ಬೆಂಗಳೂರು: ಪುಟ್ಟ ಕಂದಮ್ಮಗೆ ಅವಧಿ ಮೀರಿದ ಚುಚ್ಚುಮದ್ದು ನೀಡಿಕೆ: ಸಿಬ್ಬಂದಿ ಅಮಾನತು

ಮಕ್ಕಳನ್ನ ಆಸ್ಪತ್ರೆಗಳಿಗೆ ಕರೆದುಕೊಂಡು ಹೂಗುವ ಪೋಷಕರೇ ವೈದ್ಯರ ಬಗ್ಗೆ ಇರಲಿ ಎಚ್ಚರ. ಏಕೆಂದರೆ, ಬೆಂಗಳೂರಿನಲ್ಲಿ ಮಕ್ಕಳಿಗೆ ಅವಧಿ ಮೀರಿದ ಚುಚ್ಚು ಮದ್ದು, ಮಾತ್ರೆ, ಡ್ರಿಪ್ಸ್ ನೀಡಿ ಯಾಮಾರಿಸಲಾಗುತ್ತಿದೆ. ಡಾಕ್ಟರ್​ಗಳ ನಿರ್ಲಕ್ಷದಿಂದಾಗಿ ಪುಟ್ಟ ಕಂದಮ್ಮ ಸಾವು ಬದುಕಿನ ಹೋರಾಡುತ್ತಿದ್ದು, ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು: ಪುಟ್ಟ ಕಂದಮ್ಮಗೆ ಅವಧಿ ಮೀರಿದ ಚುಚ್ಚುಮದ್ದು ನೀಡಿಕೆ: ಸಿಬ್ಬಂದಿ ಅಮಾನತು
ಅವಧಿ ಮೀರಿದ ಡ್ರಿಪ್ಸ್ ಹಾಕಿದ ವೈದ್ಯರು, ನರಳಾಡುತ್ತಿರುವ ಪುಟ್ಟ ಕಂದಮ್ಮ
Follow us
Poornima Agali Nagaraj
| Updated By: ಗಂಗಾಧರ​ ಬ. ಸಾಬೋಜಿ

Updated on:Nov 03, 2023 | 4:11 PM

ಬೆಂಗಳೂರು, ನ.3: ಮಕ್ಕಳನ್ನ ಆಸ್ಪತ್ರೆಗಳಿಗೆ ಕರೆದುಕೊಂಡು ಹೂಗುವ ಪೋಷಕರೇ ವೈದ್ಯರ ಬಗ್ಗೆ ಇರಲಿ ಎಚ್ಚರ. ಏಕೆಂದರೆ, ಬೆಂಗಳೂರಿನಲ್ಲಿ (Bengaluru) ಮಕ್ಕಳಿಗೆ ಅವಧಿ ಮೀರಿದ ಚುಚ್ಚು ಮದ್ದು, ಮಾತ್ರೆ, ಡ್ರಿಪ್ಸ್ ನೀಡಿ ಯಾಮಾರಿಸಲಾಗುತ್ತಿದೆ. ಡಾಕ್ಟರ್​ಗಳ ನಿರ್ಲಕ್ಷದಿಂದಾಗಿ ಪುಟ್ಟ ಕಂದಮ್ಮವೊಂದು ಸಾವು ಬದುಕಿನ ಹೋರಾಡುತ್ತಿದೆ.

ಮೂರು ವರ್ಷದ ಯಾದ್ವಿ ಎಂಬ ಮಗುವಿಗೆ ಅಕ್ಟೋಬರ್ 29 ರಂದು ಜ್ವರ ಬಂದಿದ್ದು, ಪೋಷಕರು ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಮಗು ಸುಸ್ತಾಗಿದೆ ಅಂತ ವೈದ್ಯರು ಡ್ರಿಪ್ಸ್ ಹಾಕಿದ್ದಾರೆ. ಈ ಮದ್ದು ಮಗುವಿನ ದೇಹಕ್ಕೆ ಹೋಗುತ್ತಿದ್ದಂತೆ ಮಗುವಿನ ತುಟಿಯಲ್ಲಿ ಸೌಲ್ಲಿಂಗ್, ರಕ್ತ ಬರಲು ಆರಂಭವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ, ದಂಧೆಗೆ ವೈದ್ಯರೇ ಸಾಥ್

ಇದನ್ನ ಗಮನಿಸಿದ ಪೋಷಕರಿಗೆ, ವೈದ್ಯರು ಅವಧಿ ಮುಗಿದ ಡ್ರಿಪ್ಸ್ ಕೊಟ್ಟಿರುವುದು ಗೊತ್ತಾಗಿದೆ. ಇದನ್ನ ಪ್ರಶ್ನಿಸಿದ್ದಕ್ಕೆ ವೈದ್ಯರು ತಪ್ಪನ್ನೆ ಸಮರ್ಥಿಸಿಕೊಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಬೇರೊಂದು ಆಸ್ಪತ್ರೆಗೆ ದಾಖಲಿಸಿ ಸಂಜೀವಿನಿ ಆಸ್ಪತ್ರೆಯ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಸ್ಪತ್ರೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಗುವಿನ ಪೋಷಕರು ಏರಿಯಾದ ಎಂಒಎಚ್​ ಅವರಿಗೂ ಮಗುವಿನ ಪೋಷಕರು ದೂರು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಗುವಿನ ತಾಯಿ ಪ್ರಿಯಾಂಕ, 28 ರಂದು ಮಗುವನ್ನ ದಾಖಲಿಸಿದ್ದೆವು. ಮಗುವಿಗೆ ನಾರ್ಮಲ್ ಜ್ವರ ಇತ್ತು. ಆದರೆ ಮಗುವನನ್ನ ಸಂಜೀವಿನಿ ಆಸ್ಪತ್ರೆಗೆ ದಾಖಾಲು ಮಾಡಿದ ಮೇಲೆ ಆರೋಗ್ಯದಲ್ಲಿ ಹೆಚ್ಚು ಸಮಸ್ಯೆಯಾಯ್ತು. ನಾವು ಡ್ರಿಪ್ಸ್ ಡೇಟ್ ನೋಡಿದಾಗ ಅದರ ಅವಧಿ ಮುಕ್ತಾಯಗೊಂಡು ಎರಡು ತಿಂಗಳು ಆಗಿದೆ. ಈ ಮದ್ದು ನೀಡಿದ ನಂತರ ಮಗುವಿನ ಆರೋಗ್ಯ ಗಂಭೀರವಾಯಿತು. ಈಗಾ ನಾವು ಬೇರೆ ಆಸ್ಪತ್ರೆಗೆ ದಾಖಾಲು ಮಾಡಿದ ಮೇಲೆ ಸ್ವಲ್ಪ ಚೇತರಿಕೆ ಕಾಣುತ್ತಿದೆ. ಒಂದು ಲೋಟ ಹಾಲು ಕುಡಿತ ಇಲ್ಲ ಮಗು. ಈ ಕುರಿತಾಗಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಓದಿರುವ ನಮ್ಮವಂತವರಿಗರ ಹೇಗೆ ಮಾಡಿದರೆ ಓದಾದೇ ಇರುವ ಜನರ ಗತಿ ಏನು ಎಂದು ಪ್ರಶ್ನಿಸಿದರು.

ಸಿಬ್ಬಂದಿ ಅಮಾನತು

ಸಂಜೀವಿನಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸಹನ ಪ್ರತಿಕ್ರಿಯೆ ನೀಡಿದ್ದು, ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ಕೊಟ್ಟಿರುವುದು ನಿಜ. ಮಗುವನ್ನ ಮೊದಲನೇ ದಿನ ಕರೆದುಕೊಂಡು ಬಂದಾಗ ಮಗುವಿನ ಬಾಯಲ್ಲಿ ಹುಣ್ಣಾಗಿತ್ತು. ಇದೆ ಡ್ರಿಪ್ಸ್ ಕೊಡಲಾಗಿದೆ. ಈ ಡ್ರಿಪ್ಸ್​ನಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ನಾವು ಕ್ಷಮೆ ಕೇಳುತ್ತೇವೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನುತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 am, Fri, 3 November 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ