ರದ್ದಾಗಿದ್ದ ಜನೋತ್ಸವ ಸಮಾವೇಶವನ್ನು ಆಗಸ್ಟ್ 28ರಂದು ನಡೆಸಲು ಬಿಜೆಪಿ ನಿರ್ಧಾರ
ಜುಲೈ 28ರಂದು ನಿಗದಿಯಾಗಿ ರದ್ದುಗೊಂಡಿದ್ದ ಜನೋತ್ಸವ ಸಮಾವೇಶವನ್ನು ಆಗಸ್ಟ್ 28ರಂದು ಬಿಜೆಪಿ ನಡೆಸಲು ತೀರ್ಮಾನ ಕೈಗೊಂಡಿದೆ.
ಬೆಂಗಳೂರು: ಜುಲೈ 28ರಂದು ನಿಗದಿಯಾಗಿ ರದ್ದುಗೊಂಡಿದ್ದ ಜನೋತ್ಸವ (Janostav) ಸಮಾವೇಶವನ್ನು ಆಗಸ್ಟ್ 28ರಂದು ಬಿಜೆಪಿ (BJP) ನಡೆಸಲು ತೀರ್ಮಾನ ಕೈಗೊಂಡಿದೆ. ಈ ಜನೋತ್ಸವ ಸಮಾವೇಶವು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ತುಮಕೂರು ಜಿಲ್ಲೆಯ 3-4 ತಾಲೂಕಿಗೆ ಸೀಮಿತವಾಗಿ ಸಮಾವೇಶ ಮಾಡಲಾಗುತ್ತದೆ.
ಹಾಗೇ ರಾಜ್ಯದ ವಿವಿಧ ಕಡೆ 4-5 ಸಮಾವೇಶ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ನಂತರ ರಾಜ್ಯಮಟ್ಟದಲ್ಲಿ ಒಂದು ದೊಡ್ಡ ಸಮಾವೇಶ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ಭೇಟಿಯಾಗಿದ್ದಾರೆ. ಈ ವೇಳೆ ಆಗಸ್ಟ್ 28ರಂದು ನಡೆಯುವ ಜನೋತ್ಸವ ಸಮಾವೇಶಕ್ಕೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದಾರೆ.
Published On - 4:57 pm, Fri, 12 August 22