ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರೇ ವಿಲನ್, ನವಜೋಡಿಗೆ ಜೀವ ಬೆದರಿಕೆ

ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರೇ ವಿಲನ್, ನವಜೋಡಿಗೆ ಜೀವ ಬೆದರಿಕೆ
ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರೇ ವಿಲನ್, ನವಜೋಡಿಗೆ ಜೀವ ಬೆದರಿಕೆ

ಜಾತಿ ಅನ್ನೋ ಗೋಡೆಯನ್ನೇ ಮುಂದಿಟ್ಟುಕೊಂಡು ಅಂಕಿತಾ ಪೋಷಕರು, ಜೋಡಿಗೆ ಅಡ್ಡಿಯಾಗಿದ್ದಾರೆ. ನಮ್ಮ ಹುಡುಗಿಯನ್ನು ವಾಪಾಸ್ ಕಳಿಸಿ.. ಬೇಕಿದ್ದರೆ ದುಡ್ಡು ಕೇಳಿ ಕೊಡುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನ ಬಾಳೋದಕ್ಕೆ ಬಿಡಲ್ಲ ಅಂತ, ದ್ಯಾಮಕುಮಾರ್ ಪೋಷಕರಿಗೆ ಬೆದರಿಕೆ ಒಡ್ಡಿದ್ದಾರಂತೆ..

TV9kannada Web Team

| Edited By: Ayesha Banu

Dec 01, 2021 | 8:29 AM

ಚಿತ್ರದುರ್ಗ: ಒಂದೇ ಊರಿನ ಯುವಕ ಯುವತಿ ಕಾಲೇಜಿಗೆ ಹೋಗಬೇಕಾದ್ರೆ, ಪ್ರೀತಿಯ ಬಲೆಗೆ ಬಿದಿದ್ರು. ಆದ್ರೆ, ಜತೆಯಾಗಿ ಬಾಳೋಣ ಅಂದುಕೊಂಡಿದ್ದ ಜೋಡಿಗೆ, ಹತ್ತಾರು ವಿಘ್ನ ಎದುರಾಗಿದೆ. ಪೋಷಕರೇ ವಿಲನ್ ಆಗಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯ ಗೋಪನಹಳ್ಳಿಯ ಪ್ರೇಮಿಗಳಿಗೆ ಪೋಷಕರು ಅಡ್ಡಿಯಾಗಿದ್ದಾರೆ. ಮದ್ವೆಯಾಗಿದ್ರೂ ಇವರ ಪ್ರಾಣ ಹಿಂಡುತ್ತಿದ್ದಾರೆ.

ಅಂಕಿತಾ ಹಾಗೂ ದ್ಯಾಮಕುಮಾರ್ ಎಂಬ ಯುವ ಜೋಡಿ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ರು. ಚಿತ್ರದುರ್ಗದ ಕಾಲೇಜಿನಲ್ಲಿ ಅಂಕಿತಾ ಸೆಕೆಂಡ್ ಇಯರ್ ಬಿಎ ಓದ್ತಿದ್ದು, ದ್ಯಾಮಕುಮಾರ್ ಐಟಿಐ ಮಾಡಿದ್ದಾನೆ. ಆದ್ರೆ, ಇವರಿಬ್ಬರ ಪ್ರೀತಿ ವಿಷ್ಯ ಅಂಕಿತಾ ಕುಟುಂಬಕ್ಕೆ ಗೊತ್ತಾಗಿತ್ತು. ದ್ಯಾಮಕುಮಾರ್ ಅನ್ಯಜಾತಿಯವನು ಅಂತ ಪ್ರೀತಿಗೆ ಅಡ್ಡಿಪಡಿಸಿ, ಬೇರೊಬ್ಬರ ಜತೆ ಮದುವೆಗೆ ಪ್ಲಾನ್ ಮಾಡಿದ್ರು. ಹೀಗಾಗಿ, ವಾರದ ಹಿಂದೆ ಈ ಜೋಡಿ, ಚಿತ್ರದುರ್ಗದ ಕಣಿವೆ ಮಾರಮ್ಮ ದೇಗುಲಕ್ಕೆ ತೆರಳಿ ಮದುವೆ ಆಗಿದ್ರು. ಬಳಿಕ ಪೋಷಕರ ಕಣ್ತಪ್ಪಿಸಿ ಊರುರು ಅಲೆಯುತ್ತಿರುವ ಜೋಡಿಗೆ, ಜೀವ ಬೆದರಿಕೆ ಹಾಕ್ತಿದ್ದಾರಂತೆ.

ctr love threat

ಅಂಕಿತಾ ಹಾಗೂ ದ್ಯಾಮಕುಮಾರ್

ಜಾತಿ ಅನ್ನೋ ಗೋಡೆಯನ್ನೇ ಮುಂದಿಟ್ಟುಕೊಂಡು ಅಂಕಿತಾ ಪೋಷಕರು, ಜೋಡಿಗೆ ಅಡ್ಡಿಯಾಗಿದ್ದಾರೆ. ನಮ್ಮ ಹುಡುಗಿಯನ್ನು ವಾಪಾಸ್ ಕಳಿಸಿ.. ಬೇಕಿದ್ದರೆ ದುಡ್ಡು ಕೇಳಿ ಕೊಡುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನ ಬಾಳೋದಕ್ಕೆ ಬಿಡಲ್ಲ ಅಂತ, ದ್ಯಾಮಕುಮಾರ್ ಪೋಷಕರಿಗೆ ಬೆದರಿಕೆ ಒಡ್ಡಿದ್ದಾರಂತೆ.. ಹೀಗಾಗಿ, ನವ ಜೋಡಿ ಈಗ ಪೊಲೀಸರ ಮೊರೆ ಹೋಗಿದ್ದಾರೆ.

ಜೋಡಿಹಕ್ಕಿಗಳು ಸದ್ಯ ಎಸ್ಪಿ ಜಿ.ರಾಧಿಕಾ ಹಾಗೂ ಚಳ್ಳಕೆರೆ ಠಾಣೆಗೆ ದೂರು‌ ನೀಡಿದ್ದಾರೆ. ಆದ್ರೆ, ಅಂಕಿತಾ ಪೋಷಕರು ಪೊಲೀಸರು ಯಾವ ರೀತಿ ಬುದ್ಧಿ ಹೇಳ್ತಾರೆ. ಜೋಡಿಗೆ ಇರುವ ಭಯವನ್ನ ಹೇಗೆ ದೂರ ಮಾಡ್ತಾರೆ ನೋಡ್ಬೇಕು.

ವರದಿ: ಬಸವರಾಜ ಮುದನೂರ್, tv9 ಚಿತ್ರದುರ್ಗ

ಇದನ್ನೂ ಓದಿ:   ಪ್ರೇಮಿಗಳು ಇಬ್ಬರೂ ತಬ್ಬಿಕೊಂಡು ಮುಡಿಕಟ್ಟೆ ಬಳಿ ಕಪಿಲಾ ನದಿಗೆ ಹಾರಿದರು! ಮುಂದೇನಾದರು?

Follow us on

Related Stories

Most Read Stories

Click on your DTH Provider to Add TV9 Kannada