ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್: ಒಂದೇ ಟಿಕೆಟ್ನಲ್ಲಿ ಗುಂಪು ಪ್ರಯಾಣಕ್ಕೆ ಅವಕಾಶ
ಸ್ನೇಹ ಬಳಗವಾಗಿ ಅಥವಾ ಕುಟುಂಬದೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುವವರ ಅನುಕೂಲಕ್ಕಾಗಿ ಒಂದು ಟಿಕೆಟ್ ಪಡೆದು ರೈಲಿನಲ್ಲಿ ಪ್ರಯಾಣಿಸುವ ಅವಕಾಶವನ್ನು ಬಿಎಂಆರ್ಸಿಎಲ್ ಶೀಘ್ರದಲ್ಲೇ ಕಲ್ಪಿಸಲಿದೆ.
ಬೆಂಗಳೂರು: ಸದ್ಯದ ವ್ಯವಸ್ಥೆಯಲ್ಲಿ ನಮ್ಮ ಮೆಟ್ರೋ (Namma Metro) ರೈಲಿನಲ್ಲಿ ಪ್ರಯಾಣಿಸಬೇಕಾದರೆ ಒಬ್ಬೊಬ್ಬರು ಒಂದೊಂದು ಟಿಕೆಟ್ ಪಡೆದು ಪ್ರಯಾಣಿಸಬೇಕು. ನೀವು ಕುಟುಂಬ ಸಹಿತ ಪ್ರಯಾಣ ಮಾಡುತ್ತಿದ್ದರೂ ಪ್ರತ್ಯೇಕ ಟಿಕೆಟ್ ಮಾಡಿ ಪ್ರಯಾಣಿಸಬೇಕು. ಇದರಿಂದಾಗಿ ಟಿಕೆಟ್ ಕೌಂಟರ್ನಲ್ಲಿ ಹೆಚ್ಚು ಹೊತ್ತು ಕಾಯಬೇಕಾಗುವ ಸ್ಥಿತಿ ಇದೆ. ಆದರೆ ಇನ್ನು ಮುಂದೆ ಇಂತಹ ಪರಿಸ್ಥಿತಿ ಇರುವುದಿಲ್ಲ. ಏಕೆಂದರೆ, ಬೆಂಗಳೂರು ನಮ್ಮ ಮೆಟ್ರೋ ನಿಗಮ (BMRCL), ಒಂದೇ ಟಿಕೆಟ್ನಲ್ಲಿ ಒಂದಕ್ಕಿಂತ ಹೆಚ್ಚು ಹಾಗೂ ಗರಿಷ್ಠ ಆರು ಮಂದಿ ಪ್ರಯಾಣಿಸುವ ಅವಕಾಶವನ್ನು ಶೀಘ್ರದಲ್ಲೇ ಕಲ್ಪಿಸುತ್ತಿದೆ. ಇದು ಗುಂಪಾಗಿ ಪ್ರಯಾಣಿಸುವ, ವಿಶೇಷವಾಗಿ ಕುಟುಂಬವಾಗಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: Bangalore G20 Meet: ಬೆಂಗಳೂರಿನಲ್ಲಿ ಡಿಸೆಂಬರ್ನಲ್ಲಿ ಜಿ20 ಸಭೆ; ವರದಿ
ಒಂದು ಟಿಕೆಟ್ ಮೂಲಕ ಗುಂಪು ಪ್ರಯಾಣದ ಅವಕಾಶವು ಜನವರಿ 15ರ ಒಳಗಾಗಿ ಆರಂಭಿಸಲಾಗುವುದು. ಈ ಕ್ರಮವು ಅನೇಕರ ಸಮಯವನ್ನು ಉಳಿಸಲಿದೆ. ಪ್ರಸ್ತುತ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ಇನ್ನೂ ಕೆಲವು ವಾರಗಳ ಕಾಲ ಮುಂದುವರಿಯಲಿದೆ. ನವೆಂಬರ್ 1 ರಂದು ಪ್ರಾರಂಭಿಸಲಾದ ಕ್ಯೂಆರ್ ಟಿಕೆಟ್ ವ್ಯವಸ್ಥೆಯು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಈವರೆಗೆ ಯಾವುದೇ ದೋಷಗಳು ಅಥವಾ ದೂರುಗಳು ಬಂದಿಲ್ಲ. ಆರಂಭದ ದಿನ 1,800 ಪ್ರಯಾಣಿಕರು ಕ್ಯೂಆರ್ ಟಿಕೆಟ್ ಬಳಸಿದ್ದು, ನವೆಂಬರ್ 20 ರಂದು 12,787 ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 1,35,564 ಕ್ಯೂಆರ್ ಟಿಕೆಟ್‌ಗಳನ್ನು ಬಳಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮತ್ತು ಡಿಪೋಗಳ ಮುಖ್ಯ ಇಂಜಿನಿಯರ್ ಬಿ.ಎಲ್ ಯಶವಂತ ಚವಾಣ್ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: Bangalore University: ಭಾರತದ ಟಾಪ್ 7 ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ಯುನಿವರ್ಸಿಟಿಗೂ ಸ್ಥಾನ
ವೈಟ್‌ಫೀಲ್ಡ್ ಲೈನ್ 2ನೇ ಹಂತದಲ್ಲಿ ಪರೀಕ್ಷೆ ಮತ್ತು ಕಾರ್ಯಾರಂಭ ನಡೆಯುತ್ತಿದ್ದು, ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಿಲ್ದಾಣಗಳ ನಡುವೆ ಈ ಕಾರ್ಯ ನಡೆಯುತ್ತಿದೆ. ಎಂದು ಹಿರಿಯ ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ. “ಪ್ರಸ್ತುತ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿವೆ. ಈ ಪರೀಕ್ಷೆಗಳಲ್ಲಿ ಸ್ಥಿರ ಪರೀಕ್ಷೆಗಳು ಮತ್ತು ನಂತರ ಕ್ರಿಯಾತ್ಮಕ ಪರೀಕ್ಷೆಗಳು ಒಳಗೊಂಡಿವೆ ಎಂದು ಅವರು ಹೇಳಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Thu, 24 November 22