ವರ್ತೂರ್ ಸಂತೋಷ್ ಬಂಧನ: FSL ವರದಿ ಬಂದ ಬಳಿಕ ಮತ್ತೊಂದು ಆಯಾಮದಲ್ಲಿ ತನಿಖೆ
ಎಫ್ಎಸ್ಎಲ್ ವರದಿಯಲ್ಲಿ ಎಷ್ಟು ವರ್ಷದ ಹುಲಿ ಉಗುರು, ಯಾವ ಜಾತಿಯ ಹುಲಿ ಸೇರಿದಂತೆ ಮತ್ತಿತ್ತರ ಮಾಹಿತಿ ಲಭ್ಯವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಕಗ್ಗಲಿಪುರ ಅರಣ್ಯಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಸಂತೋಷ್ ಬಳಿ ಪತ್ತೆಯಾದ ಹುಲಿ ಉಗುರಿನ ಕುರಿತಂತೆ ಮಾಹಿತಿ ಕಲೆಹಾಕಲಾಗುತ್ತಿದೆ.
ಬೆಂಗಳೂರು ಅ.25: ಬಿಗ್ ಬಾಸ್ (Big Boss) ಸ್ಪರ್ಧಿ, ಹಳ್ಳಿಕಾರ್ ವರ್ತೂರ್ ಸಂತೋಷ್ (Varthur Santhosh) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 (Wildlife Protection Act 1972) ಅಡಿ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿ ಸುರೇಶ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಇದು ಹುಲಿಯದ್ದೇ ಉಗುರು ಅಂತ ಎಫ್ಎಸ್ಎಲ್ ವರದಿ ಬಂದರೇ ವರ್ತೂರ್ ಸಂತೋಷ್ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಪ್ರಕರಣದ ತನಿಖೆ ಮತ್ತೊಂದು ಆಯಾಮದಲ್ಲಿ ನಡೆಯಲಿದೆ.
ಎಫ್ಎಸ್ಎಲ್ ವರದಿಯಲ್ಲಿ ಎಷ್ಟು ವರ್ಷದ ಹುಲಿ ಉಗುರು? ಯಾವ ಜಾತಿಯ ಹುಲಿ ? ಸೇರಿದಂತೆ ಮತ್ತಿತ್ತರ ಮಾಹಿತಿ ಲಭ್ಯವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ಕಗ್ಗಲಿಪುರ ಅರಣ್ಯಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಹುಲಿ ಉಗುರನ್ನು ಸಂತೋಷ್ಗೆ ನೀಡಿದ್ದು ಯಾರು? ಯಾರು ಮಾರಿದರು? ಇದರ ಮೂಲ ಎಲ್ಲಿ ಎಂಬ ಮಾಹಿತಿಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಎಫ್ಎಸ್ಎಲ್ ವರದಿ ಮತ್ತು ತಾವು ನಡೆಸಿದ ತನಿಖೆಯ ವರದಿಯನ್ನು ಕಗ್ಗಲಿಪುರ ಅರಣ್ಯಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳಿಗೆ ಹಸ್ತಾಂತರ ಮಾಡಲಿದ್ದಾರೆ. ಈ ವರದಿಗಳನ್ನು ಆಧರಿಸಿ ಪ್ರಾಧಿಕಾರಗಳು ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದತ್ತಾಂಶವನ್ನು ಪರಿಶೀಲನೆ ಮಾಡಲಿದ್ದಾರೆ.
ಇದನ್ನೂ ಓದಿ: ಹುಲಿ ಉಗುರು: ವರ್ತೂರು ಸಂತೋಷ್ ಬಳಿಕ ದರ್ಶನ್, ವಿನಯ್ ಗುರೂಜಿ ವಿರುದ್ಧ ದೂರು ದಾಖಲು
ಕರ್ನಾಟಕದ ನಾಗರಹೊಳೆ, ಭದ್ರಾ, ಕಾಳಿ ದಾಂಡೇಲಿಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳು, ತಮಿಳುನಾಡಿನ ಅಣ್ಣಾಮಲೈ, ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಐದು ವರ್ಷಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಐದು ವರ್ಷಗಳಲ್ಲಿ ಹುಲಿಗಳನ್ನ ಬೇಟೆಯಾಡಿರುವುದು, ಮೃತ ದೇಹಗಳ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ.
ಹುಲಿ ಉಗುರಿನ ಆಭರಣ ತೊಟ್ಟ ಸೆಲೆಬ್ರೆಟಿಗಳಿಗೆ ಶರುವಾಯ್ತು ಸಂಕಷ್ಟ
ಕನ್ನಡ ಚಲನಚಿತ್ರರಂಗದ ಕೆಲವು ನಟರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ. ಪೆಂಡೆಂಟ್ ಧರಿಸಿ ಫೋಟೋ ತೆಗೆಸಿಕೊಂಡಿದ್ದ ಸೆಲೆಬ್ರೆಟಿಗಳಿಗೆ ಸಂಕಷ್ಟ ಎದುರಾಗಲಿದೆ. ಹೌದು ಸೆಲೆಬ್ರೆಟಿಗಳು ಟಿವಿ ಸಂದರ್ಶನ ಸಂದರ್ಭಗಳಲ್ಲಿ, ಹಲವು ಕಾರ್ಯಕ್ರಮಗಳಲ್ಲಿ ಹುಲಿ ಉಗುರು ಧರಿಸಿಕೊಂಡು ತೆಗೆಸಿಕೊಂಡ ಫೋಟೋ ಮತ್ತು ವಿಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಿಂದ ಅರಣ್ಯಾಧಿಕಾರಿಗಳು ತಮಗೂ ನೋಟಿಸ್ ನೀಡಲಿದ್ದಾರೆ ಎಂಬ ಚಿಂತೆ ಸೆಲೆಬ್ರೆಟಿಗಳಲ್ಲಿ ಕಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 am, Wed, 25 October 23