Nelson Mandela International Day 2022: ಇಂದು ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ; ಮಂಡೇಲಾ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ
Mandela Day: ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿದ್ದರು. ನೆಲ್ಸನ್ ಮಂಡೇಲಾ ಅವರಿಗೆ ನೊಬೆಲ್ ಪ್ರಶಸ್ತಿ ಸೇರಿದಂತೆ 250ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ.

ವಿಶ್ವಸಂಸ್ಥೆಯು 2009ರ ನವೆಂಬರ್ನಲ್ಲಿ ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ (Nelson Mandela International Day) ಅಥವಾ ಮಂಡೇಲಾ ದಿನವನ್ನು (Mandela Day) ಆಚರಿಸಲು ಘೋಷಿಸಿತು. ಪ್ರತಿ ವರ್ಷ ಜುಲೈ 18ರಂದು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ (Nelson Mandela) ಅವರ ಜನ್ಮದಿನವನ್ನು ನೆಲ್ಸನ್ ಮಂಡೇಲಾ ದಿನವೆಂದು ಆಚರಿಸಲಾಗುತ್ತದೆ. ವರ್ಣಭೇದ ನೀತಿಯನ್ನು ವಿರೋಧಿಸುವ ನಾಯಕನ ಸಾಧನೆಗಳನ್ನು ಸ್ಮರಿಸಲು ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಪರಂಪರೆಯನ್ನು ಮುಂದುವರಿಸಲು ನೆಲ್ಸನ್ ಮಂಡೇಲಾ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ.
ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ ಎಂದು ಕೂಡ ಮಂಡೇಲಾ ದಿನವನ್ನು ಕರೆಯಲಾಗುತ್ತದೆ. ಮಂಡೇಲಾ ದಿನವು ಜನಾಂಗೀಯ ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ದಕ್ಷಿಣ ಆಫ್ರಿಕಾದ ನಾಯಕನ 67 ವರ್ಷಗಳ ಸುದೀರ್ಘ ಹೋರಾಟದ ಆಚರಣೆಯಾಗಿದೆ. ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ವರ್ಣೀಯ ಅಧ್ಯಕ್ಷರಾಗಿದ್ದರು. ಮಂಡೇಲಾ ಅವರ ಸಿದ್ಧಾಂತ ಮತ್ತು ದೃಷ್ಟಿಕೋನವನ್ನು ಅನುಸರಿಸುವ ಮೂಲಕ ಕಪ್ಪು ವರ್ಣೀಯ ಸಮುದಾಯಗಳಲ್ಲಿ ಬದಲಾವಣೆಯನ್ನು ಮಾಡಲು ಪ್ರತಿಯೊಬ್ಬರನ್ನು ಪ್ರೇರೇಪಿಸುವುದು ಈ ದಿನದ ಉದ್ದೇಶವಾಗಿದೆ.
ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನದ ಇತಿಹಾಸ: ವಿಶ್ವಸಂಸ್ಥೆಯು ಅಧಿಕೃತವಾಗಿ ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ದಿನ ಅಥವಾ ಮಂಡೇಲಾ ದಿನವನ್ನು ಆಚರಿಸಲು ನವೆಂಬರ್ 2009ರಲ್ಲಿ ನಿರ್ಧರಿಸಿತು. ಈ ದಿನದ ಮೊದಲ ಆಚರಣೆ 2010ರ ಜುಲೈ 18ರಂದು ನಡೆಯಿತು. ನೆಲ್ಸನ್ ಮಂಡೇಲಾ ಅವರಿಗೆ ನೊಬೆಲ್ ಪ್ರಶಸ್ತಿ ಸೇರಿದಂತೆ 250ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ.
ಇದನ್ನೂ ಓದಿ: ‘ಬೀಸ್ಟ್’ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಿನಿಮಾದಲ್ಲಿ ಶಿವರಾಜ್ಕುಮಾರ್-ರಜನಿಕಾಂತ್ ನಟನೆ?
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು 2014ರಲ್ಲಿ ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಮಾನವೀಯತೆಯ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರನ್ನು ಗೌರವಿಸಲು ಸ್ಥಾಪಿಸಿತು.
ನೆಲ್ಸನ್ ಮಂಡೇಲಾ ಬಗ್ಗೆ ಆಸಕ್ತಿದಾಯಕ ಸಂಗತಿಗಳು: * ನೆಲ್ಸನ್ ಮಂಡೇಲಾ ಅವರ ಮೂಲ ಹೆಸರು ರೋಲಿಹ್ಲಾಹ್ಲಾ. ಇದಕ್ಕೆ ಅವರ ಬುಡಕಟ್ಟು ಜನಾಂಗದಲ್ಲಿ ‘ಮರದ ಕೊಂಬೆಯನ್ನು ಎಳೆಯುವುದು’ ಎಂದರ್ಥವಿದೆ. ಅವರ ಪ್ರಾಥಮಿಕ ಶಾಲೆಯ ಮೊದಲ ದಿನ ಅವರ ಶಿಕ್ಷಕರು ಅವರಿಗೆ ‘ನೆಲ್ಸನ್’ ಎಂಬ ಹೆಸರಿಟ್ಟರು.
* ನೆಲ್ಸನ್ ಮಂಡೇಲಾ ಅವರ ಹೆಂಡತಿ ಗ್ರೇಸ್ ಮಾಚೆಲ್ ಮೊದಲು ಮೊಜಾಂಬಿಕ್ ಅಧ್ಯಕ್ಷ ಸಮೋರಾ ಮಾಚೆಲ್ ಅವರನ್ನು ವಿವಾಹವಾಗಿದ್ದರು. ಆದರೆ, ಗಂಡನ ಮರಣದ ನಂತರ ಅವರು ನೆಲ್ಸನ್ ಮಂಡೇಲಾ ಅವರನ್ನು ವಿವಾಹವಾದರು. ನೆಲ್ಸನ್ ಮಂಡೇಲಾ ಅವರ 80ನೇ ಹುಟ್ಟುಹಬ್ಬದ ದಿನದಂದೇ ಗ್ರೇಸ್ ಮಾಚೆಲ್ ಅವರನ್ನು ಮದುವೆಯಾದರು.
* ನೆಲ್ಸನ್ ಮಂಡೇಲಾ ಬಾಕ್ಸಿಂಗ್‌ನಲ್ಲಿ ಬಹಳ ಆಸಕ್ತಿ ಹೊಂದಿದ್ದರು.
* ನೆಲ್ಸನ್ ಸ್ಪೈಕ್ ಲೀ ಅವರ 1992ರ ಬಯೋಪಿಕ್ ಮಾಲ್ಕಮ್ ಎಕ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಅವರು ಅದರಲ್ಲಿ ಅತಿಥಿ ಪಾತ್ರದಲ್ಲಿ ಶಿಕ್ಷಕನಾಗಿ ಕಾಣಿಸಿಕೊಂಡಿದ್ದರು.
* 1952ರಲ್ಲಿ ನೆಲ್ಸನ್ ಮಂಡೇಲಾ ಅವರು ವಿಟ್ವಾಟರ್‌ರಾಂಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ ನಂತರ ಜೋಹಾನ್ಸ್‌ಬರ್ಗ್‌ನಲ್ಲಿ ರಾಷ್ಟ್ರದ ಮೊದಲ ಕಪ್ಪು ಕಾನೂನು ಸಂಸ್ಥೆಯನ್ನು ಸ್ಥಾಪಿಸಿದರು.
ನೆಲ್ಸನ್ ಮಂಡೇಲಾ ಅವರ ಸ್ಪೂರ್ತಿದಾಯಕ ಕೋಟ್ಗಳು: 1. ಶಿಕ್ಷಣವು ನೀವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ.
2. ವಿಶ್ವದಲ್ಲಿ ವಾಸಿಸುವ ಎಲ್ಲರಿಗೂ ಉತ್ತಮವಾದ ಜಗತ್ತನ್ನು ರೂಪಿಸುವುದು ನಿಮ್ಮ ಕೈಯಲ್ಲಿದೆ.
3. ಬಡತನವನ್ನು ಹೋಗಲಾಡಿಸುವುದು ದಾನದ ಕಾರ್ಯವಲ್ಲ, ಅದು ಒಂದು ನ್ಯಾಯದ ಕಾರ್ಯವಾಗಿದೆ.
Published On - 10:40 am, Mon, 18 July 22








