ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಪೋಸ್ಟರ್ ಮೂಲಕ ಕ್ಲಾಸ್!

ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಳೆದ 2 ವರ್ಷಗಳಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಯದ್ವಾತದ್ವ ರಸ್ತೆಯನ್ನ ಅಗೆದಿದ್ದು, ವಾಹನ ಸಂಚಾರಕ್ಕೆ ತೀರಾ ಸಮಸ್ಯೆ ಉಂಟಾಗಿದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳಿಗೆ ಪೋಸ್ಟರ್ ಮೂಲಕ ಕ್ಲಾಸ್!
ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜನರು ಪೋಸ್ಟರ್ ಅಂಟಿಸಿದ್ದಾರೆ
Follow us
TV9 Web
| Updated By: sandhya thejappa

Updated on:Jul 19, 2022 | 12:08 PM

ಬೆಂಗಳೂರು: ನಗರದಲ್ಲಿ ಈಗಾಗಲೇ ರಸ್ತೆ ಗುಂಡಿಗಳಿಂದ (Potholes) ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಇದರಿಂದ ಕಂಗೆಟ್ಟ ಜನರು ಪೋಸ್ಟರ್ ಮೂಲಕ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜನರು ಮಲ್ಲೇಶ್ವರಂ ರಸ್ತೆಯಲ್ಲಿ (Malleshwaram Road) ಅವಾಚ್ಯವಾಗಿ ನಿಂದಿಸಿದ ಪೋಸ್ಟರ್​ಗಳನ್ನ ಅಳವಡಿಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್ ಆಗಿದ್ದು, ಬಿಬಿಎಂಪಿ ಇದೀಗ ಪೋಸ್ಟರ್ ತೆಗೆದು ಗುಂಡಿ ಮುಚ್ಚಲು ಮುಂದಾಗಿದೆ.

ಮಲ್ಲೇಶ್ವರಂ ಕ್ಷೇತ್ರದಲ್ಲಿ ಕಳೆದ 2 ವರ್ಷಗಳಿಂದ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಯದ್ವಾತದ್ವ ರಸ್ತೆಯನ್ನ ಅಗೆದಿದ್ದು, ವಾಹನ ಸಂಚಾರಕ್ಕೆ ತೀರಾ ಸಮಸ್ಯೆ ಉಂಟಾಗಿದೆ. ಇದರಿಂದ ರೋಸಿಹೋದ ಜನ ಎಲೆಕ್ಟ್ರಿಕಲ್ ಬಾಕ್ಸ್ ಗಳ ಮೇಲೆ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೋಸ್ಟರ್ ಅಂಟಿಸಿದ್ದಾರೆ. ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗಳಿಗೆ, ಕಲ್ಲು, ಜಲ್ಲಿ ಹಾಕಿ, ಗುಂಡಿ ಮುಚ್ಚಿಸುವುದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಭಾರತ ರೂಪಾಯಿ ಮೌಲ್ಯ ಮತ್ತೊಮ್ಮೆ ದಾಖಲೆಯ ಕುಸಿತ! ಪ್ರತಿ ಯುಎಸ್ ಡಾಲರ್‌ ವಿರುದ್ಧ 80ರೂ.ಗೆ ಏರಿಕೆ

ಇದನ್ನೂ ಓದಿ
Image
CSA T20 League: ಹೊಸ ಟಿ20 ಲೀಗ್​: ಇದು ಮಿನಿ IPL
Image
Agnipath Scheme: ಅಗ್ನಿಪಥ್ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು ದೆಹಲಿ ಹೈಕೋರ್ಟ್​ಗೆ ವರ್ಗಾವಣೆ
Image
ಹಳಿಯಾಳದ ಹಾಸ್ಟೆಲೊಂದರಲ್ಲಿ ರಾತ್ರಿಯೂಟ ಸೇವಿಸಿದ ನಂತರ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
Image
Belagavi News: ಖಾಸಗಿ ವಿಡಿಯೋ ತೋರಿಸಿ ಕಿರುಕುಳ ಪ್ರಕರಣ, ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ ವಿರುದ್ಧ ದೂರು

ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಜ್ಜೆ ಹೆಜ್ಜೆಗೂ ಭಾರಿ ಗುಂಡಿಗಳು ಬಿದ್ದಿವೆ. ವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಆಗುತ್ತಿಲ್ಲ. ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಓಡಾಡುತ್ತಿದ್ದಾರೆ.

ದಿನೇಶ್ ಗುಂಡೂರಾವ್ ಅವರ ಗಾಂಧಿನಗರ ವಿಧಾನಸಭಾ ಕ್ಷೇತ್ರ ಹಾಗೂ ಸಚಿವ ಅಶ್ವಥ್ ನಾರಾಯಣರ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಪೋಸ್ಟರ್​ಗಳ ಅಳವಡಿಕೆ ಮಾಡಲಾಗಿದೆ. ಇಬ್ಬರ ಗಮನಕ್ಕೆ ತಂದರೂ ರಸ್ತೆ ಸರಿಪಡಿಸಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Agnipath Scheme: ಅಗ್ನಿಪಥ್ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳು ದೆಹಲಿ ಹೈಕೋರ್ಟ್​ಗೆ ವರ್ಗಾವಣೆ

Published On - 11:32 am, Tue, 19 July 22