ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 19, 2022 | 1:07 PM

ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ತೆರೆಯಲು ನಿರ್ಧಾರ ಮಾಡಿದ್ದು, ಶಾಸಕರ ಅನುದಾನದಲ್ಲಿ ವಾಹನ ಕೊಡಿಸಲು ಕೂಡ ನಿರ್ಧಾರ ಮಾಡಲಾಗುವುದು ಎಂದು ಬಿ.ಸಿ.ನಾಗೇಶ್ ಹೇಳಿದರು.

ಬಿಜೆಪಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ
ಶಿಕ್ಷಣ ಸಚಿವ ಬಿ.ಸಿ.ನಾಗೇಶ್
Follow us on

ಬೆಂಗಳೂರು: ಬಿಜೆಪಿ ಸರ್ಕಾರ ಶಿಕ್ಷಣ (Education) ಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿದು ಬಿಟ್ಟರು. ಕೊವಿಡ್ ಟೈಮನಲ್ಲಿ ದೇಶದಲ್ಲಿ ಯಾವ ರಾಜ್ಯಗಳು ಶಾಲೆ ಆರಂಭ ಮಾಡಿರಲಿಲ್ಲ. ಆದರೆ ನಾವು ಕೋವಿಡ್ ಇದ್ದರು ಶಾಲೆ ಆರಂಭ ಮಾಡಿದ್ವಿ ಎಂದು ನಗರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದರು. ಇದೀಗ ಹಳ್ಳಿಗಳ ಶಾಲೆಗಳಲ್ಲಿ ಮಕ್ಕಳು ದಾಖಲಾತಿ ಸಂಖ್ಯೆ ಜಾಸ್ತಿ ಆಗುತ್ತಿದೆ. ಶಿಕ್ಷಣದಲ್ಲಿ ತುಂಬಾ ಬದಲಾವಣೆ ತಂದಿದ್ದೇವೆ. ಶಾಲಾ ಕೊಠಡಿ ಸರಿಮಾಡುವ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಹೊಸದಾಗಿ 7 ಸಾವಿರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಶೇ 60% ರಷ್ಟು ಹೊಸ ಶಿಕ್ಷಕರ ಆಯ್ಕೆ ಮಾಡಿಕೊಳುತ್ತೇವೆ.

ಇದನ್ನೂ ಓದಿ: ಕಾನೂನುಬಾಹಿರ ಟ್ಯೂಷನ್, ಕೋಚಿಂಗ್ ಕ್ಲಾಸ್ ಹಾವಳಿ ತಡೆಗಟ್ಟುವಂತೆ ಆಗ್ರಹ: ಸಿಎಂ ಬೊಮ್ಮಾಯಿಗೆ ರುಪ್ಸ ಮನವಿ

35 ಸಾವಿರ ಅತಿಥಿ ಶಿಕ್ಷಕರನ್ನ ನೇಮಕಾತಿ ಮಾಡಿದ್ದೇವೆ. ಕೊರೊನಾದಿಂದ ತುಂಬಾ ಮಕ್ಕಳಿಗೆ ತೊಂದರೆ ಆಗಿದೆ ಅಂತ ವರದಿ ಹೇಳಿವೆ. ಪಾಠಗಳನ್ನು ಮಕ್ಕಳು ಮರೆದು ಬಿಟ್ಟಿದ್ದಾರೆ. ಹೀಗಾಗಿ ಕಲಿಕೆ ಚೇತರಿಕೆ ಅಂತ ಮಾಡಿದ್ದೇವೆ. ಮಕ್ಕಳು ಮರೆತಿರುವ ವಿಷಯಗಳ ರೀವಿಜನ್ ಮಾಡುತ್ತಿದ್ದೇವೆ. ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಲಿಕ ಚೇತರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Deepika Padukone: ಪಾರ್ವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ? ‘ಬ್ರಹ್ಮಾಸ್ತ್ರ’ 2ನೇ ಪಾರ್ಟ್​ ಬಗ್ಗೆ ಹರಡಿದೆ ಗುಸುಗುಸು

ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ತೆರೆಯಲು ನಿರ್ಧಾರ ಮಾಡಿದ್ದು, ಶಾಸಕರ ಅನುದಾನದಲ್ಲಿ ವಾಹನ ಕೊಡಿಸಲು ಕೂಡ ನಿರ್ಧಾರ ಮಾಡಲಾಗುವುದು. 10 ಮಕ್ಕಳು ಇರುವ ಶಾಲೆಯಲ್ಲೂ ಓರ್ವ ಶಿಕ್ಷಕ ನಿಯೋಜನೆ ಮಾಡಲಾಗಿದ್ದು, 11ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಮಕ್ಕಳಿಗೆ ಇಂದು ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದೆ. ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಸಲು ವ್ಯವಸ್ಥೆ ಮಾಡಲಾಗಿದೆ. ಸದ್ಯ ಇಂಗ್ಲಿಷ್​ ಶಿಕ್ಷಕರೇ ಸ್ಪೋಕನ್ ಇಂಗ್ಲಿಷ್ ಮಾಡುತ್ತಿದ್ದಾರೆ. ಇದೇ ವರ್ಷದಿಂದ ನೈತಿಕ ಶಿಕ್ಷಣ ನೀಡುವ ಚಿಂತನೆ ಇದೆ. 1, 2 ಹಾಗೂ 3ನೇ ತರಗತಿಯಲ್ಲಿ NEP ಶಿಕ್ಷಣ ಅಳವಡಿಕೆಗೆ ತಯಾರಿ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಜಿಲ್ಲೆ ಮಕ್ಕಳಿಗೆ ಪೌಷ್ಠಿಕಾಂಶ ಕೊರತೆಯಿದ್ದು, ಹೀಗಾಗಿ ಮೊಟ್ಟೆ ನೀಡಲು ಮು‌ಂದಾಗಿದ್ದೇವೆ ಎಂದು ಬಿ.ಸಿ.ನಾಗೇಶ್ ಹೇಳಿದರು.