AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ 13 ವಿಶ್ವ ಅಂಗಾಂಗ ದಾನ ದಿನ: ಬೆಂಗಳೂರಲ್ಲಿ 5 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಾಣ – ಆರೋಗ್ಯ ಸಚಿವ ಸುಧಾಕರ್

ನನಗೆ ಕಾಂಗ್ರೆಸ್ ನಲ್ಲಿದ್ದಾಗ ಟಿಕೆಟ್ ಕೊಡಿಸಿದ್ದು ಪರಮೇಶ್ವರ್ ಮತ್ತು ಎಸ್.ಎಂ. ಕೃಷ್ಣ ಅವರುಗಳು. ಸುಮ್ಮನೆ ಸಿದ್ದರಾಮಯ್ಯ ಫಾಲ್ಸ್ ಕ್ಲೈಮ್ ಮಾಡೋದು ಬೇಡ. ಸಿದ್ದರಾಮಯ್ಯ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಸುಧಾಕರ್‌ ಗುಡುಗಿದರು.

ಆ 13 ವಿಶ್ವ ಅಂಗಾಂಗ ದಾನ ದಿನ: ಬೆಂಗಳೂರಲ್ಲಿ 5 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಾಣ - ಆರೋಗ್ಯ ಸಚಿವ ಸುಧಾಕರ್
ಸಚಿವ ಡಾ. ಕೆ ಸುಧಾಕರ್
TV9 Web
| Updated By: ಸಾಧು ಶ್ರೀನಾಥ್​|

Updated on:Aug 12, 2022 | 5:49 PM

Share

ಬೆಂಗಳೂರು: ನಾಳೆ ಶನಿವಾರ (ಆಗಸ್ಟ್ 13) ವಿಶ್ವ ಅಂಗಾಂಗ ದಾನ ದಿನ (World organ donation day) ಹಿನ್ನೆಲೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮಾನವ ಸರಪಳಿ ನಿರ್ಮಾಣ ಏರ್ಪಡಲಿದೆ. ಮೇಕ್ರಿ ವೃತ್ತದಿಂದ ಫ್ರೀಡಂಪಾರ್ಕ್​ವರೆಗೂ ಮಾನವ ಸರಪಳಿ (human chain) ನಡೆಯಲಿದೆ. ಸುಮಾರ 5 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಾಣವಾಗಲಿದೆ ಎಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ಸುಧಾಕರ್ (Dr K Sudhakar) ತಿಳಿಸಿದರು.

ಅಂಗಾಂಗ ದಾನ ಅಭಿಯಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ನಾನು ಮತ್ತು ಸಿಎಂ ಬೊಮ್ಮಾಯಿ ತೆರೆದ ವಾಹನದಲ್ಲಿ ಬರುತ್ತೇವೆ. ಸರ್ವಶ್ರೇಷ್ಠ ದಾನಗಳಲ್ಲಿ ಅಂಗಾಂಗಗಳ ದಾನವೂ ಒಂದು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​​ ಕೀ ಬಾತ್​ನಲ್ಲಿ ಪ್ರಸ್ತಾಪಿಸಿದ್ದಾರೆ. ಪುನೀತ್​ ರಾಜ್​ಕುಮಾರ್ ಕಣ್ಣು ದಾನದಿಂದ ಐವರಿಗೆ ದೃಷ್ಟಿ ಸಿಕ್ಕಿದೆ. ಸಂಚಾರಿ ವಿಜಯ್​ ಅಂಗಾಂಗಗಳ ದಾನದಿಂದ ಐವರಿಗೆ ಅನುಕೂಲವಾಗಿದೆ. ನಮ್ಮಲ್ಲಿ ಧಾರ್ಮಿಕ ನಂಬಿಕೆಗಳಿಂದ ಅಂಗಾಂಗ ದಾನ ಮಾಡುತ್ತಿಲ್ಲ. ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಎಂದು ಸಚಿವ ಸುಧಾಕರ್ ಇದೇ ಸಂದರ್ಭದಲ್ಲಿ ಕರೆ ನೀಡಿದರು.

ಸಿದ್ದರಾಮಯ್ಯ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ

ಇನ್ನು, ಪ್ರಚಲಿತ ರಾಜಕೀಯದ ಬಗ್ಗೆ ಮಾತನಾಡಿದ ಸಚಿವ ಡಾ. ಸುಧಾಕರ್‌ ಅವರು ಸಿದ್ದರಾಮಯ್ಯ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅವರ ಕಥೆ ನನಗೂ ಗೊತ್ತಿದೆ-ನನ್ನ ಕಥೆ ಅವರಿಗೂ ಗೊತ್ತಿದೆ. ಅದು‌ ನಮ್ಮಿಬ್ಬರಲ್ಲೇ ಇದ್ದರೆ ಒಳ್ಳೆಯದು ಎಂದು ಡಾ. ಕೆ. ಸುಧಾಕರ್‌ ಮಾರ್ಮಿಕವಾಗಿ ಹೇಳಿದರು.

ಸಿದ್ಧರಾಮಯ್ಯ ಹಿಂದೆ ಗುರುಗಳಾಗಿದ್ದವರು. ನಾನು ಸುಮ್ಮನೆ ಇರಬೇಕು ಅಂತಾ ಹೇಳಿದ್ದಾರೆ. ನನಗೆ ಕಾಂಗ್ರೆಸ್ ನಲ್ಲಿದ್ದಾಗ ಟಿಕೆಟ್ ಕೊಡಿಸಿದ್ದು ಪರಮೇಶ್ವರ್ ಮತ್ತು ಎಸ್.ಎಂ. ಕೃಷ್ಣ ಅವರುಗಳು. ಸುಮ್ಮನೆ ಸಿದ್ದರಾಮಯ್ಯ ಫಾಲ್ಸ್ ಕ್ಲೈಮ್ ಮಾಡೋದು ಬೇಡ. ಸಿದ್ದರಾಮಯ್ಯ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಸುಧಾಕರ್‌ ಗುಡುಗಿದರು.

Also Read:

ಭಾರತೀಯ ಗ್ರಾಹಕರಿಗೆ 5ಜಿ ವಲಯದಲ್ಲಿ ಕ್ರಾಂತಿಕಾರಕ ಸೇವೆ ಒದಗಿಸುವ ನಿಟ್ಟಿನಲ್ಲಿ 19,867.8 ಮೆಗಾಹರ್ಟ್ಸ್‌ ಸ್ಪೆಕ್ಟ್ರಮ್‌ ಖರೀದಿಸಿದ ಏರ್‌ಟೆಲ್‌

Published On - 5:47 pm, Fri, 12 August 22