Bigg Boss Kannada 8 | ಬಿಗ್‌ಬಾಸ್‌ಗೆ ಹೋಗುವುದಕ್ಕೆ ಆಸೆ.. ವಿಶೇಷ ಆಹ್ವಾನಿತನಾಗಿ ಕರೆದರೆ 3-4 ದಿನಕ್ಕೆ ಹೋಗುವೆ: ಹೆಚ್.ವಿಶ್ವನಾಥ್
ಬಿಗ್‌ಬಾಸ್‌ಗೆ ಹೋಗುವುದಕ್ಕೆ ನನಗೆ ಆಸೆಯಿತ್ತು. ವಿಶೇಷ ಆಹ್ವಾನಿತರಾಗಿ ಕರೆದರೆ 3-4 ದಿನಕ್ಕೆ ಹೋಗುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಬಿಗ್ ಬಾಸ್ ಮನೆಗೆ ಹೋಗಲು ಇರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ ಸೀಸನ್ 6ಗೆ ನನಗೆ ಆಹ್ವಾನ ನೀಡಿದ್ದರು. ಬಿಗ್‌ಬಾಸ್‌ಗೆ ಹೋಗುವುದಕ್ಕೆ ನಾನು ಒಪ್ಪಿಕೊಂಡಿದ್ದೆ. ಆದ್ರೆ ಆಗ ಆರೋಗ್ಯ ಸಮಸ್ಯೆಯಿಂದ ಹೋಗಲು ಆಗಿರಲಿಲ್ಲ. ಈಗ ಕೆಲವು ಸ್ನೇಹಿತರು ಹೋಗ್ತೀರಾ ಅಂತಾ ಹೇಳ್ತಿದ್ದಾರೆ. ಬಿಗ್‌ಬಾಸ್‌ಗೆ ಹೋಗುವುದಕ್ಕೆ ನನಗೆ ಆಸೆಯಿತ್ತು. ವಿಶೇಷ ಆಹ್ವಾನಿತರಾಗಿ ಕರೆದರೆ 3-4 ದಿನಕ್ಕೆ ಹೋಗುವೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಬಿಗ್ ಬಾಸ್ ಮನೆಗೆ ಹೋಗಲು ಇರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಚುನಾವಣೆಗಳು ಬಂದಿವೆ, ಅಲ್ಲಿ ಇಲ್ಲಿ ಜವಾಬ್ದಾರಿ ಹಾಕ್ತಾರೆ, ಹಾಗಾಗಿ ಹೋಗಲು ಸ್ವಲ್ಪ ಕಷ್ಟ ಆಗಬಹುದು. ಅವರು ವಿಶೇಷ ಆಹ್ವಾನಿತರಾಗಿ ಬನ್ನಿ ಅಂತಾ ಕರೆದರೆ ಮೂರ್ನಾಲ್ಕು ದಿನಕ್ಕೆ ಹೋಗಬಹುದು. ದೇಶದಲ್ಲಿ ಜನರಿಗೆ ಎಲ್ಲಾ ಅರ್ಥ ಆಗುತ್ತಿದ್ದರೂ ಜನರಿಗೆ ರಾಜಕಾರಣ ಅರ್ಥ ಆಗುತ್ತಿಲ್ಲ. ಆ ಮನೆಯಲ್ಲಿ ಯುವಕರು, ಸಿನಿಮಾದವರು, ಗಂಡು ಮಕ್ಕಳು, ಹೆಣ್ಣು ಮಕ್ಕಳು, ಸಿನಿಮಾದವರು ಇದ್ದಾರೆ. ಅಲ್ಲಿ ನಾನು ರಾಜಕಾರಣದ ಸ್ಪಾರ್ಕ್ ಹಚ್ಚಬಹುದು. ಅವಕಾಶ ಸಿಕ್ಕಿದರೆ ಖಂಡಿತ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂದು ಹೆಚ್.ವಿಶ್ವನಾಥ್ ಹೇಳಿದ್ರು.
ನನ್ನ ಶಾಪ ವಿಮೋಚನೆ ಮಾಡಿ ಇನ್ನು ಮಾತು ಮುಂದುವೆರೆಸಿದ ಅವರು ವಿಧಾನಸಭೆಯಿಂದ ನಡೆಯುವ ಬೈಎಲೆಕ್ಷನ್ಗೆ ಸ್ಪರ್ಧೆ ಸಂಬಂಧ ಮಾತನಾಡಿದ್ದಾರೆ. ಈ ಬಗ್ಗೆ ದೆಹಲಿ, ರಾಜ್ಯದ ವರಿಷ್ಠರು, ಸಿಎಂ BSY ಗಮನಕ್ಕೆ ತಂದಿದ್ದೇನೆ. MLCಯಾಗಿ ನನಗೆ ಇನ್ನೂ ಐದೂವರೆ ವರ್ಷದ ಅವಧಿ ಇದೆ. ನನಗೆ ಸುಪ್ರೀಂಕೋರ್ಟ್ ಶಾಪ ವಿಮೋಚನೆ ಆಗಬೇಕಾದರೆ ನಾನು ಚುನಾವಣೆ ಮೂಲಕವೇ ಆಯ್ಕೆ ಆಗಿ ಬರಬೇಕಾಗುತ್ತೆ. ಧರ್ಮೇಗೌಡರಿಂದ ಖಾಲಿಯಾದ ಸ್ಥಾನದ ಮೂಲಕ ಆಯ್ಕೆಯಾಗಿ ವಿಧಾನಪರಿಷತ್ಗೆ ಬಂದರೆ ಶಾಪ ವಿಮೋಚನೆ ಆಗುತ್ತದೆ.
ಸರ್ಕಾರದಲ್ಲಿ ಕೂಡ ಜವಾಬ್ದಾರಿ ಕೊಟ್ಟರೆ ನಿರ್ವಹಿಸಬಲ್ಲೆ. ನನಗೆ ಒಂದು ಜವಾಬ್ದಾರಿ ಕೊಡಿ, ಶಾಪ ವಿಮೋಚನೆ ಮಾಡಿ. ನನಗೆ ಕೇವಲ ಮೂರೂವರೆ ವರ್ಷ ಸಾಕು. ಬಳಿಕ ಐದೂವರೆ ವರ್ಷ ಯಾರಿಗೆ ಬೇಕಾದರೂ ಕೊಡಿ. ಈಗ ಆಗಿರುವ ವ್ಯತ್ಯಾಸಗಳನ್ನು ದಯವಿಟ್ಟು ಸರಿ ಮಾಡಿ. ಸರ್ಕಾರದಲ್ಲಿ ಕೆಲಸ ಮಾಡಬಲ್ಲೆ, ಐ ಕ್ಯಾನ್ ಡೂ ವಂಡರ್ಸ್ ಎಂದು ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: Siddaramaiah Donald Trump ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್: ಹೆಚ್.ವಿಶ್ವನಾಥ್ ವಾಗ್ದಾಳಿ
Published On - 3:53 pm, Mon, 1 March 21