ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ, ತಿರುಚುವುದು ಮಾತ್ರ ಗೊತ್ತು: ಮಾಜಿ ಸಿಎಂ ಸಿದ್ದರಾಮಯ್ಯ

ಆಧುನಿಕ ಭಾರತ ಕಟ್ಟಲು ಪ್ರಯತ್ನಿಸಿದವರು ನೆಹರು. ನೆಹರು ದೇಶ ಇಬ್ಬಾಗಕ್ಕೆ ಕಾರಣರಾದ್ರು ಎಂಬ ಆರೋಪ ಮಾಡಲಾಗಿದೆ. ಬಿಜೆಪಿಯವರಿಗೆ ನೆಹರು ಇತಿಹಾಸ ಗೊತ್ತಿದ್ಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ, ತಿರುಚುವುದು ಮಾತ್ರ ಗೊತ್ತು: ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 15, 2022 | 9:43 AM

ಬೆಂಗಳೂರು: ದೇಶದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇದು ಆರ್​ಎಸ್​ಎಸ್​​ನ (RSS)​ ಹಿಡನ್ ಅಜೆಂಡಾ ಅಂತ ಗೊತ್ತಾಗಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರು ಜೈಲು ವಾಸ ಅನುಭವಿಸಿದ್ರು. ಸಿಎಂ ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರಾ? ಈಶ್ವರಪ್ಪ, ರವಿಕುಮಾರ್ ಭಾಗಿಯಾಗಿದ್ರಾ? ಇವರೇನಾದ್ರೂ ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ ಎಂದು ಪ್ರಶ್ನಿಸಿದರು. ಇವರಿಗೆ ಇತಿಹಾಸ ಗೊತ್ತಿಲ್ಲ, ತಿರುಚುವುದು ಮಾತ್ರ ಗೊತ್ತು. ದೇಶದ ಮೊದಲ ಪ್ರಧಾನಿ ನೆಹರುಗೆ ಅವಮಾನ ಮಾಡಲಾಗಿದೆ. ಇದು ನೆಹರುಗೆ ಮಾತ್ರ ಅಲ್ಲ ದೇಶಕ್ಕೆ ಮಾಡಿದ ಅವಮಾನ. ಬಿಜೆಪಿಯವರು ಅವರಿಗೇ ಅವರು ಮಾಡಿಕೊಂಡ ಅಪಮಾನ. ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲ್ಲ ಅಂದ್ರು. ಹೀಗಂತ ಸಾವರ್ಕರ್​ ಬ್ರಿಟಿಷರಿಗೆ ಮುಚ್ಚಳಿಕೆ ಬರೆದುಕೊಟ್ಟರು. ಇಂತಹವರಿಗೆ ಬಿಜೆಪಿ ಮರ್ಯಾದೆ ನೀಡುತ್ತೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ: ಈದ್ಗಾ ಮೈದಾನದಲ್ಲಿ ನಡೀತು ಹೈಡ್ರಾಮಾ!

ಬಿಜೆಪಿಗೆ ನೆಹರು ಇತಿಹಾಸ ಗೊತ್ತಿದ್ಯಾ?-ಸಿದ್ದರಾಮಯ್ಯ

ಆಧುನಿಕ ಭಾರತ ಕಟ್ಟಲು ಪ್ರಯತ್ನಿಸಿದವರು ನೆಹರು. ನೆಹರು ದೇಶ ಇಬ್ಬಾಗಕ್ಕೆ ಕಾರಣರಾದ್ರು ಎಂಬ ಆರೋಪ ಮಾಡಲಾಗಿದೆ. ಬಿಜೆಪಿಯವರಿಗೆ ನೆಹರು ಇತಿಹಾಸ ಗೊತ್ತಿದ್ಯಾ? ಮಹಮದ್ ಅಲಿ ಜಿನ್ನಾ, ಮೌಂಟ್ ಬ್ಯಾಟನ್ ದೇಶ ಇಬ್ಬಾಗ ಮಾಡಿದವರು. ಜಿನ್ನಾ ಮುಸ್ಲೀಂ ಲೀಗ್ ಮಾಡಿಕೊಂಡು ಪ್ರತ್ಯೇಕ ದೇಶ ಕೇಳಿದರು. ಮೌಂಟ್ ಬ್ಯಾಟನ್ ಅದಕ್ಕೆ ಅಪ್ರೂವ್ ಮಾಡಿದರು. ನೆಹರು ದೇಶ ಒಡೆಯಲು ಹೇಗೆ ಕಾರಣ ಆಗ್ತಾರೆ ಎಂದು ಪ್ರಶ್ನಿಸಿದರು. ಜನರಿಗೆ ತಪ್ಪು ಮಾಹಿತಿ ಕೊಡಬಾರದು. ಇತಿಹಾಸವನ್ನ ತಿಳಿದುಕೊಳ್ಳಿ ಮೊದಲು. ಆರ್​ಎಸ್​ಎಸ್ ಹಿಡನ್ ಅಜೆಂಡಾ ಇದರಲ್ಲಿದೆ. ಬೇಕೆಂದೇ ಅವರು ನೆಹರು ಚಿತ್ರ ಹಾಕಿಲ್ಲ ಅಂತ ಹೇಳ್ತಾರಲ್ಲ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಬಿಜೆಪಿಯ ನೆಹರೂ ಬಿಟ್ಟ ಜಾಹೀರಾತಿಗೆ ಕಾಂಗ್ರೆಸ್ ಕೌಂಟರ್

ಬಿಜೆಪಿಯ ನೆಹರೂ ಬಿಟ್ಟ ಜಾಹೀರಾತಿಗೆ ಕಾಂಗ್ರೆಸ್ ಕೌಂಟರ್ ನೀಡಿದ್ದು, ಧ್ವಜಾರೋಹಣ ವೇದಿಕೆಯಲ್ಲಿ ಪಂಡಿತ್ ನೆಹರೂ ಸ್ಮರಣೆ ಮಾಡಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಧ್ವಜಾರೋಹಣ ನೆರವೇರಿಸಿದ್ದ ಫೋಟೋ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ದೇಶದ ಕೆಂಪು ಕೋಟೆ ಮೇಲೆ ಮೊದಲ ಧ್ವಜ ಹಾರಿಸಿದ್ದ ನೆಹರೂ ಫೋಟೋ ಬಳಕೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ