ಒಂದೇ ಕುಟುಂಬದ ಮೂವರು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮರಣೊತ್ತರ ಪರೀಕ್ಷೆಯಿಂದ ತಾಯಿ, ಮಗು ಸಾವಿನ ರಹಸ್ಯ ಬಯಲು
ಆ.18ರಂದು ಬೆಂಗಳೂರಿನ ಕೋಣನಕುಂಟೆಯ ಮೈಸೂರು ಬ್ಯಾಂಕ್ ಕಾಲೊನಿಯಲ್ಲಿ ಘಟನೆ ನಡೆದಿತ್ತು. ಪತಿ ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರೆ, ಪತ್ನಿ ಹಾಗೂ ಮಗು ಬೆಡ್ ಮೇಲೆ ಶವವಾಗಿ ಬಿದಿದ್ದರು.
ಬೆಂಗಳೂರು: ಒಂದೇ ಕುಟುಂಬದ ಮೂವರು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ತಾಯಿ, 9 ವರ್ಷದ ಮಗುವಿನ ಸಾವಿನ ಸತ್ಯ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅಸಲಿ ಕೃತ್ಯ ಬಹಿರಂಗವಾಗಿದೆ. ಪತ್ನಿ, ಮಗುವನ್ನು ಕೊಂದು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿ ಜ್ಯೋತಿ, ಪುತ್ರ ನಂದೀಶ್ ಕುತ್ತಿಗೆ ಬಿಗಿದು ಮಹೇಶ್ ಕೊಂದಿದ್ದ. ನಂತರ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಆ.18ರಂದು ಬೆಂಗಳೂರಿನ ಕೋಣನಕುಂಟೆಯ ಮೈಸೂರು ಬ್ಯಾಂಕ್ ಕಾಲೊನಿಯಲ್ಲಿ ಘಟನೆ ನಡೆದಿತ್ತು. ಪತಿ ಮಹೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರೆ, ಪತ್ನಿ ಹಾಗೂ ಮಗು ಬೆಡ್ ಮೇಲೆ ಶವವಾಗಿ ಬಿದಿದ್ದರು. ಪತಿ ಒಬ್ಬರನ್ನು ಕೊಂದು ನೇಣು ಬಿಗಿದುಕೊಂಡ ಅನುಮಾನ ಮೂಡಿತ್ತು.
ಆದರೆ ಹೇಗೆ ಪತ್ನಿ ಹಾಗೂ ಮಗು ಸಾವನಪ್ಪಿದ್ದಾರೆಂಬ ಅನುಮಾನ ಮೂಡಿತ್ತು. ಹೀಗಾಗಿ ಮರಣೊತ್ತರ ಪರಿಕ್ಷೆಯ ವರದಿಗಾಗಿ ಪೊಲೀಸರು ಕಾದಿದ್ದರು. ಈಗ ಮರಣೊತ್ತರ ಪರಿಕ್ಷೆಯಲ್ಲಿ ತಾಯಿ ಮಗು ಸಾವಿನ ರಹಸ್ಯ ಬಯಲಾಗಿದೆ. ಕ್ಯಾನ್ಸರ್ನಿಂದ ಮಹೇಶ್ ಬಳಲುತಿದ್ದ. ತನಗೆ ಕ್ಯಾನ್ಸರ್ ಇರೊದು ತಿಳಿದು ಸಾವಿನ ನಿರ್ಧಾರ ಮಾಡಿದ್ದ. ಇದೇ ವೇಳೆ ಪತ್ನಿ ಹಾಗೂ ಒಂಬತ್ತು ವರ್ಷದ ಮಗನನ್ನು ಹತ್ಯೆ ಮಾಡಿದ್ದ ಎನ್ನಲಾಗುತ್ತಿದೆ.
ಹೇಳೋಕೆ ಮೆಕ್ಯಾನಿಕ್ ಆದ್ರೆ ಫುಲ್‌ಟೈಂ ಬೈಕ್ ಕಳ್ಳತನ
ಬೆಂಗಳೂರು: ಹೇಳೋಕೆ ಮೆಕ್ಯಾನಿಕ್ ಆದ್ರೆ ಫುಲ್‌ಟೈಂ ಬೈಕ್ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಪಾಷಾ, ಹುಸೇನ್ ಸೌದದ್ ಬಂಧಿತ ಆರೋಪಿ. ನಕಲಿ ಕೀ ಬಳಸಿ ನೀಟಾಗಿ ಕಳ್ಳತನ ಮಾಡುತ್ತಿದ್ದರು. 20 ಬೈಕ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಾಜಿನಗರದ ಮನೆಯಲ್ಲೇ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಅಫ್ರೋಜ್, ಕಳ್ಳತನ ಮಾಡಿದ ವಾಹನದ ಬಿಡಿಭಾಗವನ್ನ ಬಿಚ್ಚಿ ಮಾರಾಟ ಮಾಡುತ್ತಿದ್ದರು. ಕಳೆದ ಆರೇಳು ತಿಂಗಳಿನಿಂದ ಬೈಕ್ ಕಳ್ಳತನ ಮಾಡುತ್ತಿದ್ದರು. ಬನಶಂಕರಿ, ಜೆಪಿ ನಗರ, ಬಸವನಗುಡಿ, ಶಿವಾಜಿನಗರ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ರೈಲ್ವಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ:
ರಾಯಚೂರು: ನಗರದ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮೃತನ ಗುರುತನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.