ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು; ಇಂಡಿಯಾನಾ ಮಾಲ್​ನಲ್ಲಿ ಬಂದೂಕಿನ ದಾಳಿಗೆ ಮೂವರು ಸಾವು; ಗನ್​ಮ್ಯಾನ್ ಹತ್ಯೆ

ಅಮೆರಿಕಾದ ಇಂಡಿಯಾನಾದಲ್ಲಿರುವ ಗ್ರೀನ್‌ವುಡ್ ಪಾರ್ಕ್ ಮಾಲ್‌ನಲ್ಲಿ ಭಾನುವಾರ ಸಂಜೆ (ಅಮೆರಿಕಾದ ಕಾಲಮಾನದ ಪ್ರಕಾರ) ಸಾಮೂಹಿಕ ಗುಂಡಿನ ದಾಳಿ ನಡೆದಿದೆ.

ಅಮೆರಿಕಾದಲ್ಲಿ ಮತ್ತೆ ಗುಂಡಿನ ಸದ್ದು; ಇಂಡಿಯಾನಾ ಮಾಲ್​ನಲ್ಲಿ ಬಂದೂಕಿನ ದಾಳಿಗೆ ಮೂವರು ಸಾವು; ಗನ್​ಮ್ಯಾನ್ ಹತ್ಯೆ
ಅಮೆರಿಕಾದಲ್ಲಿ ನಡೆದ ಶೂಟೌಟ್ ದೃಶ್ಯImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 18, 2022 | 8:34 AM

ಇಂಡಿಯಾನಾ: ಅಮೆರಿಕದ ಇಂಡಿಯಾನಾ (Indiana) ರಾಜ್ಯದ ಮಾಲ್‌ನಲ್ಲಿ ಭಾನುವಾರ ಮತ್ತೊಮ್ಮೆ ಶೂಟೌಟ್ ನಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮಾಲ್​ನ ಫುಡ್​ಕೋರ್ಟ್​ಗೆ (Food Court) ನುಗ್ಗಿದ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದು, ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂಲಕ ಅಮೆರಿಕಾದ ಸಾರ್ವಜನಿಕ ಸ್ಥಳದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಕೇಳಿದೆ.

ಗ್ರೀನ್‌ವುಡ್ ಪಾರ್ಕ್ ಮಾಲ್‌ನಲ್ಲಿ ಭಾನುವಾರ ಸಂಜೆ (ಅಮೆರಿಕಾದ ಕಾಲಮಾನದ ಪ್ರಕಾರ) ಸಾಮೂಹಿಕ ಗುಂಡಿನ ದಾಳಿ ನಡೆದಿದೆ ಎಂದು ಇಂಡಿಯಾನಾದ ಗ್ರೀನ್‌ವುಡ್ ಮೇಯರ್ ಮಾರ್ಕ್ ಮೈಯರ್ಸ್ ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಬಂದೂಕುಧಾರಿಯನ್ನು ಪೊಲೀಸರು ಗುಂಡು ಹಾರಿಸಿ ಹೊಂದಿದ್ದಾರೆ. ಇಂಡಿಯಾನಾದ ಗ್ರೀನ್​ವುಡ್ ಪಾರ್ಕ್ ಮಾಲ್​​ನಲ್ಲಿ ಈ ಘಟನೆ ನಡೆದಿದೆ.

ಈ ಗುಂಡಿನ ದಾಳಿ ನಡೆಯಲು ಕಾರಣವೇನೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದೆ. ಈ ಬಗ್ಗೆ ಗ್ರೀನ್‌ವುಡ್ ಪೊಲೀಸರು ಕೂಡ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದು, ಗನ್​ಮ್ಯಾನ್ ಬಳಿ ಉದ್ದನೆಯ ರೈಫಲ್ ಮತ್ತು ಹಲವು ಗುಂಡುಗಳಿದ್ದವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಹಿಳೆಯ ಬ್ಯಾಗ್​ ತಪಾಸಣೆ ವೇಳೆ ಗಲಾಟೆ; ಯುವಕನ ಕಾಲಿಗೆ ಶೂಟ್ ಮಾಡಿದ ಪೊಲೀಸ್

ಮಾಲ್​ನ ಬಾತ್​ರೂಂ ಬಳಿ ಪೊಲೀಸರಿಗೆ ಅನುಮಾನಾಸ್ಪದ ಬ್ಯಾಗ್​ ಒಂದು ಕಂಡಿತ್ತು. ಫುಡ್​ಕೋರ್ಟ್​ ಬಳಿಯಿದ್ದ ಬಾತ್​ರೂಂ ಪಕ್ಕದಲ್ಲಿ ಬ್ಯಾಕ್​ಪ್ಯಾಕ್​ ಬ್ಯಾಗ್ ಇರಿಸಲಾಗಿತ್ತು. ಅದನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಆ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಅಮೆರಿಕಾದಲ್ಲಿ ವರ್ಷಕ್ಕೆ ಸುಮಾರು 40,000 ಜನರು ಗುಂಡೇಟಿನಿಂದ ಸಾವನ್ನಪ್ಪುತ್ತಿದ್ದಾರೆ. ಚಿಕಾಗೋ ಉಪನಗರದಲ್ಲಿ ಜುಲೈ 4ರಂದು ನಡೆದ ಪರೇಡ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಏಳು ಜನರನ್ನು ಕೊಂದಿದ್ದ. ಈ ವೇಳೆ ಮೂರು ಡಜನ್ ಜನರು ಗಾಯಗೊಂಡಿದ್ದರು. ಅದಾದ ಕೆಲವೇ ವಾರಗಳ ನಂತರ ಇದೀಗ ಮತ್ತೊಮ್ಮೆ ಗುಂಡಿನ ದಾಳಿ ನಡೆದಿದೆ.

ಮೇ ತಿಂಗಳಲ್ಲಿ ನಡೆದ ಎರಡು ಹತ್ಯಾಕಾಂಡಗಳ ನಂತರ ಆ ಗುಂಡಿನ ದಾಳಿಯು ನ್ಯೂಯಾರ್ಕ್‌ನ ಅಪ್‌ಸ್ಟೇಟ್ ಸೂಪರ್‌ಮಾರ್ಕೆಟ್‌ನಲ್ಲಿ 10 ಕಪ್ಪು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಟೆಕ್ಸಾಸ್‌ನ ಪ್ರಾಥಮಿಕ ಶಾಲೆಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಕೊಲ್ಲಲ್ಪಟ್ಟಿದ್ದರು.

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್