AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಸುಲಿಗೆ ಮಾಡಿದ್ದ ಬರ್ನಲ್ ಸಿದ್ದಿಕಿ ಅರೆಸ್ಟ್, ಇವನ ಹೈಡ್ರಾಮಾಕ್ಕೆ ಬೆರಗಾದ ಪೊಲೀಸರು ಜೈಲಿಗಟ್ಟುದ್ರು

ಬರ್ನಲ್ ಸಿದ್ದಿಕಿ ಆಗಾಗ ಲಾಂಗ್ ತೋರಿಸಿ ಏರಿಯಾಗಳಲ್ಲಿ ಹಾವಳಿ ಕೊಡುತ್ತಿದ್ದ. ಕಳೆದ ಭಾನುವಾರ ಸಂಜೆ ವಸಂತನಗರದ 8ನೇ ಕ್ರಾಸ್ಗೆ ಬಂದಿದ್ದ ಸಿದ್ದಿಕಿ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಹಣ ವಸೂಲಿ ಮಾಡಿದ್ದ.

ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಸುಲಿಗೆ ಮಾಡಿದ್ದ ಬರ್ನಲ್ ಸಿದ್ದಿಕಿ ಅರೆಸ್ಟ್, ಇವನ ಹೈಡ್ರಾಮಾಕ್ಕೆ ಬೆರಗಾದ ಪೊಲೀಸರು ಜೈಲಿಗಟ್ಟುದ್ರು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Dec 01, 2021 | 9:00 AM

Share

ಬೆಂಗಳೂರು: ಲಾಂಗ್ ತೋರಿಸಿ ಅಂಗಡಿಗಳಲ್ಲಿ ಹಣ ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಕೆ.ಜಿ.ಹಳ್ಳಿಯ ಬರ್ನಲ್ ಸಿದ್ದಿಕಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಸಂತನಗರದಲ್ಲಿ ಹಾಡಹಗಲೇ ಲಾಂಗ್ ಬೀಸಿದ ಅಸಾಮಿ ಅರೆಸ್ಟ್ ಆಗಿದ್ದಾನೆ.

ಬರ್ನಲ್ ಸಿದ್ದಿಕಿ ಆಗಾಗ ಲಾಂಗ್ ತೋರಿಸಿ ಏರಿಯಾಗಳಲ್ಲಿ ಹಾವಳಿ ಕೊಡುತ್ತಿದ್ದ. ಕಳೆದ ಭಾನುವಾರ ಸಂಜೆ ವಸಂತನಗರದ 8ನೇ ಕ್ರಾಸ್ಗೆ ಬಂದಿದ್ದ ಸಿದ್ದಿಕಿ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಹಣ ವಸೂಲಿ ಮಾಡಿದ್ದ. ಸಿದ್ದಿಕಿ ಬೆದರಿಕೆಗೆ ಅಂಜಿ ಅಂಗಡಿ ಕೆಲಸಗಾರರು, ಮಾಲೀಕರು ಹಣ ನೀಡುತ್ತಿದ್ದರು. ಸದ್ಯ ಈ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರು ಖದೀಮನ ಹೆಡೆಮುರಿ ಕಟ್ಟಿದ್ದಾರೆ.

ಪೊಲೀಸರ ಬಂಧನದ ವೇಳೆ ಅರೋಪಿ ಹೈಡ್ರಾಮಾ ಇನ್ನು ಪೊಲೀಸರು ಬರ್ನಲ್ ಸಿದ್ದಿಕಿಯನ್ನು ಅರೆಸ್ಟ್ ಮಾಡಿ ಠಾಣೆಗೆ ಕರ್ಕೋಂಡು ಬರ್ತಿದ್ದಂತೆ ಸಿದ್ದಿಕಿ ಹೈಡ್ರಾಮಾ ಮಾಡಿದ್ದಾನೆ. ಬಾಯಿಗೆ ಕೈ ಹಾಕಿಕೊಂಡು ಬ್ಲೇಡ್ ನುಂಗಿದ್ದೇನೆ ಎಂದಿದ್ದಾನೆ. ಬ್ಲೇಡ್ ಅಂದಾಕ್ಷಣ ಬೆಚ್ಚಿ ಬಿದ್ದ ಪೊಲೀಸರು ಆರೋಪಿ ಸಿದ್ದಿಕಿಯನ್ನು ಅಸ್ಪತ್ರೆಗೆ ಕರೆತಂದು ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಈ ವೇಳೆ ಬ್ಲೇಡ್ ಇಲ್ಲ ಎಂಬುದು ಪತ್ತೆಯಾಗಿದೆ. ನಂತರ ಸುಮ್ಮನೆ ಬಿಟ್ಟು ಬಿಡ್ತೀರಿ ಅಂತ ಹಾಗೆ ಹೇಳಿದೆ ಎಂದು ಪೊಲೀಸರಿಗೆ ಯಾಮಾರಿಸಲು ಯತ್ನಿಸಿದ್ದಾನೆ. ಅಲ್ಲದೇ ಇದೇ ರೀತಿ ಹಲವು ಠಾಣೆಗಳಲ್ಲಿ ಡ್ರಾಮಾ ಮಾಡಿದ್ದಾಗಿ ತಿಳಿದು ಬಂದಿದೆ.

ಸಿದ್ದಿಕಿ ಕಳ್ಳತನ, ಸುಲಿಗೆ ಪ್ರಕರಣ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ. ಪೊಲೀಸರು ಕರೆದೊಯ್ದಾಗ ಪೇಪರ್ ನುಂಗಿ ಸೈನೇಡ್ ಎಂದಿದ್ದ. ಇವನ ಹೈಡ್ರಾಮಾ ಕಂಡು ಪೊಲೀಸರು ಬೆರಗಾಗಿದ್ದರು. ವಾರೆಂಟ್ ಇದ್ರು ಪೊಲೀಸರ ಕಣ್ತಪ್ಪಿಸಿ ಸುತ್ತಾಡ್ತಿದ್ದ ಸದ್ಯ ವಸಂತನಗರ ಸುಲಿಗೆ ಕೇಸ್ನಲ್ಲಿ ಅರೆಸ್ಟ್ ಆಗಿದ್ದು ಈ ಬಾರಿ ಆರೋಪಿಯ ಯಾವುದೇ ಡ್ರಾಮಕ್ಕೂ ತಲೆ ಕೆಡಿಸಿಕೊಳ್ಳದ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಧಾರವಾಡ: ಇದುವರೆಗೆ ಯಾರಲ್ಲೂ ಹೊಸತಳಿಯ ವೈರಾಣು ಕಂಡುಬಂದಿಲ್ಲ; ಜಿಲ್ಲಾಧಿಕಾರಿ ಮಾಹಿತಿ

ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರೇ ವಿಲನ್, ನವಜೋಡಿಗೆ ಜೀವ ಬೆದರಿಕೆ

Published On - 8:57 am, Wed, 1 December 21

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ