ಆಟೋ ದರ ಏರಿಕೆ ಖುಷಿಯಲ್ಲಿದ್ದ ಚಾಲಕರಿಗೆ ಶಾಕ್, ದಿಢೀರನೆ ಏರಿತು ಆಟೋ ಗ್ಯಾಸ್ ದರ! ಹಾಗಾದರೆ ಪ್ರಯಾಣ ದರ ಮತ್ತೆ ಏರುತ್ತದಾ?

ಆಟೋ ದರ ಏರಿಕೆ ಖುಷಿಯಲ್ಲಿದ್ದ ಚಾಲಕರಿಗೆ ಶಾಕ್, ದಿಢೀರನೆ ಏರಿತು ಆಟೋ ಗ್ಯಾಸ್ ದರ! ಹಾಗಾದರೆ ಪ್ರಯಾಣ ದರ  ಮತ್ತೆ ಏರುತ್ತದಾ?
ಆಟೋ ಗ್ಯಾಸ್ ದರ ಏರಿಕೆ

ಸದ್ಯ ಆಟೋ ದರ ಏರಿಕೆಯಾಯ್ತು, ಸ್ವಲ್ಪ ದುಡ್ಡು ಉಳಿಸಬಹುದು ಎಂದುಕೊಂಡಿದ್ದ ಆಟೋ ಚಾಲಕರು ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ನಿನ್ನೆ 66 ರೂಪಾಯಿ ಇದ್ದ ಗ್ಯಾಸ್ ದರ ಇಂದು 69.5 ರೂ. ಆಗಿದೆ. ಆಟೋ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.

TV9kannada Web Team

| Edited By: Ayesha Banu

Dec 01, 2021 | 7:59 AM

ಬೆಂಗಳೂರು: ಇಂದಿನಿಂದ ಆಟೋ ದರ ಏರಿಕೆಯಾಗಿದೆ. ಇದು ಆಟೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಆದ್ರೆ ಆಟೋ ಚಾಲಕರು ಮಾತ್ರ ಫುಲ್ ಖುಷ್ ಆಗಿದ್ದು 8 ವರ್ಷದ ಬಳಿಕ ದರ ಏರಿಕೆಯಾಗಿರುವುದರಿಂದ ಸಂಭ್ರಮಿಸುತ್ತಿದ್ದಾರೆ. ಇಂದಿನಿಂದ ಪ್ರಯಾಣಿಕರ ಬಳಿ ಜಾಸ್ತಿ ಹಣ ಇಸ್ಕೋಬಹುದು ಎಂದು ಖುಷ್ ಆಗಿ ರೋಡಿಗಿಳಿದ ಆಟೋ ಚಾಲಕರಿಗೆ ಬೆಳ್ಳಂ ಬೆಳ್ಳಗ್ಗೆ‌ ಶಾಕ್ ಆಗಿದೆ. 1 ಲೀ. ಆಟೋ ಗ್ಯಾಸ್ ದರ 3 ರೂಪಾಯಿ 5 ಪೈಸೆ ಏರಿಕೆಯಾಗಿದೆ. ಹಾಗಾದ್ರೆ ಮತ್ತೊಂದು ಸುತ್ತು ಆಟೋ ದರ ಏರಿಕೆಯಾಗುತ್ತಾ? ಎಂಬ ಆತಂಕ ಹೆಚ್ಚಾಗಿದೆ. ಏಕೆಂದರೆ ಆಟೋ ಗ್ಯಾಸ್ ದರ ಏರಿಕೆಯಾಗಿರುವುದು ಚಾಲಕರಿಗೆ ಹೊರೆಯಾಗಲಿದೆ. ಹೀಗಾಗಿ ಮತ್ತೊಂದು ಸುತ್ತು ಆಟೋ ದರ ಏರಿಕೆಯಾಗುವ ಸಾಧ್ಯತೆ ಇದೆ.

ಸದ್ಯ ಆಟೋ ದರ ಏರಿಕೆಯಾಯ್ತು, ಸ್ವಲ್ಪ ದುಡ್ಡು ಉಳಿಸಬಹುದು ಎಂದುಕೊಂಡಿದ್ದ ಆಟೋ ಚಾಲಕರು ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ನಿನ್ನೆ 66 ರೂಪಾಯಿ ಇದ್ದ ಗ್ಯಾಸ್ ದರ ಇಂದು 69.5 ರೂ. ಆಗಿದೆ. ಆಟೋ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಇಂದಿನಿಂದ ಪರಿಷ್ಕೃತ ಆಟೋ ಪ್ರಯಾಣ ದರ ಜಾರಿಯಾಗಿದ್ದು ಕನಿಷ್ಠ ಪ್ರಯಾಣದ ದರ 5 ರೂ. ಏರಿಕೆ ಮಾಡಲಾಗಿತ್ತು. ಆದ್ರೆ ಬೆಳಗ್ಗೆಯಿಂದ ಆಟೋ ಗ್ಯಾಸ್‌ ದರವೂ ಸಹ ಹೆಚ್ಚಳವಾಗಿದೆ. ಹೀಗಾದ್ರೆ ನಾವು ಜೀವನ ಮಾಡುವುದು ಹೇಗೆಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಇವತ್ತಿನಿಂದ ಆಟೋ ಪ್ರಯಾಣ ದರ ಏರಿಕೆ ಈ ಹಿಂದೆ ಆಟೋದಲ್ಲಿ ಮಿನಿಮಮ್ ಚಾರ್ಚ್ 25 ರೂಪಾಯಿ ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರೂಪಾಯಿ ಸೇರ್ಪಡೆಯಾಗಿದ್ದು, ಇಂದಿನಿಂದ ಮಿನಿಮಮ್ ಚಾರ್ಜ್ 30ಕ್ಕೆ ಏರಿಕೆಯಾಗಿದೆ. ಜೊತೆಗೆ ಪ್ರತಿ ಕಿಲೋ ಮೀಟರ್ಗೆ ಈ ಹಿಂದೆ 13 ರೂಪಾಯಿ ದರ ಇತ್ತು, ಈಗ ಅದನ್ನು 15 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಮೊದಲು ಐದು ನಿಮಿಷ ಕಾಯುವಿಕೆ ಫ್ರೀ ಇದ್ದು, ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ 5 ರೂಪಾಯಿ ಚಾರ್ಜ್ ಮಾಡಲು ಅವಕಾಶ ಕೊಡಲಾಗಿದೆ. ಅಲ್ದೆ, ಉಚಿತವಾಗಿ 20 ಕೆಜಿ ವರೆಗೆ ಲಗೇಜ್ ಸಾಗಣೆ ಮಾಡಬಹುದು. ಆದ್ರೆ, 21ರಿಂದ 50ಕೆಜಿ ತೂಕದ ಲಗೇಜ್ ಇದ್ರೆ 5 ರೂಪಾಯಿ ಕೊಡಬೇಕಾಗಿದೆ. ಹಾಗೆ ರಾತ್ರಿ ಈ ಹಿಂದಿನಂತೆ ಮೀಟರ್ ಮೇಲೆ ಅರ್ಧದಷ್ಟು ಹೆಚ್ಚುವರಿ ದರ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಆಟೋ ಪ್ರಯಾಣಿಕರೇ ಗಮನಿಸಿ; ಬೆಂಗಳೂರಿನಲ್ಲಿ ಇವತ್ತಿನಿಂದ ಆಟೋ ಪ್ರಯಾಣ ದರ ಏರಿಕೆ

Follow us on

Related Stories

Most Read Stories

Click on your DTH Provider to Add TV9 Kannada