯಿ ಬೊಗಳಿದ್ದಕ್ಕೆ ಯುವಕರು ನಾಯಿಗೆ ಹಿಗ್ಗಾಮುಗ್ಗಾ ಥಳಿಸಿ ವಿಕೃತಿ ಮರೆದಿದ್ದರು. ಗದ್ದಿಗೆಪ್ಪ ಎಂಬುವರಿಗೆ ಸೇರಿದ ನಾಯಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ನಿನ್ನೆ ನಾಯಿ ಬೊಗಳಿದ್ದಕ್ಕೆ ಪಾಪಿ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಮಾಲೀಕ ನಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯಿ ಮೇಲೆ ಕಾರು ಚಲಾಯಿಸಿದ್ದನ್ನು ನೆನಪಿಸಿಕೊಳ್ಳಬಹು

ಜ.26ರಂದು ಸಂಜೆ 6.15ರಲ್ಲಿ ಜಯನಗರ 1ನೇ ಬ್ಲಾಕ್‌ 10ನೇ ‘ಬಿ’ ಮುಖ್ಯರಸ್ತೆಯ ಮನೆ ಎದುರಿನ ಪಾದಚಾರಿ ಮಾರ್ಗದ ಪಕ್ಕದಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಚಲಾಯಿಸಲಾಗಿತ್ತು. ಆದಿ ಎಂಬಾತ ಬಿಳಿ ಬಣ್ಣದ ಆಡಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಾಯಿ ಮೇಲೆ ಹತ್ತಿಸಿ ಸಾಯಿಸಲು ಯತ್ನಿಸಿದ್ದನು. ಪರಿಣಾಮ ಶ್ವಾನ ಗಾಯಗೊಂಡಿತ್ತು. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾಪುರ ಠಾಣೆ ಪೊಲೀಸರು ಆದಿಯನ್ನು ಬಂಧಿಸಿ ವಿಚಾರಣೆ ನಡೆಸಿ ಠಾಣಾ ಬೇಲ್‌ ಮೇಲೆ ಬಿಡುಗಡೆಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕಲ್ಲಿಕ್ ಮಾಡಿ

Published On - 10:05 pm, Tue, 4 October 22