ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್​ಗೆ ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ

ಇತ್ತೀಚಿನ ದಿನಗಳಲ್ಲಿ ಆನ್​ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಪ್ರಸಿದ್ಧ ಪ್ರವಾಸಿ ತಾಣವೂ ಆಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನೂ ಸಹ ಸೈಬರ್ ವಂಚಕರು ಗುರಿಯಾಗಿಸಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೆಸರಿನಲ್ಲಿ ನಕಲಿ ವೆಬ್​​ಸೈಟ್ ಆರಂಭಿಸಿ, ಟಿಕೆಟ್ ಹೆಸರಿನಲ್ಲಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಈ ಬಗ್ಗೆ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಉದ್ಯಾನವನ ಆಡಳಿತ ಮನವಿ ಮಾಡಿದೆ.

ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್​ಗೆ ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ
ಬನ್ನೇರುಘಟ್ಟ ಜೂ, ಸಫಾರಿಗೆ ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ
Updated By: Ganapathi Sharma

Updated on: Apr 29, 2025 | 9:29 AM

ಆನೇಕಲ್, ಏಪ್ರಿಲ್ 29: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನ (Bannerghatta National Park) ಹೆಸರಿನಲ್ಲಿ ಆನ್​ಲೈನ್ ವಂಚಕರು (Online Fraud) ನಕಲಿ ವೆಬ್​ಸೈಟ್ (Fake Website) ಆರಂಭಿಸಿ ಸಾರ್ವಜನಿಕರಿಗೆ ವಂಚನೆ ಎಸಗುತ್ತಿರುವುದು ಬೆಳಕಿಗೆ ಬಂದಿದೆ. ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್​ಗೆ ಆನ್​ಲೈನ್ ಮೂಲಕ ಟಿಕೆಟ್ ಪಡೆಯಲು ಮುಂದಾದ ಗ್ರಾಹಕರನ್ನು ಈ ನಕಲಿ ವೆಬ್​ಸೈಟ್ ಮೂಲಕ ಯಾಮಾರಿಸಲಾಗುತ್ತಿದೆ. ಇದರಿಂದಾಗಿ ಪ್ರವಾಸಿಗರು ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಬನ್ನೇರುಘಟ್ಟ ಉದ್ಯಾನವನ ಹೆಸರಿನಲ್ಲಿ ವಂಚನೆ ಹೇಗೆ?

ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೆಸರಿನಲ್ಲಿ ನಕಲಿ ವೆಬ್​ಸೈಟೊಂದು (https://bannerghattanationalpark.org) ಕಾರ್ಯಾಚರಿಸುತ್ತಿದೆ. ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್​​ಗೆ ಟಿಕೆಟ್ ಬುಕಿಂಗ್ ಹೆಸರಿನಲ್ಲಿ ವಂಚನೆ ಎಸಗಲಾಗುತ್ತಿದೆ. ನಕಲಿ ವೆಬ್​ಸೈಟ್​​ನಲ್ಲಿ ಡೊನೇಷನ್ ಲಿಂಕ್ ಇದ್ದು, ಅದರ ಮೇಲೆ ಕ್ಲಿಕ್ ಮಾಡಿದರೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯ ಲಿಂಕ್ ಎಂಬ ಪೇಜೊಂದು (payments@banbanjara.com) ತೆರೆದುಕೊಳ್ಳುತ್ತದೆ. ಸದ್ಯ, ಈವರೆಗೆ ಯಾವುದೇ ಪ್ರವಾಸಿಗರು
ಮೋಸ ಹೋದ ಬಗ್ಗೆ ದೂರುಗಳನ್ನು ದಾಖಲಿಸಿಲ್ಲ.

‘ವೆಬ್​​ಸೈಟ್ ಪರಿಶೀಲನೆ ನಡೆಸಿದ ವೇಳೆ ಫೇಕ್ ವೆಬ್​ಸೈಟ್ ಪತ್ತೆಯಾಗಿದೆ. ಅದರಲ್ಲಿ ಬನ್ನೇರುಘಟ್ಟ ಜೂ, ಸಫಾರಿಗೆ ಟಿಕೆಟ್ ಬುಕ್ ಮಾಡಿದ್ದು ನನ್ನ ವೈಯಕ್ತಿಕ ಅಕೌಂಟ್​​ನಿಂದ 2 ಸಾವಿರ ರೂ. ಹಣ ಪಾವತಿ ಆಗಿದೆ. ಹಾಗಾಗಿ ಪ್ರವಾಸಿಗರು ಯಾರೂ ವಂಚನೆಗೆ ಒಳಗಾಗಬಾರದು’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ
‘ಭಾರತವನ್ನು ದ್ವೇಷಿಸುತ್ತೇನೆ’: ವೈದ್ಯೆ ಅಫೀಫ ಫಾತಿಮಾ ದೇಶ ವಿರೋಧಿ ಪೋಸ್ಟ್
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ಸೌಲಭ್ಯ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್​ಲೈನ್ ವಂಚನೆ: ಎಚ್ಚರದಿಂದಿರಿ

ಅಲ್ಲದೆ, ನಕಲಿ ವೆಬ್​ಸೈಟ್ ವಿಚಾರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಸೂರ್ಯಸೇನ್ ದೂರು ದಾಖಲಿಸಿದ್ದಾರೆ.

ಪ್ರವಾಸಿಗರೇ ಗಮನಿಸಿ

ಮೇಲೆ ಉಲ್ಲೇಖಿಸಿರುವ ವೆಬ್​​ಸೈಟ್​ಗಳು ನಕಲಿ ಆಗಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆನ್​​ಲೈನ್ ಟಿಕೇಟ್ ಬುಕಿಂಗ್‌ಗಾಗಿ ಅಧಿಕೃತ ವೆಬ್‌ಸೈಟ್ https://bannerughattabiopark.org/ ಇದನ್ನೇ ಬಳಸಬೇಕು ಎಂದು ಸೂರ್ಯಸೇನ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Cyber Crime: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನ್​ಲೈನ್ ವಂಚನೆ: ಈ ಸ್ಕ್ಯಾಮ್​ಗಳ ಬಗ್ಗೆ ಎಚ್ಚರದಿಂದಿರಿ

ಈಗಾಗಲೇ ಬ್ಯಾಂಕ್, ಷೇರು ಮಾರುಕಟ್ಟೆ ಹೂಡಿಕೆ, ಡಿಜಿಟಲ್ ಅರೆಸ್ಟ್ ಇತ್ಯಾದಿಗಳ ಮೂಲಕ ಸೈಬರ್ ಅಪರಾಧಿಗಳು ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗಿವೆ. ಇದೀಗ ಉದ್ಯಾನವನಗಳು, ಪ್ರವಾಸಿ ತಾಣಗಳ ಆನ್​​ಲೈನ್ ಬುಕಿಂಗ್ ಹೆಸರಿನಲ್ಲಿಯೂ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರವಾಸಿಗರು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ